Friday, August 29, 2025

Latest Posts

ಯುದ್ಧ ಮಾಡುವಾಗ ಇದನ್ನು ಗಮನದಲ್ಲಿರಿಸಬೇಕಂತೆ.. (ಇದನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬಹುದು)

- Advertisement -

Mahabharat: ಕುರುಕ್ಷೇತ್ರ ಯುದ್ಧ ನಡೆಯುವಾಗ ಶ್ರೀಕೃಷ್ಣ ಪಾಂಡವರಿಗೆ ಕೆಲ ಸಲಹೆಗಳನ್ನು ನೀಡಿದ್ದ. ಯಾವ ರೀತಿಯಾಗಿ ಯುದ್ಧ ಮಾಡಬೇಕೆಂದು ಹೇಳಿದ್ದ. ಇಂದು ನಾವು ಶ್ರೀಕೃಷ್ಣ ಅಂದು ಯುದ್ಧ ಮಾಡುವಾಗ, ಯಾವ ರೀತಿ ಇರಬೇಕೆಂದು ಹೇಳಿದ್ದನೋ, ಆ ಬಗ್ಗೆ ಹೇಳಲಿದ್ದೇವೆ. ಆದರೆ ಇದು ಬರೀ ಯುದ್ಧಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಇದು ನಮ್ಮ ಜೀವನಕ್ಕೆ ಸಂಬಂಧಿಸಿದ್ದು. ಏಕೆಂದರೆ, ಜೀವನವೂ 1 ಯುದ್ಧವೇ..

ಒಗ್ಗಟ್ಟಿನಲ್ಲಿರಬೇಕು, ಹೆದರಬಾರದು : ಯುದ್ಧ ಮಾಡುವಾಗ ಸದಾ ಜತೆಯಾಗಿರಬೇಕು. ಬೇರೆ ಬೇರೆಯಾಗಿ ನಾವು ಯುದ್ಧಕ್ಕೆ ಸಿದ್ಧರಾದಾಗ ಮಾತ್ರ, ಯುದ್ಧ ಗೆಲ್ಲಲು ಸಾಧ್ಯ. ಅದೇ ರೀತಿ ನಮ್ಮ ಮನೆಯವರಿಗೆ, ಸಂಬಂಧಿಕರಿಗೆ, ಬಂಧು ಮಿತ್ರರಿಗೆ ಸಮಸ್ಯೆಯಾದಾಗ, ಎಲ್ಲರೂ ಸೇರಿದರೆ ಮಾತ್ರ, ಸಮಸ್ಯೆ ಬಗೆಹರಿಯುತ್ತದೆ. ನನಗೆ ಯಾರೂ ಬೇಡ, ನಾನಷ್ಟೇ ಹೋರಾಡುತ್ತೇನೆ ಎಂದರೆ, ಗೆಲುವು ಕಷ್ಟವಾಗಬಹುದು.

ಇನ್ನು ಯಾವುದೇ ಸಮಸ್ಯೆ ಬಂದರೂ ನಾವು ಹೆದರದೇ, ಏನಾಗುತ್ತದೆ ನೋಡೇಬಿಡೋಣವೆಂದು ಸಮಸ್ಯೆ ಎದುರಿಸಬೇಕು. ಅದನ್ನು ಬಿಟ್ಟು ಈ ಕೆಲಸ ನನ್ನಿಂದ ಅಸಾಧ್ಯವೆಂದು ಕುಳಿತರೆ, ಜೀವನದಲ್ಲಿ ಗೆಲ್ಲಲು ಸಾಧ್ಯವಿಲ್ಲ.

ತ್ಯಾಗಕ್ಕೆ ಸದಾ ಸಿದ್ಧರಿರಬೇಕು : ಯುದ್ಧದಲ್ಲಿ ಸೋಲೋ ಗೆಲುವೋ, ಯಾವುದಾದರೂ ಬರಲಿ ನಾನು ಸ್ವೀಕರಿಸಲು ಸಿದ್ಧ ಎನ್ನುವ ಮನಸ್ಥಿತಿ ಇರಬೇಕು. ಸೋಲು ಬಂದರೂ, ಸ್ವೀಕರಿಸಬೇಕು. ಆದರೆ ಗೆಲ್ಲುವ ಸರ್ವ ಪ್ರಯತ್ನ ನಾವು ಮಾಡಬೇಕು. ಜೀವನದಲ್ಲೂ ಅಷ್ಟೇ, ಯಾವುದಾದರೂ ಸಮಸ್ಯೆ ಬಂದಾಗ, ನಮ್ಮಿಂದ ಸಾಧ್ಯವಾದಷ್ಟು ಆ ಸಮಸ್ಯೆ ಎದುರಿಸಲು ನಾವು ಸಿದ್ಧರಿರಬೇಕು.

