- Advertisement -
ಕೊರೊನಾ ಮಹಾಮಾರಿಗೆ ತೃಣಮೂಲ ಕಾಂಗ್ರೆಸ್ ಶಾಸಕ ತಮೋನಾಶ್ ಘೋಷ್ ಬಲಿಯಾಗಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

ತಮೋನಾಶ್ ಘೋಷ್(60) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ತಮೋನಾಷ್‌ಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಚಿಕಿತ್ಸೆ ಫಲಿಸದೇ ತಮೋನಾಷ್ ಸಾವನ್ನಪ್ಪಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮೋನಾಷ್ ನಮ್ಮನ್ನು ಅಗಲಿರುವುದು ತುಂಬಾ ದುಃಖಕರ ವಿಷಯ. 35 ವರ್ಷದಿಂದ ಅವರು ನಮ್ಮ ಪಾರ್ಟಿಯಲ್ಲಿದ್ದರು ಎಂದಿದ್ದಾರೆ.

- Advertisement -

