Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದ ಜತೆ ಮಾತನಾಡಿದ್ದು, ಸಿಎಂ ಆಗುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಆಗಲು ಗುರುಬಲ, ತಾರಾ ಬಲ ಕೂಡಬೇಕು ಶನಿಕಾಟ ಕಡಿಮೆಯಾಗಬೇಕು. ಒಬ್ಬಬ್ಬರಿಗೆ ಒಂದೊಂದು ರೀತಿ ಸಮಸ್ಯೆ ಇವೆ ಎಂದಿದ್ದಾರೆ.
ಸಿಎಂ ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿರುವ ಸಚಿವರು, ಯಾವುದೇ ನಿಗಮ ಮಂಡಳಿ ನೇಮಕ ಪೈನಲ್ ನ್ನು ರಾಹುಲ್ ಗಾಂಧಿಗೆ ಹೇಳಿ ಮಾಡ್ತಾರೆ. ವಾರಕ್ಕೋಮ್ಮೆ ದೇಹಲಿಗೆ ಹೋದ್ರು ಕಡಿಮೆ. ನಿಗಮ ಮಂಡಳಿ ಚರ್ಚೆಗೆ ಹೋಗಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿಲ್ಲ. ರಾಜ್ಯಾಧ್ಯಕ್ಷ ಬದಲಾವಣೆ ಅರ್ಜೆಂಟ್ ಇಲ್ಲ. ನಮ್ಮ ಅಭಿಪ್ರಾಯ ನಾವು ಹೇಳಿರಬಹುದು.ಆದ್ರೆ ಯಾವುದು ಸೂಕ್ತ ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ.
ಎರಡು ಹುದ್ದೆ ಇದ್ದಾವೆ, ಅಧ್ಯಕ್ಷರು ಇದ್ದಾರೆ. ಆದ್ರು ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಧ್ಯಕ್ಷರಾಗಲು ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ಸೆಪ್ಟೆಂಬರ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ನಾನು ರಾಜಣ್ಣ ಅವರು ಭೇಟಿಯಾದಾಗ ಕೇಳ್ತೇನೆ. ಅಧ್ಯಕ್ಷ ಮತ್ತು ಡಿಸಿಎಂ ಬದಲಾವಣೆ ಬಿಟ್ಟು ಬೇರೆ ಕ್ರಾಂತಿ ಆಗಬಹುದು ಎಂದು ಸಚಿವ ಸತೀಶ್ ಹೇಳಿದ್ದಾರೆ.
ಯತಿಂದ್ರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮಹಾರಾಜರು ಸಮಾಜ ಸುಧಾರಕರು. ಸಿದ್ದರಾಮಯ್ಯ ಕೂಡ ಸಮಾಜ ಸುಧಾಕರು. ಕಳೆದ ಮೂವತ್ತು ವರ್ಷದಲ್ಲಿ ಸಿದ್ದರಾಮಯ್ಯ ಅನೇಕ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಹೋಲಿಕೆ ಮಾಡಿರಬಹುದು. ಅವರ ವ್ಯಕ್ತಿತ್ವ ಅವರಿಗೆ ಇರುತ್ತೆ. ಇವರ ವ್ಯಕ್ತಿತ್ವ ಇವರಿಗೆ ಇರುತ್ತದೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇದೆ. ಸರಬರಾಜು ಮಾಡೋದು ಕೇಂದ್ರ ಸರ್ಕಾರ, ಹಂಚಿಕೆ ಮಾಡೋದು ರಾಜ್ಯ ಸರ್ಕಾರ. ಎರಡು ಸರ್ಕಾರ ಕೂಡಿ ಸಮಸ್ಯೆ ಬಗೆಹರಿಸಬೇಕು ಎಂದು ಸಚಿವರು ಹೇಳಿದ್ದಾರೆ.
ಮಹದಾಯಿ ವಿಳಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರ ಗಂಭೀರವಾಗಿ ತಗೆದುಕೊಳ್ತಿಲ್ಲ. ಆದಷ್ಟು ಬೇಗನೆ ಪರವಾನಗಿ ಕೊಡೋ ಕೆಲಸ ಕೇಂದ್ರ ಮಾಡಬೇಕು. ನೂರು ವರ್ಷ ಹಿಂದೆ ಆರ್ ಎಸ್ ಎಸ್ ಇರಲಿಲ್ಲ. ಆಗ ಕೂಡಾ ಭಾರತ ಹಿಂದೂರಾಷ್ಟ್ರವಾಗಿತ್ತು. ಮತದಾರರನ್ನು ಹೆದರಿಸಲು ಬಿಜೆಪಿಯವರು ಆ ರೀತಿ ಹೇಳ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.