Sandalwood News: ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 11 ಸದ್ಯ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ನಿರೀಕ್ಷೆಯನ್ನೂ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ನ ಎರಡನೇ ಪ್ರೋಮೋ ಬಿಡುಗಡೆಯಾದ ಬಳಿಕ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈ ಸಲದ ಬಿಗ್ ಬಾಸ್ ಸೀಸನ್ 11ರಲ್ಲಿ ಸುದೀಪ್ ಕಾಣಿಸಿಕೊಳ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಸುದೀಪ್ ಮಾತ್ರ ಯಾವ ವಿಷಯವನ್ನೂ ಹೇಳಿರಲಿಲ್ಲ. ಕೊನೆಗೂ ಬಿಗ್ ಬಾಸ್ ನಿರೂಪಕರಾಗಿ ಸುದೀಪ್ ಇದ್ದಾರೆ ಅನ್ನೋದು ದೃಢವಾಯ್ತು.
ಅಂದಹಾಗೆ, ಈ ಬಾರಿಯ ಬಿಗ್ ಬಾಸ್ 11 ರಲ್ಲಿ ಸಾಕಷ್ಟು ವಿಶೇಷತೆಗಳೂ ಇವೆ. ಅದನ್ನು ಸ್ವತಃ ಸುದೀಪ್ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಥೀಮ್ ಗಳು ಇರಲಿವೆ ಎಂದು ಸುದೀಪ್ ಹೇಳಿದ್ದಾರೆ. ನಾವು ಇಲ್ಲಿ ತಂಡ ಮಾಡಿ ಕಳುಹಿಸಲಿಲ್ಲ ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ಬಿಗ್ ಬಾಸ್ ಗೆ ಎಂಟ್ರಿ ಕೊಡುವಾಗಲೇ ಎರಡು ತಂಡ ಮಾಡುವುದೇ ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್ ಹೇಳಿ್ದ್ದಾರೆ.
ಕಳೆದ ಬಾರಿ ಬಿಗ್ ಬಾಸ್ ಸೀಸನ್ 10 ಶುರುವಾದ ಸಂದರ್ಭ ಸ್ಪರ್ಧಿಗಳಿಗಳನ್ನು ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ತಂಡಗಳಾಗಿ ವಿಂಗಡಿಸಲಾಗಿತ್ತು. ಅದರಂತೆಯೇ ಈ ಬಾರಿಯು ಕೂಡ ಹೊಸ ರೀತಿಯಲ್ಲಿ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಸ್ಪರ್ಧಿಗಳನ್ನು ಕಳುಹಿಸಲಾಗುತ್ತದೆ ಎಂದು ಸುದೀಪ್ ಒಂದಷ್ಟು ಇಂಟ್ರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಅಂದಹಾಗೆ, ಸೆ್ಪ್ಟೆಂಬರ್ 29ರ ಸಂಜೆ ಗ್ರ್ಯಾಂಡ್ ಆಗಿ ಬಿಗ್ ಬಾಸ್ ಸೀಸನ್ 11ಕ್ಕೆ ಚಾಲನೆ ಸಿಗಲಿದೆ. ಪ್ರತಿ ನಿತ್ಯ ರಾತ್ರಿ 9.30 ಕ್ಕೆ ಬಿಗ್ ಬಾಸ್ ಪ್ರಸಾರವಾಗಿಲಿದೆ.