Tips: ನಿಮಗೆ ಯಾವಾಗಲಾದರೂ 3 ಸ್ಟಾರ್, 5 ಸ್ಟಾರ್ ಹೋಟೇಲ್‌ಗೆ ಹೋಗಿ ಅಲ್ಲಿ ಉಳಿಯುವ ಅವಕಾಶ ಸಿಕ್ಕಿದರೆ, ನೀವು ಅಲ್ಲಿಂದ ಏನನ್ನು ತರಬಹುದು, ಮತ್ತು ಏನನ್ನು ತರಬಾರದು ಅನ್ನೋ ಬಗ್ಗೆ ನಾವಿಂದು ನಿಮಗೆ ಟಿಪ್ಸ್ ನೀಡಲಿದ್ದೇವೆ.
ಅಲ್ಲಿ ಟೇಬಲ್ ಮೇಲೆ ನಿಮಗೆ ನೋಟ್ ಪ್ಯಾಡ್, ಪೇಪರ್ ಮತ್ತು ಪೆನ್ ಇರಿಸಿರುತ್ತಾರೆ. ನೀವು ಪೇಪರ್ -ಪೆನ್ನ ತರಬಹುದು. ನೋಟ್ ಪ್ಯಾಡ್ ತರಬಾರದು.
ಟೀ ಕಾಫಿ ಮಾಡಿ ಕುಡಿಯಲು ಮಗ್, ಕೆಟಲ್, ಸಕ್ಕರೆ ಪುಡಿ, ಟೀ-ಕಾಫಿ ಪುಡಿ ಇರಿಸಿರುತ್ತಾರೆ. ಆದರೆ ನೀವು ಮಗ್ ಮತ್ತು ಕೆಟಲ್ ತರಬಾರದು. ಕಾಫಿ- ಟೀ ಪುಡಿ, ಸಕ್ಕರೆ ಪುಡಿ ತರಬಹುದು.
ನೀರಿನ ಬಾಟಲಿ ತರಬಹುದು. ಅಲ್ಲೇ ಇರುವ ಕಪ್ ತರಬಾರದು.
ಇನ್ನು ಬಾತ್ ರೂಮ್‌್ನಲ್ಲಿ ಟವೆಲ್, ಶ್ಯಾಂಪೂ, ಬ್ರಶ್, ಸೋಪ್, ಇತ್ಯಾದಿ ಇಡುತ್ತಾರೆ. ನೀವು ಶ್ಯಾಂಪೂ, ಬ್ರಶ್, ಸೋಪ್, ಎಲ್ಲ ತರಬಹುದು. ಆದರೆ ಟವಲ್ ತರಕೂಡದು.
ಲಾಂಡ್ರಿ ಬ್ಯಾಗ್, ಹ್ಯಾಂಗರ್, ಮತ್ತು ಕೆಲ ಬಟ್ಟೆಗಳನ್ನು ಇರಿಸಿರುತ್ತಾರೆ. ನೀವು ಲಾಂಡ್ರಿ ಬ್ಯಾಗ್ ಮಾತ್ರ ತರಬಹುದು. ಆದರೆ ಹ್ಯಾಂಗರ್, ಮತ್ತು ಬಟ್ಟೆಗಳನ್ನು ತರಬಾರದು.
ಫ್ರಿಜ್‌ನಲ್ಲಿ ಕೆಲ ಡ್ರಿಂಕ್ಸ್ ಇಡುತ್ತಾರೆ. ಕೆಲವು ಕಡೆ ನೀವು ಅಲ್ಲೇ ಆ ಡ್ರಿಂಕ್ಸ್ ಕುಡಿಯಬಹುದು. ಮನೆಗೆ ತಗೆದುಕ“ಂಡು ಹೋಗುವಂತಿಲ್ಲ.
ಶೂ ಪಾಲಿಶ್ ಮಾಡಲು, ಬ್ರಶ್ ಮತ್ತು ಶೂ ಶೈನರ್ ಇಡುತ್ತಾರೆ. ಇದರಲ್ಲಿ ಶೂ ಶೈನರ್ ತರಬಹುದು ಆದ್ರೆ ಶೂ ಬ್ರಶ್ ಅಲ್ಲ. ಇನ್ನು ಅಲ್ಲಿನ ವಸ್ತುವನ್ನು ತರುವ ಭರದಲ್ಲಿ, ನೀವು ನಿಮ್ಮ ವಸ್ತುವನ್ನೇನಾದರೂ ಬಿಟ್ಟೀದ್ದೀರಾ ಅಂತಾ ಚೆಕ್ ಮಾಡಬೇಕು ಅಷ್ಟೇ.