Thursday, November 21, 2024

Latest Posts

ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರು ಟಿಟಿಡಿ ಸಮಿತಿಯಲ್ಲಿ ಆಯ್ಕೆಯಾಗಿದ್ದಾರೆ: ಶೆಟ್ಟರ್ ಆರೋಪ..

- Advertisement -

Hubli News: ಹುಬ್ಬಳ್ಳಿ: ತಿರುಪತಿಯಲ್ಲಿ ಸನಾತನ ಧರ್ಮ ಪ್ರಾಧಿಕಾರ ರಚನೆ ಆಗಬೇಕು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ಹಾಗೂ ಅವರ ತಂದೆ ಕನ್ವರ್ಟೆಡ್ ಕ್ರಿಶ್ಚಿಯನ್ಸ್. ಹಿಂದು ಧರ್ಮದ ಬಗ್ಗೆ ನಂಬಿಕೆ ವಿಶ್ವಾಸ ಇಲ್ಲ. ಹಿಂದೂತ್ವದ ಬಗ್ಗೆ ನಂಬಿಕೆಯೂ ಇಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಕಿಡಿ ಕಾರಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಟಿಟಿಡಿ ಸಮಿತಿಯಲ್ಲಿ ಹಿಂದು ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನೇ ನೇಮಕ ಮಾಡಲಾಗಿದೆ. ಲಾಡುವಿನಲ್ಲಿ ಮಾಂಸದ ಕೊಬ್ಬು ಮಿಶ್ರಿಣ ಮಾಡುವ ಮೂಲಕ ತಿರುಪತಿ ತಿಮ್ಮಪ್ಪನಿಗೆ ಅವಹೇಳನ ಮಾಡಿದಂತೆ. ಲಾಡುವಿನಲ್ಲಿ ದನದ ಮಾಂಸದ ಕೊಬ್ಬು ಸೇರಿಸಿರುವುದು ಜಗಮೋಹನ್ ರೆಡ್ಡಿ ಅವರಿಂದಲೇ ಆಗಿದೆ. ಇದು ಗಂಭೀರ ಸ್ವರೂಪದ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಅರ್ಕಾವತಿ ಡಿನೋಟಿಪೈ ಪ್ರಕರಣದ‌ ಸಂದರ್ಭದಲ್ಲಿ ನಾನು ವಿರೋಧ ಪಕ್ಷದ ನಾಯಕನಾಗಿದ್ದೇ ಸದನದಲ್ಲಿ ವಾರಗಟ್ಟಲೇ ಚರ್ಚೆ ಮಾಡಿದೆ. ಸಿದ್ಧರಾಮಯ್ಯ ಅಂದು ಕೂಡ ಮುಖ್ಯಮಂತ್ರಿ ಆಗಿದ್ದರು. ನಾನು ಮೊದಲ ಭಾರಿಗೆ ಚರ್ಚೆ ಮಾಡಿದೆ.‌ ಅಲ್ಲಿಯವರೆಗೆ ಅದರ ಆಳ ಅಗಲ ಯಾರಿಗೂ ಗೊತ್ತಿರಲಿಲ್ಲ. ಸುಮಾರು 983 ಎಕರೆ ರೀಡೋ ಹೆಸರಿನಲ್ಲಿ ಕೋರ್ಟ್ ಆದೇಶ ಇದೆ ಅಂತಾ ಸಿದ್ಧರಾಮಯ್ಯ ಸಹಿ ಮಾಡಿದರು. ಅರ್ಕಾವತಿ ಹಗರಣ ರೀಡೋ ಹೆಸರಿನಲ್ಲಿ ಸಿದ್ಧರಾಮಯ್ಯ ಡಿನೋಟಿಪೈ ಮಾಡಿದ್ದು. ಅಂದು ಹೇಳಿದ್ದು ಇಂದು ಕೂಡಾ ಹೇಳಿದ್ದಾರೆ. ಕೋರ್ಟ್ ನಿರ್ದೇಶನ‌ ಮೆರೆಗೆ ಮಾಡಲಾಗಿದೆ ಅಂತಾ. ಕೋರ್ಟ್ ನಿರ್ದೇಶನ ಸಹ ಗಾಳಿಗೆ ತೋರಿ ಡಿನೋಟಿಪೈ ಮಾಡಿದ್ದಾರೆ. ನಾನು ಸಹ ಸಿಎಂ ಆಗಿದ್ದಾಗ ಯಾವುದೇ ರೀತಿ ಸಹಿ ನಾ ಮಾಡಲಿಲ್ಲ. ನೂರಕ್ಕೆ ನೂರರಷ್ಟು ಇದು ಕಾನೂನು ಬಾಹಿರ ಆಗಿದೆ. ಆದ್ದರಿಂದ ನಾನು ಅಂದು ನಾನು ಸಹಿ ಮಾಡಲಿಲ್ಲ. ನಂತರ ಸಿದ್ಧರಾಮಯ್ಯನವರು ಸಿಎಂ ಆದ ನಂತರ ಸಹಿ ಮಾಡಿದರು ಎಂದರು.

