ಮುಸ್ಲಿಂಮರಿಗಷ್ಟೇ ಮೀಸಲಾತಿ ಹೆಚ್ಚಿಸುತ್ತಿದ್ದಾರೆ, ಮುಸ್ಲಿಂ ರಾಜ್ಯ ಮಾಡಲು ತಯಾರಿ ನಡೆಸಿದ್ದಾರೆ: ಯತ್ನಾಳ್

Political News: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಮಾತನಾಡುವ ಯಾವುದೇ ಅವಕಾಶವನ್ನು ಬಿಡದ ಬಿಜೆಪಿ ಉಚ್ಛಾಟಿತ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಈ ಬಾರಿಯೂ ಅಪ್ಪ ಮಗನ ವಿರುದ್ಧ ಮುಗಿಬಿದ್ದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಅವರು ಕರ್ನಾಟಕದಲ್ಲಿ ಬಿಜೆಪಿ ಐಸಿಯುನಲ್ಲಿ ಇದೆ. ರಾಜ್ಯ ಸರ್ಕಾರದ ತಪ್ಪು ಕ್ರಮಗಳನ್ನು ಖಂಡಿಸಿ, ಸರಿಯಾಗಿ ಪ್ರತಿಭಟನೆ ಮಾಡುವುದಿಲ್ಲ. ಮಿತ್ರ ಪಕ್ಷವಾಗಿರುವ ಜೆಡಿಎಸ್‌ನ ನಾಯಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಜತೆ ಸೇರಿ, ನಿರ್ಧಾರ ಮಾಡುವುದಿಲ್ಲ. ತಾವೇ ನಿರ್ಧರಿಸಿ, ಕ್ರಮಕ್ಕೆ ಮುಂದಾಗುತ್ತಾರೆ. ಹೀಗೆ ತಾವು ತಾವೇ ತಮ್ಮ ಮನಸ್ಸಿಗೆ ಬಂದ ರೀತಿ ಇರುವುದರಿಂದ ಕರ್ನಾಟಕದಲ್ಲಿ ಬಿಜೆಪಿ ಪರಿಸ್ಥಿತಿ ಸರಿ ಇಲ್ಲ ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.

ಬಿಜೆಪಿಗರಲ್ಲಿ ಎಷ್ಟ ೋ ಜನರಿಗೆ ವಿಜಯೇಂದ್ರ ಹಟ ಾವ್ ಎನ್ನುವ ಬೇಡಿಕೆ ಇದೆ. ಆದರೆ ಅವರ್ಯಾರು ಅದನ್ನು ಬಾಯಿ ಬಿಟ ್ಟು ಹೇಳುವುದಿಲ್ಲ. ಇನ್ನಂದು ಕಡೆ ಕಾರ್ಯಕರ್ತರು ಹಿಂದುತ್ವಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಅವರ ವಿರುದ್ಧ ಕೇಸ್ ಹಾಕುತ್ತಿದ್ದಾರೆ ಎಂದು ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಯತ್ನಾಳ್, ಅಲ್ಪಸಂಖ್ಯಾತರ ಹೆಸರಿನಿಂದ ಶೇಖಡಾ 5ರಷ್ಟ ು ಮೀಸಲಾತಿ ಹೆಚ್ಚಿಸಿದ್ದಾರೆ. 10 ಇದ್ದಿದ್ದು 15 ಪರ್ಸೆಂಟ ್ ಮಾಡಿದ್ದಾರೆ.  80ರಷ್ಟ ು ಮೀಸಲಾತಿ ಮುಸ್ಲಿಂರಿಗೆ ನೀಡಿದರೆ, ಇನ್ನುಳಿದ 10 ಪರ್ಸೆಂಟ್ ಕ್ರಿಶ್ಚಿಯನ್ನರಿಗಂತೆ ಉಳಿದಿದ್ದರಲ್ಲಿ ಹಿಂದೂಗಳು, ಜೈನರು, ಬುದ್ಧರು ಹೀಗೆ ಹಂಚಿಕೆ ಮಾಡಿದ್ದಾರೆ. ಇದನ್ನೆಲ್ಲ ಮಾಡಲು ಇವರ್ಯಾರು ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.

ಕರ್ನಾಟಕವನ್ನು ಪಶ್ಚಿಮ ಬಂಗಾಳ ಮತ್ತು ಕೇರಳ ಮಾದರಿಯಲ್ಲಿ ಮುಸ್ಲಿಂ ರಾಜ್ಯ ಮಾಡಲು ಕಾಂಗ್ರೆಸ್ಸಿಗರು ಪ್ಲಾನ್ ಮಾಡಿದ್ದಾರೆ. ಸಿದ್ದರಾಮಯ್ಯ ಮತ್‌ತು ಡಿಕೆಶಿ ಮುಸ್ಲಿಂರಿಗೆ ಬಿಟ್ಟು ಇನ್ಯಾರಿಗೂ ಮೀಸಲಾತಿ ಹೆಚ್ಚಿಸುತ್ತಿಲ್ಲ. ಓಟಿಗಾಗಿ ಹೀಗೆ ಮಾಡುತ್ತಿರುವ ಇವರಿಗೆ ಹಿಂದೂ ಓಟ್ ಹಾಕಲಿಲ್ಲವಾ ಅಂತಾ ಯತ್ನಾಳ್ ಪ್ರಶ್ನಿಸಿದ್ದಾರೆ.

About The Author