Tuesday, November 18, 2025

Latest Posts

Tumakuru: ತಿಪಟೂರು ಜಿಲ್ಲಾಪಂಚಾಯ್ತಿ ಇಬ್ಬರು ಇಂಜಿನಿಯರ್ ಲೋಕಾಯುಕ್ತ ಬಲೆಗೆ

- Advertisement -

Tumakuru: ತಿಪಟೂರು: ಲಂಚ ಪಡೆಯುವ ವೇಳೆ ತಿಪಟೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿ ಸಹಾಯಕ ಇಂಜಿನಿಯರ್ ಸುಹಾಸ್ ಕಂಪ್ಯೂಟರ್ ಆಪರೇಟರ್ ಹರೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕಿನ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಕೆಲಸನಿರ್ವಹಿಸುತ್ತಿದ್ದ ಸ್ವಾಮಿ ಬಿ.ಸಿ ರವರು ಹಾಗೂ ಸಹಾಯಕ ಇಂಜಿನಿಯರ್ ಸುಹಾಸ್ ಕಂಪ್ಯೂಟರ್ ಆಪರೇಟರ್ ಹರೀಶ್ ತಾಲ್ಲೂಕಿನಲ್ಲಿ ನಡೆದ ಶಾಲೆಗಳ ಕಾಮಗಾರಿಯೊಂದಕ್ಕೆ ಬಿಲ್ ಮಾಡಲು ಹರೀಶ್ ಲಂಂಚ ಕೇಳಿದ್ದರು.

ಗುತ್ತಿಗೆದಾರ ಸುನಿಲ್ ಎಂಬುವರು ಲಂಚ ನೀಡಲು ಇಷ್ಟವಿಲ್ಲದ ಕಾರಣ ದಿನಾಂಕ 11.11.2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಲೋಕಾಯುಕ್ತರು ಅಧಿಕಾರಿಗೆ ಬಲೆ ಬೀಸಿದ್ದು, ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಲಂಚಪಡೆಯುವಾಗ ತಿಪಟೂರು ಜಿಲ್ಲಾಪಂಚಾಯ್ತಿ ಉಪವಿಭಾಗದ ಇಂಜಿನಿಯರ್ ಎಇಇ ಸ್ವಾಮಿ ಬಿ.ಸಿ ಲೋಕಾಯುಕ್ತರ. ಬಲೆಗೆ ಬಿದ್ದಿದ್ದಾರೆ.

ಸ್ಥಳದಲ್ಲಿಯೆ ಅಧಿಕಾರಿಯನ್ನ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದು.
ಇಂದು ತಿಪಟೂರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಲ್ಲಿ ಲೋಕಾಯುಕ್ತ ಇನ್ವೆಕ್ಟರ್ ರಾಜು ಟಿ ರವರ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದ್ದಾರೆ .

- Advertisement -

Latest Posts

Don't Miss