ತೆರಿಗೆ ವಂಚಸಿ ಓಡಾಡುತ್ತಿದ್ದ ಮೂರು ಖಾಸಗಿ ಬಸ್ ಗಳು ವಶ

www.karnatakatv.net : ಕೋಲಾರ : ಒಂದು ವೆಹಿಕಲ್ ಡಾಕ್ಯುಮೆಂಟ್ ತೋರಿಸಿ ಟ್ರಾಫಿಕ್ ಹಾಗೂ ಆರ್ಟಿಓ ಬಳಿ ಬಚಾವ್ ಆಗಿ ಹೋಗೋದು ಇವತ್ತು ಕಷ್ಟದ ವಿಚಾರ.. ಪರಿಸ್ಥಿತಿ ಹೀಗಿರುವಾಗ ಇಲ್ಲೊಬ್ಬ ಖತ ರ್ನಾಕ್ ಬಸ್ ಮಾಲೀಕ ಒಂದೇ ರಿಜಿಸ್ಟ್ರೇನ್ ನಂಬರ್ ಅನ್ನ 3 ಬೇರೆ ಬೇರೆ ಬಣ್ಣದ ಬಸ್ಗಳಿಗೆ ಹಾಕಿ ಓಡಿಸಿ ಇದೀಗ ಆರ್ಟಿಓಗೆ ಸಿಕ್ಕಿಬಿದ್ದಿದ್ದಾನೆ.. ಕೆಎ 06ಡಿ 4515 ರಿಜಿಸ್ಟ್ರೇಷನ್ ನಂಬರ್ ಅನ್ನು ಕೇರಳದ 2 ಬಸ್ ಗಳಿಗೂ ಬಳಸಿ ಚಂಚಾರ ಮಾಡ್ತಿರೋದನ್ನ ಪತ್ತೆ ಹಚ್ಚಿದ ಆರ್ಟಿಓ ಅಧಿಕಾರಿಗಳು ೩ ಬಸ್ಗಳನ್ನ ವಶಪಡಿಸಿಕೊಂಡಿದ್ದಾರೆ. ಈ ರೀತಿ ಒಂದೇ ನಂಬರ್ ಬಳಸುವ ಮೂಲಕ 6 ರಿಂದ 10 ಲಕ್ಷ ತೆರಿಗೆ ವಂಚನೆ ಮಾಡಿರೋದು ಈ ವೇಳೆ ಬಯಲಾಗಿದೆ.

ಮುಳಬಾಗಿಲು, ಬೇತಮಂಗಲ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಚಾರ ಮಾಡ್ತಿದ್ದ ಈ ಬಸ್ ಗಳ ಮೇಲೆ ಖಚಿತ ಮಾಹಿತಿ ಆಧರಿಸಿ ಅಪಾರ ಸಾರಿಗೆ ಆಯುಕ್ತ ನರೇಂದ್ರ ಓಲೇಕಾರ, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ಮೋಟಾರು ವಾಹನ ನಿರೀಕ್ಷಕರಾದ ಸುರೇಶ್, ತಿಪ್ಪೇಸ್ವಾಮಿ, ಸುದೀರ್ ಬಾಬು ಕಾರ್ಯಾಚರಣೆ ಭಾಗಿಯಾಗಿದ್ರು..

ಏನೇ ಆಗಲಿ ಡಿಎಲ್ ಇಲ್ಲ ಅಂದ್ರೆ ರಸ್ತೆಯಲ್ಲಿ ನಿಂತಿರೋ ಟ್ರಾಫಿಕ್, ಆರ್ಟಿಓ ಕಂಡು ಓಡುವ ಟೈಂನಲ್ಲಿ ಒಂದೇ ನಂಬರ್ ನಲ್ಲಿ ಮೂರು ಬಸ್ ಓಡಿಸುತ್ತಿದ್ದ ಮಾಲೀಕನ ಭಂಡ ಧೈರ್ಯವನ್ನ ಮೆಚ್ಚಲೇ ಬೇಕು. ಹಾಗೆಯೇ ಇಂಥವರನ್ನೂ ಹುಡುಕಿ ವಾಹನಗಳನ್ನ ಸೀಜ್ ಮಾಡುವ ಆರ್ಟಿಓ ಕಾರ್ಯವನ್ನ ಶ್ಲಾಘಿಸಲೇ ಬೇಕು..

ಕರ್ನಾಟಕ ಟಿವಿ, ಕೋಲಾರ

About The Author