ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ರೈತರನ್ನು ಉಳಿಸುವ ಶಕ್ತಿ, ಯೋಗ್ಯತೆ ಇಲ್ಲ: ನಿಖಿಲ್ ಕುಮಾರ್

Sindhanooru: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್ ಮತ್ತು ಜೆಡಿಎಸ್ ಕಾರ್ಯಕರ್ತರೆಲ್ಲ ಸೇರಿ, ತುಂಗಭದ್ರಾ ಆಣೆಕಟ್ಟಿನಿಂದ‌ 2 ನೇ ಬೆಳೆಗೆ ನೀರಿಗಾಗಿ ಆಗ್ರಹಿಸಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಯಚೂರು ಜಿಲ್ಲೆಯ ಸಿಂಧನೂರಿನ ಕೋಟೆ ಈರಣ್ಣಸ್ವಾಮಿ ದೇವಸ್ಥಾನದಿಂದ‌ ಎಪಿಎಂಸಿ ಆವರಣದ ವರೆಗೆ ಪಕ್ಷದ ವತಿಯಿಂದ‌ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ, ಅನ್ನದಾತರ ಪರವಾಗಿ ಕಾಂಗ್ರೆಸ್ ವಿರುದ್ಧ ಜಾತಾ ಹಮ್ಮಿಕ“ಂಡಿದ್ದರು.

ತುಂಗಭದ್ರಾ ಆಣೆಕಟ್ಟಿಗೆ ಒಳಪಡುವ ರಾಯಚೂರು, ಬಳ್ಳಾರಿ,ಕೊಪ್ಪಳ ಹಾಗೂ ವಿಜಯನಗರ ರೈತರೊಂದಿಗೆ 2.5 ಕಿ.ಮೀ ಪಾದಯಾತ್ರೆ ಮೂಲಕ ಸಿಂಧನೂರಿನ ಎಪಿಎಂಸಿ ಆವರಣಕ್ಕೆ ತೆರಳಿ, ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡ ವೇದಿಕೆ ಕಾರ್ಯಕ್ರಮವನ್ನು ನಿಖಿಲ್ ಕುಮಾರ್ ಉದ್ಘಾಟಿಸಿದರು. ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ ಅವರು ಸೇರಿದಂತೆ ಹಾಲಿ,ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರೆಲ್ಲ ಈ ವೇಳೆ ಹಾಜರಿದ್ದರು.

ಈ ವೇಳೆ ಮಾತನಾಡಿರುವ ನಿಖಿಲ್ ಕುಮಾರ್, ರೈತರಿಗೆ ಬೇಕಿರುವುದು ನೀರು ಮಾತ್ರ! ಗ್ಯಾರಂಟಿಗಳಲ್ಲ, ಅವರಿಗೆ ಬೇಕಿರುವುದು ಸ್ವಾಭಿಮಾನದ ಗ್ಯಾರಂಟಿ, ಬೆಳೆಗೆ ನೀರಿನ ಗ್ಯಾರಂಟಿ. ಅವರ ಬೆಳೆಗೆ ಸರ್ಕಾರ ನೀರು ನೀಡಿದರೆ ನಿಮ್ಮ 2000 ಕ್ಕೆ ಮತ್ತೆ 2000 ಸೇರಿಸಿ ಅವರೇ ಕೊಡುತ್ತಾರೆ ಎಂದು ನಿಖಿಲ್ ಹೇಳಿದರು.

ಸರ್ಕಾರ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಮೂಲಕ ಎರಡನೇ ಬೆಳಗೆ ನೀರಿಲ್ಲ ಎಂದು ರೈತರ ದಾರಿ ತಪ್ಪಿಸುವ ಕೆಲಸ ಮಾಡಿದೆ.ರೈತರಿಗೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 8-10 ದಿನಗಳ ಗಡುವು ನೀಡಲಾಗುವುದು. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ತುಂಗಭದ್ರಾ ಆಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ, ಸರ್ಕಾರ ನಮ್ಮೆಲ್ಲರನ್ನು ಹುಡುಕಿಕೊಂಡು ಬರಬೇಕು, ಜಲಸಂಪನ್ಮೂಲ ಸಚಿವರು,ಉಸ್ತುವಾರಿ ಮಂತ್ರಿಗಳು , ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರಿಗೆ ನ್ಯಾಯ ಕೊಡುವ ವರೆಗೆ ನಾವು ಹೋರಾಟವನ್ನು ಕೈ ಬಿಡುವುದಿಲ್ಲ. ಜನತಾದಳ ಪಕ್ಷ ರೈತರ ಪಕ್ಷ. ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಕೊನೆಯ ಉಸಿರು ಇರುವವರೆಗೆ ರೈತರಿಗಾಗಿ ಹೋರಾಟ ಮಾಡುತ್ತೇನೆ ಎಂದು ನಿಖಿಲ್ ಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

About The Author