Hubli News: ಹುಬ್ಬಳ್ಳಿ: ನಾನು ಪಕ್ಷದ ಅಧ್ಯಕ್ಷ ಒಂದು ನಾನು ಮಾತನಾಡಬೇಕು ಇಲ್ಲ ಸಿಎಂ ಮಾತನಾಡಬೇಕು ಉಳಿದವರು ಯಾರೇ ಮಾತನಾಡಿದ್ರೂ ಬೆಲೆ ಇಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಸಚಿವ ಜಮೀರ್ ಅಹ್ಮದ್ ಗೆ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು, ನಾಯಕತ್ವ ಮತ್ತು ಸಿಎಂ ಬದಲಾವಣೆಗೆ ಕಾಲವೇ ಉತ್ತರ ನೀಡುತ್ತೆ. ಅಲ್ಲಿಯವರೆಗೆ ನಾನು ಮೌನ.. ನನ್ನ ಮೌನಕ್ಕೆ ಕಾಲವೇ ಉತ್ತರ ನೀಡಲಿದೆಂದರು. ಇನ್ನೂ ಕರ್ನಾಟಕ ಎರಡು ಕ್ಷೇತ್ರಗಳ ಉಪ ಚುನಾವಣೆಯ ಕೂಡಾ ನಾವು ಗೆಲ್ಲುತ್ತೇವೆ. ನಮ್ಮ ಕಾರ್ಯಕ್ರಮವನ್ನು ಜನ ಖುಷಿ ಪಡ್ತಿದ್ದಾರೆ ಕೇರಳ ಚುನಾವಣೆ ನಾನು ಸೇರಿದಂತೆ ಅನೇಕರು ಪ್ರಚಾರ ಮಾಡಿದ್ದೇವೆ ನಮ್ಮ ಮೈತ್ರಿಕೂಟಕ್ಕೆ ಮೆಜಾರಟಿ ಬರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಕೇರಳ ಅಭಿವೃದ್ಧಿಯಾಗಿಲ್ಲಾ ಅಲ್ಲಿ ರಾಜಕೀಯ ಪಕ್ಷಗಳಲ್ಲಿ ಶಿಸ್ತಿದೆ ಅವರಿಂದ ನಾವು ಕಲಿಯೋದು ಬಹಳಷ್ಟಿದೆಂದರು..
ಇನ್ನೂ ಆಟೋ ಚಾಲಕರು ಗ್ಯಾಸ್ ಬಿಟ್ಟು ಪೆಟ್ರೋಲ್ ಬಳಸಬೇಕು ಅನ್ನೋ ಸಚಿವ ಪ್ರಲ್ಹಾದ್ ಜೋಶಿಯವ ಹೇಳಿಕೆ ವಿಚಾರವಾಗಿ ಪ್ರಲ್ಹಾದ್ ಜೋಶಿ ಅವರು ರಾಜ್ಯದ ಹಿತಕ್ಕೆ ಸಹಾಯ ಮಾಡಬೇಕು. ಎರಡು ಶಿಪ್ ಗಳು ಬಂದವು. ಯಾಕೆ ಗುಜರಾತ್ ಗೆ ಇಳಿಸಿದ್ರು ಅವರು ಉತ್ತರ ಭಾರತ ಮಾತ್ರ ನೋಡ್ತಾರೆ. ದಕ್ಷಿಣ ಭಾರತ ನೋಡಲ್ಲಾ ಅಂತ ಆರೋಪಿಸಿದರು.




