ಹುಬ್ಬಳ್ಳಿ : ಹುಲಿ ಉಗುರು ಧರಿಸಿದ್ದವರ ಮನೆ ಶೋಧ ಕಾರ್ಯ ಮತ್ತೇ ಚುರುಕು ಪಡೆದುಕೊಂಡಿದ್ದು
ಹುಬ್ಬಳ್ಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಎರಡು ಉಂಗುರುಗಳನ್ನ ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ ನಗರ ವಲಯ ಅರಣ್ಯಧಿಕಾರಿ ಆರ್.ಎಸ್. ಉಪ್ಪಾರ ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಿದ್ದು ನಗರದ ಪ್ರತಿಷ್ಠಿತ ಉದ್ಯಮಿಗಳಾದ ವಜ್ರಮುನಿ ಶಿರಕೋಳ, ಅಯ್ಯಪ್ಪ ಶಿರಕೋಳ ಮನೆ ಪರಿಶೀಲನೆ ನಡೆಸಲಾಯಿತು.
ಎರಡು ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದ ಅರಣ್ಯಧಿಕಾರಿಗಳಿಂದ ಅರ್ಧ ಗಂಟೆಗಳ ಕಾಲ ಪರಿಶೀಲನಾ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿ ವಜ್ರಮನಿ ಮಾತನಾಡಿದ್ದು ಈ
ನಕಲಿ ಹುಲಿ ಉಗುರು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ .ಲಾಕೇಟ್ ನಲ್ಲಿ ಇರುವ ಚಿನ್ನ ತೆಗೆದುಕೊಂಡು ನೀಡಲಾಗಿದೆ. ಅಧಿಕಾರಿಗಳ ಕೇಳಿದ ಮಾಹಿತಿ ನೀಡಲಾಗಿದೆ. ಯಾವುದೇ ತನಿಖೆಗೆ ನಾವು ಸಿದ್ಧ ಎಂದರು.
ನಾವು ಅವುಗಳನ್ನು ಜಾತ್ರೆಯಲ್ಲಿ ಖರೀದಿ ಮಾಡಿದ್ದೇವೆಂದ ವಜ್ರಮುನಿ, ಅಯ್ಯಪ್ಪ ಎಂದು ಮಾಹಿತಿ ಕೊಟ್ಟಿದ್ದು ಎಂದರು. ಇನ್ನು ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿಗಳು ಸಹ ಇದೇ ವೇಳೆ ಮಾತನಾಡಿ, ನಾವು
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದ ಉದ್ಯಮಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ನಗರದ ಬಾಣಿ ಓಣಿಯಲ್ಲಿ ಮನೆಗೆ ಬಂದು ಪ್ಲಾರೋನಿಕ್ಸ್ ಲ್ಯಾಬ್ ಗೆ ಪರೀಕ್ಷೆ ಸಲುವಾಗಿ ಕಳುಹಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿಗಳು ಹೇಳಿದರು.