Monday, October 20, 2025

Latest Posts

ಡಾ. ವೀರೇಂದ್ರ ಹೆಗಡೆಯವರು ಕಾರ್ಯುದ ಬಗ್ಗೆ ತಿಪಟೂರು ತಹಶೀಲ್ದಾರ್ ಮೋಹನ್ ಕುಮಾರ್ ಮೆಚ್ಚುಗೆ

- Advertisement -

Tipaturu: ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ಬಸವೇಶ್ವರ ನಗರ ಕಾರ್ಯಕ್ಷೇತ್ರದ ಗಾಂಧಿನಗರದ ಮಾಶಾಸನ ಸದಸ್ಯರಾದ ರಾಣಿಯಮ್ಮ w/o ಲೇಟ್ ರಾಜಪ್ಪ ರವರವರಿಗೆ ವಾತ್ಸಲ್ಯ ಮನೆ ರಚನೆ ಮಾಡಿದ್ದು ಈ ದಿನ ತಾಲ್ಲೂಕಿನ ದಂಡಾಧಿಕಾರಿಗಳಾದ ಮೋಹನ್, ಕುಮಾರ್ ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಸರ್ ಇವರಿಂದ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು.

ತಾಲ್ಲೂಕು ದಂಡಾಧಿಕಾರಿ ಮೋಹನ್ ಕುಮಾರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 800 ವರ್ಷದ ಇತಿಹಾಸವಿದೆ ಶ್ರೀ ಕ್ಷೇತ್ರದಲ್ಲಿ ಚತುರ್ಧಾನದಲ್ಲಿ ಅನ್ನದಾನ, ವಿದ್ಯಾದಾನ, ಔಷಧ ದಾನ, ಅಭಯದಾನ ನಡೆಯುತ್ತಿದೆ. ಸಮಾಜದಲ್ಲಿ ನೊಂದವರನ್ನು ಗುರುತಿಸಿ ಭೂಮಿಯ ಮೇಲೆ ಬದುಕಲು ಧೈರ್ಯತುಂಬಿ ಸಾಂತ್ವನದ ನುಡಿಗಳ ಜೊತೆ ಜೀವನ ಪರ್ಯಂತ ಪ್ರತಿ ತಿಂಗಳು ಮಾಶಾಸನ ಕೊಡುವುದರೊಟ್ಟಿಗೆ ಸೂರು ಇಲ್ಲದವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಕೊಡುತ್ತಿರುವುದು ಮನುಷ್ಯ ತ್ವ ಇನ್ನು ಉಳಿದಿದ್ದು ಈ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಸ್ಥಳ ಪದೇ ಪದೇ ಸಾಭೀತು ಪಡಿಸುತ್ತಿದೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತೃಶ್ರೀ ಹೇಮಾವತಿ ಅಮ್ಮನವರು ನೊಂದವರ ಕಣ್ಣೇರು ವರಿಸುತ್ತಿರುವುದು ಆಧುನಿಕ ಸಮಾಜದ ಮಾತೃ ಶಕ್ತಿ ಆಗಿದ್ದು ಸಮಾಜಕ್ಕೆ ಇನ್ನಷ್ಟು ಸೇವೆ ಕೊಡಲು ಎಲ್ಲಾ ದೈವ ದೇವರುಗಳ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದರು.

ನಂತರ ಜಿಲ್ಲಾ ನಿರ್ದೇಶಕರು ಸತೀಶ್ ಸುವರ್ಣ ಮಾತನಾಡಿ ತಿಪಟೂರ್ ತಾಲೂಕಿನಲ್ಲಿ ಒಟ್ಟು 10ವಾತ್ಸಲ್ಯ ಮನೆ ರಚನೆ ಆಗಿದೆ ಹಾಗೆಯೇ ರಾಜ್ಯದಲ್ಲಿ ಒಟ್ಟು 666 ವಾತ್ಸಲ್ಯ ಮನೆ ರಚನೆ ಆಗಿದೆ. ಜೊತೆಗೆ ಮಾಶಾಸನ ಫಲಾನುಭವಿಗಳಿಗೆ ತಾಲೂಕಿನಲ್ಲಿ 203 ವಾತ್ಸಲ್ಯ ಕಿಟ್ ಅಂದರೆ ಬಟ್ಟೆ ಚಾಪೆ, ದಿಂಬು, ಹೊದಿಕೆ, ಪಾತ್ರೆ ನೀಡಲಾಗುತ್ತಿದೆ ಹಾಗೆ ವಾತ್ಸಲ್ಯ ಮಿಕ್ಸ್ 19 ವಿತರಣೆ ಮಾಡಲಾಗುತ್ತದೆ ಹಾಗೆ ಪ್ರತಿ ತಿಂಗಳು 1000 ದಿಂದ 3000/-ದಂತೆ ಮಾಶಾಸನ ನೀಡಲಾಗುತ್ತಿದೆ. ಹಾಗೆ 15 ಕೆರೆಕಾಮಗಾರಿ, 27ಶುದ್ಧಗಂಗಾ ಗಂಗಾ ಘಟಕ,800ವಿದ್ಯಾರ್ಥಿಗಳಿಗೆ 95ಲಕ್ಷ ರೂ ಸುಜ್ಞಾನನಿಧಿ ಶಿಷ್ಯ ವೇತನ, 2ಮನೆ ರಿಪೇರಿ1ಸೋಲಾರ್ ಅಳವಡಿಕೆ 1ಶೌಚಾಲಯ ರಚನೆ ಮಾಡಲಾಗಿದೆ ಎಂದರು.

ಸಂದರ್ಭದಲ್ಲಿ,ನಗರ ಸಭೆಯ ಪ್ರಭಾರ ಅಧ್ಯಕ್ಷರು ಮೇಘಶ್ರೀ ಸುಚಿತ್ ಭೂಷಣ್ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರಾದ ಉದಯ್ ಕೆ, ಮಾಜಿ ನಗರಸಭೆ ಅಧ್ಯಕ್ಷರಾದ ರಾಮ್ ಮೋಹನ್ ನಗರ ಸಭೆ ಸದಸ್ಯ ಸೊಪ್ಪು ಗಣೇಶ್ ಲತಾ ಲೋಕೇಶ್ ತರಕಾರಿ ಗಂಗಾಧರ್, ಹರೀಶ್, ಮಹಾದೇವಮ್ಮ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಎಮ್ ಡಿ. ಮೇಲ್ವಿಚಾರಕರು, ಜಯಪ್ರಸಾದ್, ಮೇಸ್ತ್ರಿ ಇರ್ಶಪ್ಪ ಸೇವಾಪ್ರತಿನಿಧಿ ಶತಾಜ್. VLE ಹೇಮಾ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

- Advertisement -

Latest Posts

Don't Miss