ಎದುರಾಳಿಗಳನ್ನು ಎಂದಿಗೂ ಕೀಳಾಗಿ ಭಾವಿಸಬೇಡಿ : ಇನ್ನು ಯುದ್ಧ ಮಾಡುವಾಗ ನಾವು ಎದುರಾಳಿಗಳನ್ನು ಎಂದಿಗೂ ಕೀಳಾಗಿ ಭಾವಿಸಬಾರದು ಅಂತಾರೆ ಶ್ರೀಕೃಷ್ಣ. ಏಕೆಂದರೆ ಎಷ್ಟೋ ಬಾರಿ, ಎದುರಾಳಿಗಳನ್ನು ನೋಡಿ, ಅವರನ್ನು ಯಕಶ್ಚಿತ್ ಎಂದವರೇ, ಮೂಲೆಗುಂಪಾಗಿದ್ದಾರೆ. ಹಾಗಾಗಿ ಎದುರಾಳಿಗಳನ್ನು ಎಂದಿಗೂ ಕೀಳಾಗಿ ಭಾವಿಸಬೇಡಿ.

ಸಲಹೆಗಾರರನ್ನು ಸರಿಯಾಗಿ ಆಯ್ಕೆ ಮಾಡಿ : ಕುರುಕ್ಷೇತ್ರ ಯುದ್ಧ ನಡೆಯುವಾಗ ಪಾಂಡವರು ಶ್ರೀಕೃಷ್ಣನನ್ನು ಸಲಹೆಗಾರನನ್ನಾಗಿ ಆಯ್ಕೆ ಮಾಡಿದರು. ಕುರುವಂಶದವರು ಶಕುನಿಯನ್ನು ಸಲಹೆಗಾರರನ್ನಾಗಿ ಆಯ್ಕೆ ಮಾಡಿದರು. ಇದರಲ್ಲಿ ಗೆಲುವು ಪಾಂಡವರದ್ದಾಯಿತು. ಹಾಗಾಗಿ ಜೀವನದಲ್ಲಿ ಸಮಸ್ಯೆ ಬಂದಾಗ, ಅದಕ್ಕೆ ಪರಿಹಾರಕ್ಕಾಗಿ ನಾವು ಹುಡುಕುವಾಗ, ಉತ್ತಮ ಸಲಹೆಗಾರರನ್ನು ನಾವು ಆಯ್ಕೆ ಮಾಡಬೇಕು.

ಯುದ್ಧ ತಂತ್ರ ಅನುಸರಿಸಿ : ಯುದ್ಧದಲ್ಲಿ ಗೆಲ್ಲಲು ನಾವು ಯುದ್ಧ ತಂತ್ರವನ್ನು ಅನುಸರಿಸಬೇಕು. ಯಾವ ರೀತಿಯಾಗಿ ಗೆಲುವು ಸಾಧಿಸಲು ಸಾಧ್ಯ..? ಎಂದು ಯೋಚಿಸಬೇಕು. ಅದೇ ರೀತಿ ಜೀವನದಲ್ಲಿ ಬರುವ ಸಮಸ್ಯೆ ಬಗೆಹರಿಸಲು, ನಾವು ಏನೇನು ಮಾಡಬಹುದು ಎಂದು ಎಲ್ಲ ರೀತಿಯಿಂದಲೂ ಯೋಚಿಸಬೇಕು ಅಂತಾನೆ ಶ್ರೀಕೃಷ್ಣ.

ಫಲಿತಾಂಶಕ್ಕಿಂತ ಯುದ್ಧದ ಬಗ್ಗೆ ಹೆಚ್ಚು ಗಮನಹರಿಸಬೇಕು : ನಾವು ಯುದ್ಧಕ್ಕೆ ಹೋದಾಗ, ಅದರ ಫಲಿತಾಂಶಕ್ಕಿಂತ, ಯುದ್ಧ ಮಾಡುವುದರ ಬಗ್ಗೆ ಗಮನಿಸಬೇಕು ಅಂತಾನೆ ಶ್ರೀಕೃಷ್ಣ. ಅದೇ ರೀತಿ ನಾವು ಯಾವುದಾದರೂ ಕೆಲಸ, ಉದ್ಯಮ ಮಾಡಲು ಶುರು ಮಾಡುತ್ತೇವೆ. ಆಗ ನಾವು ಆ ಕೆಲಸ ಹೇಗೆ ಮಾಡುವುದು, ಅದನ್ನು ಹೇಗೆ ಯಶಸ್ವಿಯಾಗಿಸುವುದು ಅನ್ನೋ ಬಗ್ಗೆ ಗಮನಿಸಬೇಕೆ ವಿನಃ. ಅದರ ಫಲಿತಾಂಶದ ಬಗ್ಗೆಯಲ್ಲ ಅಂತಾನೇ ಶ್ರೀಕೃಷ್ಣ.

- Advertisement -

Latest Posts

Don't Miss