ತುಮಕೂರು : ಪೊಲೀಸರ ವಶದಲ್ಲಿದ್ದ ಖತರ್ನಾಕ್ ಸರಗಳ್ಳ ನೋರ್ವ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ತುಮಕೂರು ತಾಲೂಕಿನ ಕೋರಾ ಠಾಣೆಯಲ್ಲಿ ನಡೆದಿದೆ.

ಮಧುಗಿರಿ ತಾಲ್ಲೂಕು ಮಿಡಿಗೇಶಿ ಮೂಲದವನು ಕಳ್ಳನು ತುಮಕೂರಿನ ಅಂತರಸನಹಳ್ಳಿಯಲ್ಲಿ ವಾಸವಾಗಿದ್ದ ರಂಗಪ್ಪ ಅಲಿಯಾಸ್ ಪುನೀತ್ ಎಂಬಾತನೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಠಾಣೆಯಿಂದಲೇ ಕಾಲ್ಕಿತ್ತು ನಾಪತ್ತೆಯಾಗಿರುವ ಆರೋಪಿ.
ಸದರಿ ಕುಖ್ಯಾತ ಸರಗಳ್ಳನನ್ನು ಇತ್ತೀಚೆಗೆ ಕೋರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ಮಾಡಿ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕದ್ದು ಮಾರಿದ ಸರಗಳ್ಳನನ್ನು ವಶಪಡಿಸಿಕೊಂಡಿದ್ದು ಇನ್ನೂ ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳವು ಮಾಲು ವಶ ಪಡಿಸಿಕೊಳ್ಳ ಬೇಕಾಗಿತ್ತು.
ಮೊನ್ನೆ ರಾತ್ರಿ ಪೊಲೀಸ್ ಠಾಣೆಯಲ್ಲಿ ಊಟ ಕೊಟ್ಟು ಕೊರೋನಾ ಭೀತಿಯಲ್ಲಿದ್ದ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೆ ಠಾಣೆಯಿಂದ ಓಡಿ ಹೋಗಲು ಕಾರಣವಾಗಿದೆ.
ಈತ ರಾತ್ರಿ ಊಟ ಮುಗಿಸಿದ ನಂತರ ಊಟದ ಪ್ಯಾಕೆಟ್ಅನ್ನು ಆಚೆಗೆ ಎಸೆಯುವ ನೆಪದಲ್ಲಿ ಠಾಣೆಯಿಂದ ಪೊಲೀಸರ ಹೊಡೆತ ತಿಂದು ಕುಂಟುತ್ತಾ ಹೊರ ಹೋದವನನ್ನು ಕಂಡ ಪೊಲೀಸರು ಇವನೆಲ್ಲಿ ಓಡಿ ಹೋಗುತ್ತಾನೆ ಎಂಬ ನಿರ್ಲಕ್ಷ್ಯ ಭಾವನೆ ತೋರಿದ್ದರಿಂದ ಸದರಿ ಖದೀಮ ಅಲ್ಲಿಂದ ಕುದುರೆ ವೇಗದಲ್ಲಿ ಪರಾರಿಯಾಗಿದ್ದಾನೆ.
ಇನ್ನು ಅವನ ಹಿಂದೆ ಪೊಲೀಸರು ಓಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ನಗೆಪಾಟಲಿಗೀಡಾಗಿದೆ.
ಸದ್ಯ ಸಿಸಿಟಿವಿ ಫೂಟೇಜ್ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಕೈಸೇರಿದೆ ಕೊರೋನಾ ಮಹಾಮಾರಿಯ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೂ ಇತ್ತೀಚೆಗೆ ಪೊಲೀಸರಿಗೂ ಕೊರೋನಾ ವಕ್ಕರಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಆರೋಪಿಗಳಿಂದ ಅಂತರ ಕಾಯ್ದುಕೊಳ್ಳುವಂತೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೂಚನೆ ನೀಡಿದ್ದರ ಮೇರೆಗೆ ಈ ಠಾಣೆಯ ಸಿಬ್ಬಂದಿ ಅಂತರ ಕಾಯ್ದುಕೊಂಡಿದ್ದರು.
ಇದೇ ಆತನ ಗ್ರೇಟ್ ಎಸ್ಕೇಪ್ ಗೆ ಕಾರಣವಾಗಿದೆ. ಈ ಸರಗಳ್ಳನ ವಿರುದ್ಧ ಬೆಂಗಳೂರಿನಲ್ಲಿ ಏಳು ಪ್ರಕರಣ ತುಮಕೂರಿನ ಕೋರಾ ಠಾಣೆಯಲ್ಲಿ ಮೂರು ಸೇರಿದಂತೆ ಬೆಳ್ಳಾವಿ ಮತ್ತು ತಿಲಕ್ ಪಾರ್ಕ್ ಠಾಣೆಗಳಲ್ಲಿ ತಲಾ ಎರಡು ಪ್ರಕರಣ ಸೇರಿ ಒಟ್ಟು ಹದಿನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಠಾಣೆಯಲ್ಲಿ ಕರ್ತವ್ಯದಲ್ಲಿದ್ದ 6 ಮಂದಿ ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ಲ್ಯಕ್ಷ್ಯ ತೋರಿದ ಸಿಬ್ಬಂದಿಯನ್ನು ಆಮಾನತ್ತು ಮಾಡಿದ್ದಾರೆ
ತಪ್ಪಿಸಿಕೊಂಡಿರುವ ಕಳ್ಳನ ಬೇಟೆಗೆ ಪೊಲೀಸರು ತಂಡ ರಚಿಸಿಕೊಂಡು ಬಲೆ ಬೀಸಿದ್ದಾರೆ.
ಕೆ.ರಾಜು ತುಮಕೂರು ವರದಿಗಾರರು,ಕರ್ನಾಟಕ ಟಿವಿ
