14 ಲಕ್ಷ ರೂಪಾಯಿ ಮೌಲ್ಯದ ಕ್ರೇನ್ ಕದ್ದ ಕಳ್ಳ ಸೈಫುಲ್ಲಾ ಪೊಲೀಸರ ಬಲೆಗೆ

Hubli News: ಹುಬ್ಬಳ್ಳಿ: ಹಳಿಯಾಳ ತಾಲೂಕಿನ ಅಜಂಗಾವದ ರಘುನಾಥ ಕದಂ ಅವರು ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ನಿಲ್ಲಿಸಿದ್ದ ಕ್ರೇನ್‌ನ್ನೇ ಎಗರಿಸಿಕೊಂಡು ಮಾರಾಟ ಮಾಡಲು ಊರೂರು ಅಲೆದಾಡಿದ್ದ ಆರೋಪಿಯನ್ನ ಚಾಣಾಕ್ಷತನದಿಂದ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಮಾರು 14 ಲಕ್ಷ ರೂಪಾಯಿ ಮೌಲ್ಯದ ಕ್ರೇನ್ ಕದ್ದ ಖಾನಾಪುರ ತಾಲೂಕಿನ ನಂದಗಾವ ಗ್ರಾಮದ ಸೈಫುಲ್ಲಾ ಕಮಾಲಸಾಹೇಬ ಮುಲ್ಲಾ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಾಡಿದ ಸಾಲ ತೀರಿಸಲು ಯಾರೂ ಮಾಡದ ಕೃತ್ಯಕ್ಕೆ ಆರೋಪಿ ಮುಂದಾಗಿದ್ದ. ಈ ಪ್ರಕರಣದಲ್ಲಿ ಯಾವುದೇ ಕುರುಹು ಮೊದಲಿಗೆ ಕಾಣದೇ ಇದ್ದರೂ, ತದನಂತರದ ಕಾರ್ಯಾಚರಣೆಯಲ್ಲಿ ಸಿಸಿಟಿವಿಗಳು ಸಾಕ್ಷಿಯನ್ನ ಒದಗಿಸಿವೆ.

ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಟೀಂ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ಎಂ.ಡಿ.ಪಾಟೀಲ, ಸಿಬ್ಬಂದಿಗಳಾದ ಎಚ್.ಬಿ.ಐಹೊಳೆ, ಅಬ್ರಹಾರ್ ಪಾಟೀಲ, ಅಬ್ದುಲ ಕಾಕರ, ಚೆನ್ನಪ್ಪ ಬಳ್ಳೊಳ್ಳಿ, ಮಹಾಂತೇಶ ಮದ್ದಿನ, ಗಿರೀಶ ತಿಪ್ಪಣ್ಷನವರ, ತಿಪ್ಪಣ್ಣ ಆಲೂರ, ತಾಂತ್ರಿಕ ಸಿಬ್ಬಂದಿಗಳಾದ ಆರೀಫ ಗೋಲಂದಾಜ, ವಿಠ್ಠಲ ಡಂಗನವರ ಭಾಗವಹಿಸಿದ್ದರು.

About The Author