ಮನುಷ್ಯ ಜೀವನದಲ್ಲಿ ಸಫಲನಾಗಬೇಕಾದ್ರೆ ಕೆಲ ಗುಣಗಳನ್ನ ಹೊಂದಿರುಬೇಕು. ಅಂಥ ಗುಣಗಳಲ್ಲಿ 5 ಮುಖ್ಯ ಗುಣಗಳ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ.

ಮೊದಲನೆಯದಾಗಿ ನಾವು ನಮ್ಮ ಆಸೆ ಆಕಾಂಕ್ಷೆಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ದುಡ್ಡು ಇದೆ ಎಂದ ತಕ್ಷಣ ಕಣ್ಣಿಗೆ ಕಂಡಿದ್ದೆಲ್ಲ ತೆಗೆದುಕೊಳ್ಳುವುದು. ಖರ್ಚು ವೆಚ್ಚಗಳನ್ನ ಹೆಚ್ಚು ಮಾಡಿಕೊಳ್ಳಬಾರದು. ನಮ್ಮ ಆಸೆ ಆಕಾಂಕ್ಷೆ ಮಿತಿಯಲ್ಲಿದ್ದರೆ ನಮಗೆ ಖುಷಿ, ಆರೋಗ್ಯ, ನೆಮ್ಮದಿ ಎಲ್ಲವೂ ದೊರೆಯುತ್ತದೆ. ಯಾರಿಗೆ ಆಸೆ ಹೆಚ್ಚಿರುತ್ತದೆಯೋ ಅಂಥವನು ಜೀವನದಲ್ಲಿ ಎಂದೂ ಮುಂದೆ ಬರಲಾರ. ಮತ್ತು ತನ್ನ ದುಡಿಮೆಗಿಂತ ಕಂಡವರ ದುಡ್ಡಿನಲ್ಲೇ ಮೋಜು ಮಸ್ತಿ ಮಾಡಲು ಇಚ್ಛಿಸುವವನು ಸಫಲತೆ ಪಡೆಯಲಂತೂ ಸಾಧ್ಯವೇ ಇಲ್ಲ. ಹಾಗಾಗಿ ಇದ್ದುದರಲ್ಲೇ ನೆಮ್ಮದಿ ಕಾಣಬೇಕು.
ಎರಡನೇಯದಾಗಿ ನಾನು ಬೇರೆಯವರಿಗೆ ಒಳ್ಳೆಯದನ್ನೇ ಬಯಸಬೇಕು. ಇದರಿಂದ ನಮಗೆ ಒಳ್ಳೆಯದಾಗದಿದ್ದರೂ ಕೆಟ್ಟದ್ದಂತೂ ಆಗುವುದಿಲ್ಲ. ಬೇರೆಯವನ್ನ ಹೀಯಾಳಿಸಿಕೊಂಡು, ಬರೀ ಬೇರೆಯವರ ಕೊಂಕು ಕಂಡುಹಿಡಿದು ಬದುಕುವವನು ಎಂದೂ ಉದ್ಧಾರವಾಗಲು ಸಾಧ್ಯವಿಲ್ಲ. ಉದಾಹರಣೆಗೆ ನಾನು ಬೇರೆಯವರ ಬಗ್ಗೆ ಮಾತನಾಡಿದರೆ ಅದು ನಮ್ಮ ಬುಡಕ್ಕೆ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಎಲ್ಲರಿಗೂ ಒಳ್ಳೆಯನ್ನ ಬಯಸುವ ಗುಣ ನಮ್ಮಲ್ಲಿರಬೇಕು.
ಮೂರನೆಯದಾಗಿ ಜ್ಞಾನಾರ್ಜನೆಯನ್ನ ನಾವೆಂದು ತ್ಯಜಿಸಬಾರದು. ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಕಲಿಯುತ್ತಲೇ ಇರುತ್ತಾನೆ. ಶಾಲಾ -ಕಾಲೇಜು ಮುಗಿದ ಮೇಲೆ ಕಲಿಯುವುದು ಮುಗಿಯಿತು ಎಂದರ್ಥವಲ್ಲ. ಬದಲಾಗಿ ನಿಜವಾದ ಜೀವನದ ಪಾಠವನ್ನ ಅಲ್ಲಿಂದಲೇ ಕಲಿಯಲು ಶುರು ಮಾಡುತ್ತೇವೆ. ಹಾಗೆ ಸಾಯುವವರೆಗೂ ಪಾಠಗಳನ್ನ ಕಲಿಯುತ್ತಾ ಹೋಗುತ್ತೇವೆ. ಹಾಗಾಗಿ ನನಗೆ ಎಲ್ಲವೂ ಗೊತ್ತೆಂಬ ಅಹಂಕಾರ ಬಿಟ್ಟು ಹೊಸ ಹೊಸ ಜ್ಞಾನಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ. ಅಲ್ಲದೇ ಜ್ಞಾನಾರ್ಜನೆಯಿಂದಲೇ ನೀವು ಸಫಲರಾಗಲು ಸಾಧ್ಯ.
ನಾಲ್ಕನೇಯದಾಗಿ ನಿಮ್ಮ ಬಗ್ಗೆ ನಿಮಗೆ ಅಹಂಕಾರವಿರಬಾರದು. ಜನ ನಿಮ್ಮ ನಡುವಳಿಕೆ ಮತ್ತು ಮಾತಿನ ಮೂಲಕ ನಿಮ್ಮ ಅಹಂಕಾರವನ್ನು ಅಳಿಯುತ್ತಾರೆ. ಹಾಗಾಗಿ ಹಿತ ಮಿತವಾದ ಮಾತು ನಿಮ್ಮದಾಗಿರಲಿ.
ಐದನೇಯದಾಗಿ ವಿದ್ಯಾದಾನ ಮಾಡುವ ಗುಣ ನಿಮ್ಮಲ್ಲಿರಬೇಕು. ನಿಮ್ಮಲ್ಲಿರುವ ವಿದ್ಯೆಯನ್ನ ಇತರರಿಗೆ ಕಲಿಸುವುದರಿಂದ ನಿಮ್ಮಲ್ಲಿನ ಜ್ಞಾನವೂ ಹೆಚ್ಚುತ್ತದೆ.
ಈ ಐದು ನಿಯಮಗಳನ್ನ ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಸಫಲ ವ್ಯಕ್ತಿಯಾಗಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.