ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..!
“ತಿಥಿ” ಸಿನಿಮಾ ಖ್ಯಾತಿಯ ನಟಿ ಪೂಜಾ ಎಂಗೇಜಾಗಿದ್ದಾರೆ. ಅಂತರಾಷ್ಟಿçÃಯ ಮಟ್ಟದಲ್ಲಿ ಕನ್ನಡ ಸಿನಿಮಾವೊಂದು ಸದ್ದು ಮಾಡಿತ್ತು. ಕಡಿಮೆ ಬಜೆಟ್‌ನಲ್ಲೇ ತಯಾರಾಗಿದ್ದ ಅದ್ಭುತ ಕಥೆ ಹೊಂದಿದ್ದ ತಿಥಿ ಸಿನಿಮಾ ರಿಲೀಸಾಗಿ ಎಲ್ಲೆಡೆ ಸಖತ್ ಸೌಂಡ್ ಮಾಡಿತ್ತು. ಈ ಸಿನಿಮಾ ಮೂಲಕ ಸಾಕಷ್ಟು ಕಲಾವಿದರ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಿತ್ತು. ಗಡ್ಡಪ್ಪನ ಜೊತೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪೂಜಾ ನಟಿಸಿದ್ದರು.
ಇದೀಗ ದಿಢೀರಂತ ನಟಿ ಪೂಜಾ ಮತ್ತೆ ಸುದ್ದಿಯಾಗಿದ್ದಾರೆ. ಅರೇ ಯಾವ ವಿಷಯಕ್ಕೆ ಅಂತೀರಾ, ಹೌದು, ತಿಥಿ ಖ್ಯಾತಿ ಪೂಜಾ ಕೆಲವು ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಪೂಜಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಪೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊAಡಿದ್ದಾರೆ. ಪ್ರೇಮ್ ಜೊತೆ ಪೂಜಾ ರಿಂಗ್ ಬದಲಿಸಿಕೊಂಡಿದ್ದು, ಪ್ರೇಮ್ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸ್ತಿದ್ದಾರೆ.
ಸದ್ಯ ಪೂಜಾ ನಿಶ್ವಿತಾರ್ಥ ನೆರವೇರಿದೆ. ಇನ್ನು ಈ ವರ್ಷ ಕೊನೆಯಲ್ಲಿ ಅಂದ್ರೆ, ಡಿಸೆಂಬರ್ ತಿಂಗಳ 3 ಮತ್ತು 4ರಂದು ಪೂಜಾ ಹಾಗೂ ಪ್ರೇಮ್ ಅವರ ವಿವಾಹ ಜರುಗಲಿದೆ ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ವರ್ಷ ಕೊನೆಯಲ್ಲಿ ಪೂಜಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.