Friday, April 4, 2025

Latest Posts

ಇದು ಓಯೋ ಅಲ್ಲ ಕ್ಯಾಬ್, ಇಲ್ಲಿ ನೋ ರೋಮ್ಯಾನ್ಸ್: ಚಾಲಕನ ನೊಟೀಸ್‌ಗೆ ಭಾರೀ ಮೆಚ್ಚುಗೆ

- Advertisement -

Hyderabad News: ಹೈದರಾಬಾದ್‌ನ ಕಾರ್‌ ಒಂದರಲ್ಲಿ ಕ್ಯಾಬ್ ಚಾಲಕ, ಇದು ಓಯೋ ರೂಮ್ ಅಲ್ಲ, ಕಾರ್, ಇಲ್ಲಿ ನೋ ರೋಮ್ಯಾನ್ಸ್ ಎಂದು ನೋಟೀಸ್ ಅಂಟಿಸಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಚಾಲಕ ಹಾಾಕಿರುವ ನೊಟೀಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕ್ಯಾಬ್ ಬುಕ್ ಮಾಡುವ ಕೆಲವು ಜೋಡಿಗಳು, ಕಾರಿನಲ್ಲೇ ಅಸಭ್ಯ ವರ್ತನೆ ಶುರು ಮಾಡಿಕೊಳ್ಳುತ್ತಾರೆ. ರೋಮ್ಯಾಂಟಿಕ್ ಆಗಿ, ಇತರರಿಗೆ ಮುಜುಗರವಾಗುವಂತೆ ಮಾತನಾಡಿಕೊಳ್ಳುತ್ತಾರೆ. ಈ ಚಾಲಕನ ಜೊತೆಯೂ ಇದೇ ಸಮಸ್ಯೆ ಆಗಿದ್ದು. ಇದು ಕಾರ್, ನಿಮ್ಮ ಖಾಸಗಿ ಜಾಗ ಅಥವಾ ಓಯೋ ರೂಮ್ ಅಲ್ಲ. ಹಾಾಗಾಗಿ ಅಂತರ ಕಾಯ್ದುಕೊಂಡು ಮೌನವಾಗಿರಿ ಎಂದು ನೋಟೀಸ್ ಅಂಟಿಸಿಬಿಟ್ಟಿದ್ದಾನೆ.

ಇದಕ್ಕೆ ತರಹೇವಾರಿ ಕಾಮೆಂಟ್ಸ್ ಬಂದಿದೆ. ನೀವು ಓಯೋಗೆ ಫ್ರೀಯಾಗಿ ಪ್ರಚಾರ ನೀಡುತ್ತೀರಿ ಎಂದು ಓರ್ವ ಹೇಳಿದರೆ, ಇನ್ನೋರ್ವ ನೋ ರೋಮ್ಯಾನ್ಸ್ ಓಕೆ, ಕೀಪ್ ಡಿಸ್ಟೆನ್ಸ್ ಯಾಕೆ ಎಂದು ಪ್ರಶ್ನಿಸಿದ್ದಾನೆ.

- Advertisement -

Latest Posts

Don't Miss