Friday, April 18, 2025

Latest Posts

ನಿಗೂಢ ಸೋಂಕಿಗೆ ಒಣಗುತ್ತಿವೆ ಸಾವಿರಾರು ಮರಗಳು..!

- Advertisement -

www.karnatakatv.net: ರಾಯಚೂರು: ಬೇವಿನ ಮರಗಳಿಗೆ ವಿಚಿತ್ರ ರೋಗ ತಗುಲುತ್ತಿದ್ದು ರಾಯಚೂರಲ್ಲಿ ನೂರಾರು ಬೇವಿನ ಮರಗಳು ಒಣಗುತ್ತಿವೆ.

ಸಿಂಧನೂರು ತಾಲೂಕಿನಾದ್ಯಂತ ಸಾವಿರಾರು ಬೇವಿನ ಮರಗಳು ಏಕಾಏಕಿ ಒಣಗತೊಡಗಿವೆ. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬೇವಿನ ಮರಗಳು ಇದೀಗ ಒಣಗುತ್ತಿದ್ದು ಎಲೆಗಳಲೆಲ್ಲಾ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇನ್ನು ರಸ್ತೆ ಬದಿಗಳಲ್ಲಿ ಒಣಗಿ ನಿಂತ ಮರಗಳು ಯಾವುದೇ ಸಮಯದಲ್ಲಾದ್ರೂ ಬಿದ್ದುಹೋಗಬಹುದು ಅನ್ನೋ ಭೀತಿ ಒಂದೆಡೆಯಾಗಿದೆ. ಹೀಗಾಗಿ ನಿಗೂಢ ಸೋಂಕಿಗೆ ಒಣಗಿದ ಬೇವಿನ ಮರಗಳನ್ನು ಸ್ಥಳೀಯರು ಕಡಿದುಹಾಕುತ್ತಿದ್ದಾರೆ. ಇದರಿಂದ ಮರಗಳನ್ನು ಬೆಳೆಸಿದ್ದ ರೈತರು ಇದೀಗ ಎಲ್ಲಾ ಮರಗಳನ್ನು ಕಳೆದುಕೊಳ್ಳೋ ಆತಂಕದಲ್ಲಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss