Wednesday, September 18, 2024

Latest Posts

Cat:ಇದು ವಿಶ್ವದ ಶ್ರೀಮಂತ ಬೆಕ್ಕು!

- Advertisement -

ಇತ್ತೀಚಿಗೆ ಕೆಲ ಜನ ರಾತ್ರೋರಾತ್ರಿ ಇನ್‌ಸ್ಟಾಗ್ರಾಮ್‌ ನಲ್ಲಿ ಟ್ರೇಂಡಿಗ್ ಅಗ್ತಾ ಇರೋದು ಕಾಮನ್ ಆಗ್ಬಿಟ್ಟಿದೇ . ಆದ್ರೆ ಅಚ್ಚರಿ ವಿಷ್ಯ ಅಂದ್ರೆ ಇಲ್ಲೊಂದು ಮುದ್ದಾದ ಬೆಕ್ಕು ಇನ್‌ಸ್ಟಾಗ್ರಾಮ್‌ನಲ್ಲಿ ಮೋಸ್ಟ್ ಟ್ರೇಂಡಿಂಗ್ ಆಗಿದೆ . ಅಷ್ಟೇ ಅಲ್ಲದೇ ಈ ಬೆಕ್ಕು ಇದೀಗ ವಿಶ್ವದಲ್ಲೇ ಶ್ರೀಮಂತ ಬೆಕ್ಕು ಅಂತೆ. ಹಾಗಿದ್ರೆ ಅದು ಹೇಗೆ ? ಅನ್ನೋದನ್ನ ತೋರೀಸ್ತಿವಿ …

 

ಇಲ್ಲಿರೋ ಈ ಬೆಕ್ಕು ಬರೋಬ್ಬರಿ 852 ಕೋಟಿ ಮೌಲ್ಯದ ಆಸ್ತಿಯ ಒಡೆಯ ಅಂತೆ. ಅಷ್ಟೇ ಅಲ್ಲದೇ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಏಕೈಕ ಬೆಕ್ಕು ಎಂಬ ಗಿನ್ನೆಸ್ ದಾಖಲೆಯನ್ನು ಕೂಡ ಇದು ಪಡೆದುಕೊಂಡಿದೆ. ಫೋರ್ಬ್​ ಪಟ್ಟಿಯಲ್ಲಿ ಜಾಗ ಪಡೆದಿರುವ ಈ ಶ್ರೀಮಂತ ಬೆಕ್ಕು ಸದ್ಯ ಸೋಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ .

ಅಂದಹಾಗೆ ವಿಶ್ವದ ಈ ಶ್ರೀಮಂತ ಬೆಕ್ಕೆಂದು ಮನ್ನಣೆ ಪಡೆದ ಈ ಬೆಕ್ಕಿನ ಹೆಸ್ರು ನಳ . ಈ ಬೆಕ್ಕು ಇನ್‌ಸ್ಟಾಗ್ರಾಮ್‌ ನಲ್ಲಿ ತನ್ನ ಪ್ರತಿ ಪೋಸ್ಟಿಗೂ 12 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಂತೆ .ಅಲ್ಲದೇ ಈ ನಳ ಅತೀ ಹೆಚ್ಚು ಜನಪ್ರಿಯ ಹೊಂದಿರುವ ಬೆಕ್ಕೆಂಬ ಗಿನ್ನಿಸ್ ದಾಖಲೆಯನ್ನು ಕೂಡ ಪಡೆದಿದ್ಯಾಂತೆ. ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿರುವ ಈ ನಳ , 4.5 ಮಿಲಿಯನ್​​ ಅಂದರೆ ಬರೋಬ್ಬರಿ 45 ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿರುವುದು ವಿಶೇಷ.

 

ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದ ಪೂಕಿ ಎಂಬ ಮಹಿಳೆ , ಲಾಸ್ ಏಂಜಲೀಸ್‌ನ ಪ್ರಾಣಿಗಳ ರಕ್ಷಣಾ ಆಶ್ರಯದಿಂದ, 4 ತಿಂಗಳ ಈ ಬೆಕ್ಕಿನ ಮರಿಯನ್ನು ದತ್ತು ತೆಗೆದುಕೊಂಡಿದ್ದಾಳೆ . ನಂತರ ಈ ಬೆಕ್ಕನ್ನು ಇನ್‌ಸ್ಟಾಗ್ರಾಮ್‌ ಮೂಲಕ ಲೋಕಕ್ಕೆ ಪರಿಚಯಿಸಿದ್ದಾಳೆ . ಅದರ ಜೀವನಶೈಲಿ ಆಟ- ತುಂಟಾಟ ಗಳನ್ನ ಸರೆಹಿಡಿದು ಈ ಬೆಕ್ಕಿನ ಖಾತೆಗೆ ಪೋಸ್ಟ್ ಮಾಡಿದ್ದಾಳೆ. ಇದರಿಂದಾಗಿ ಈ ಬೆಕ್ಕು ಜನರ ಮನಸ್ಸಿಗೆ ಹತ್ತಿರವಾಗಿದೆ.

 

ಇತ್ತೀಚಿಗಷ್ಟೇ ಜರ್ಮನ್ ಶೆಫರ್ಡ್ ತಳಿಯ ಗುಂಥರ್-6 ಎಂಬ ಶ್ವಾನ , ಸರಿಸುಮಾರು 3,300 ಕೋಟಿ ರೂಪಾಯಿ ಆಸ್ತಿ ಹೊಂದಿದ್ದ , ವಿಶ್ವದ ಅತ್ಯಂತ ಶ್ರೀಮಂತ ಶ್ವಾನ ಎಂಬ ಸುದ್ದಿ ತುಂಬಾನೇ ವೈರಲ್ ಆಗಿತ್ತು . ಸದ್ಯ ಇದೀಗ ನಳ ಎಂಬ ಬೆಕ್ಕು ಮೋಸ್ಟ್ ಟ್ರೇಡಿಂಗ್ ನಲ್ಲಿದೆ.

- Advertisement -

Latest Posts

Don't Miss