ಯಾವ ಕಾರಣಕ್ಕೆ ಸಹಿ ಮಾಡಿದರು. ನಾನು ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದೆ. ಸಾವಿರಾರು ಕೋಟಿ ಹಗರಣ ಇದು ಎಂದು ವಾದ ಮಾಡಿದೆ. ದಾಖಲೆ ಸಮೇತ ವಾದ ಮಾಡಿದೆ. ಆದರೆ ಸಿದ್ಧರಾಮಯ್ಯಾ ತಮ್ಮ ಮೇಲೆ ಹಾಕಿಕೊಳ್ಳಲಿಲ್ಲ.‌ ಬಿಡಿಎ ಮಾಡಿದ್ದು ಎಂದು ಸಿದ್ಧರಾಮಯ್ಯ ನವರು ಹೇಳಿದರು. ತಾವೇ ಸಹಿ ಮಾಡಿದ್ದು ಅಂತಾ ಸಿದ್ದರಾಮಯ್ಯ ನವರೆಗೆ ಹೇಳಿದೆ. ಇದಕ್ಕೆ ಪೂರಕವಾದ ದಾಖಲೆ ಕೊಟ್ಟೆ. ನಾನು ಸಿಬಿಐ ತನಿಖೆಗೆ ಆಗ್ರಹ ಮಾಡಿದೆ. ನಂತರ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಮಾಡಿದರು. ನಂತರ ಕೆಂಪಣ್ಣ ಆಯೋಗ ತನಿಖೆ ಮಾಡಿ ವರದಿ ಕೊಟ್ಟಿತು.‌ ಸಿದ್ಧರಾಮಯ್ಯ ಸಿಎಂ ಆದಾಗ ಕೆಂಪಣ್ಣ ವರದಿ ನೀಡಿತು. ಆದರೆ ಕೆಂಪಣ್ಣ ವರದಿ ಬಹಿರಂಗ ಮಾಡಿ ಅಂದೆ‌.‌ ಸದನದಲ್ಲಿ ಮಂಡನೆ ಮಾಡಿ ಅಂತಾ ಒತ್ತಾಯ ಮಾಡಿದೆ. ಆದರೆ ಯಾವುದೇ ರೀತಿಯ ಸದನದಲ್ಲಿ ಮಂಡನೆ ಮಾಡಲಿಲ್ಲ. ಬಹಿರಂಗ ಸಹ ಮಾಡಲಿಲ್ಲ. ಸಾಚಾ ಆಗಿದ್ದರೆ ಸದನದಲ್ಲಿ ಯಾಕೆ ಮಂಡನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯಪಾಲರು ಇಂದು ವರದಿ ಕೇಳಿದ್ದಾರೆ. ಸಾರ್ವಜನಿಕವಾಗಿ ಯಾಕೆ ಪ್ರಕಟ ಮಾಡತಾ ಇಲ್ಲ. ರಾಜ್ಯಪಾಲರು ಕೇಳಿದನ್ನ ವರದಿ ಕೊಡಿ. ಪಲಾಯನ ವಾದ ಸಿದ್ಧರಾಮಯ್ಯನವರು ಮಾಡತಾ ಇದ್ದಾರೆ. ಮುಡಾ ಹಗರಣದಲ್ಲಿ ಸಹ ಹಾಗೇ ಮಾಡಿದರು ಎಂದರು.

- Advertisement -

Latest Posts

Don't Miss