ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ರ‍್ಜರಿ ಪ್ರರ‍್ಶನ ಗೊಂಡಿದೆ. ಉತ್ತರ ರ‍್ನಾಟಕದ ಒರಟು ಭಾಷೆಯಲ್ಲಿ ತೆರೆಗೆ ಬಂದ , ಈ ಸಿನಿಮಾ ಪ್ರೇಕ್ಷಕರಿಂದ ಅಪಾರ ಪ್ರಮಾಣದ ಮೆಚ್ಚುಗೆ ಪಡೆದುಕೊಂಡಿದೆ.
ರಾಮಘಡ ಎನ್ನುವುದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬರುವಂತಹ ಒಂದು ಹಳ್ಳಿ, ಈ ಹಳ್ಳಿಯಲ್ಲಿ ನಡೆದಿರುವ ಒಂದು ಘೋರ ಘಟನೆಯ ಆಧಾರಿದ ಮೇಲೆ ಸಿನಿಮಾವನ್ನು ಮಾಡಿದ್ದಾರೆ ನರ‍್ದೇಶಕ ಕರ‍್ತಿಕ್ ಮರಳಬಾವಿ , ಇವರೂ ಸಹ ಉತ್ತರ ರ‍್ನಾಟಕದ ಯಾದಗಿರಿ ಜಿಲ್ಲೆಯವರು, ಅದೇ ಭಾಗದವರು ಆಗಿರುವುದರಿಂದ ಕಥೆಯನ್ನು ಉತ್ತರ ರ‍್ನಾಟಕದ ಶೈಲಿಯಲ್ಲೇ ರಚಿಸಿದ್ದಾರೆ . ಈ ಸಿನಿಮಾದ ೮೦ ರಷ್ಟು ಚಿತ್ರಿಕರಣವನ್ನು ಬಳ್ಳಾರಿ ಜಿಲ್ಲೆಯ ಅಕ್ಕಪಕ್ಕದ ಕೆಲವು ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಹಾಗೂ ಈ ಚಿತ್ರದಲ್ಲಿ ಬರುವ ಕೆಲವು ಪಾತ್ರಗಳ ಭಾಷೆಯು ಸಂಪರ‍್ಣ ಉತ್ತರ ರ‍್ನಾಟಕದ ಶೈಲಿಯಲ್ಲೇ ಇದ್ದು ಹಲವಾರು ಡೈಲಾಗ್ಗಳು ಪ್ರೇಕ್ಷಕರ ಮನಸಲ್ಲಿ ಉಳಿಯುವಂತವು .
ಇನ್ನು
ಈ ಸಿನಿಮಾದ ತಾರಾಬಳಗದ ಬಗ್ಗೆ ಹೇಳುವುದಾದರೆ ಅಶ್ವಿನ್ ಹಾಸನ , ಚಂದನ್ ರಾಜ್, ಮಹಾಲಕ್ಷ್ಮಿ ಹಾಗೂ ಇನ್ನು ಕೆಲವು ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಟಿಯು ಮಾತನಾಡುವ ಭಾಷೆಯ ಸಂಪರ‍್ಣ ಉತ್ತರ ರ‍್ನಾಟಕ ಶೈಲಿಯಲ್ಲಿದೆ. ನಟಿಯ ತಾಯಿ ಬಾಲ್ಯವಿವಾಹವಾಗಿರುತ್ತಾಳೆ , ಮಗಳು ಚಿಕ್ಕವಳಿರುವಾಲೇ ಗಂಡನ್ನು ಕಳೆದುಕೊಂಡು , ಗಂಡನ ಸ್ನೇಹಿತನು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಆಶ್ರಯ ನೀಡುವುದಾಗಿ ನಂಬಿಸಿ ಅವಳನ್ನು ವೇಶ್ಯೆವಾಟಿಕೆಗೆ ಬಳಸಿಕೊಳ್ಳುತ್ತಾನೆ. ಇದರಿಂದ ಮನನೊಂದ ತಾಯಿ ಮರಣ ಹೊಂದುತ್ತಾಳೆ. ಮಲ್ಲಣ್ಣನ ಆಶ್ರಯದಲ್ಲಿ ಬೆಳೆದ ನಟಿ ಬೆಂಗಳೂರಿನಿಂದ ಬಂದಂತಹ ಅರವಿಂದ ಪ್ರೀತಿಯಲ್ಲಿ ಬೀಳುತ್ತಾಳೆ. ಇನ್ನು ಅರವಿಂದ ಅದೇ ಊರಿನಲ್ಲಿ ನೆಲೆಸಿ ಮಲ್ಲಣ್ಣನ ಜೆತೆ ಸೇರಿ ಕೃತ್ಯಗಳನ್ನು ಎಸಗುತ್ತಾನೆ. ಹೀಗೆ ಹಲವಾರು ಘಟನೆಗಳು ಈ ಸಿನಿಮಾದಲ್ಲಿ ಇದ್ದು ಈ ಸಿನಿಮಾದ ಕಥೆಯು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿರುವ ನೈಜ್ಯ ಘಟನೆಯಾಗಿದ್ದು, ಈ ಸಿನಿಮಾದಲ್ಲಿ ನರ‍್ದೆಶಕರು ನೈಜ್ಯವಾಗಿ ಚಿತ್ರಿಸಿದ್ದಾರೆ.
ಈ ಸಿನಿಮಾವನ್ನು ಜೈಶಂಕರ್ ಮತ್ತು ಕರ‍್ತಿರಾಜ್ ಜಂಟಿಯಾಗಿ ಬಂಡವಾಳ ಹೂಡಿಕೆ ಮಾಡಿದ್ದು, ಈ ಸಿನಿಮಾಗೆ ಮನು ದಾಸಪ್ಪ ಛಾಯಗ್ರಹಣವಿದ್ದು , ರೋಲೆಕ್ಸ ಶ್ರೀಧರ್ ಸಂಕಲನವಿದೆ.
65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ದಿವ್ಯಾ ಟಿಎಸ್