Health Tips: ನಮ್ಮ ದೇಶದಲ್ಲಿ ಹಲವು ಹೆಂಗಸರು, 1 ಬಾರಿ ಮಾಡಿದ ಸಾಂಬಾರನ್ನು ಬಿಸಿ ಮಾಡಿ ಮಾಡಿ, 4 ದಿನ ಬಳಸಿ, ಸೇವಿಸುತ್ತಾರೆ. ಆದರೆ ಇದರಿಂದ ಅವರ ಅಥವಾ ಅವರ ಮನೆಯವರ ಆರೋಗ್ಯಕ್ಕೇನೂ ಹಾನಿಯಾಗಿಲ್ಲ. 100ರಲ್ಲಿ 1 ಅಥವಾ ಇಬ್ಬರಿಗೆ ಜೀರ್ಣಕ್ರಿಯೆ ಸಮಸ್ಯೆ ಆಗಿರಬಹುದೇನೋ, ಆದರೆ ಹಲವರು ಈಗಲೂ ಇದೇ ರೀತಿ ಇದ್ದಾರೆ.
ಅವರ ಆರೋಗ್ಯ ಏಕೆ ಚೆನ್ನಾಗಿದೆ ಎಂದರೆ, ಅವರಿಗೆ ಆ ಆಹಾರ ದೇಹಕ್ಕೆ ಓಗ್ಗಿಕ“ಂಡಿದೆ. ಆದರೆ ಇಂದಿನ ಕಾಲದಲ್ಲಿ ತಯಾರಿಸುವ ಕೆಲ ಆಹಾರಗಳನ್ನು ನಾವು ಎಂದಿಗೂ ಪದೇ ಪದೇ ಬಿಸಿ ಮಾಡಿ ಮಾಡಿ, ಸೇವಿಸಬಾರದು. ಹಾಗೆ ಮಾಡಿದ್ದಲ್ಲಿ, ಕ್ಯಾನ್ಸರ್‌ನಂಥ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಎಂಥ ಆಹಾರಗಳನ್ನು ನಾವು ಸೇವಿಸಬಾರದು ಅಂತಾ ತಿಳಿಯೋ ಬನ್ನಿ..
ಅನ್ನವನ್ನು ಪದೇ ಪದೇ ಬಿಸಿ ಮಾಡಬಾರದು. ನೀವು ಅನ್ನ ಮಾಡಿದ ಬಳಿಕ, ಅಂದೇ ಆ ಅನ್ನದ ಸೇವನೆ ಮಾಡಿಬಿಡಿ. ಅಥವಾ ಆ ಸಮಯದಲ್ಲೇ ಅನ್ನದ ಸೇವನೆ ಮಾಡಿಬಿಡಿ. ಅದನ್ನು ಪದೇ ಪದೇ ಬಿಸಿ ಮಾಡುವುದರಿಂದ ಫುಡ್ ಪಾಯ್ಸಿನ್ ಆಗುವ ಸಾಧ್ಯತೆ ಇರುತ್ತದೆ.
ಇನ್ನು ಬಜ್ಜಿ, ಬೋಂಡಾ, ಸಂಡಿಗೆ ಹೀಗೆ ಇಂಥ ತಿಂಡಿಗಳನ್ನು ಕರಿದ ಎಣ್ಣೆಯನ್ನು ಪದೇ ಪದೇ ಬಳಸಬೇಡಿ. ಹಾಳಾಗುತ್ತದೆ ಎಂದು ನೀವು ಎಣ್ಣೆಯನ್ನು ಪದೇ ಪದೇ ಬಳಸಿ, ಖಾಲಿ ಮಾಡಲು ಪ್ರಯತ್ನಿಸಿದರೆ, ನಿಮ್ಮ ಆರೋಗ್ಯವೂ ಅದೇ ರೀತಿ ಹಾಳಾಗುತ್ತದೆ.
ಮಶ್ರೂಮ್‌ನಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಇದನ್ನು ಪದೇ ಪದೇ ಬಿಸಿ ಮಾಡುವುದರಿಂದ, ಪ್ರೋಟೀನ್ ಪ್ರಮಾಣ ತೀರಾ ಕಡಿಮೆಯಾಗಬಹುದು. ಆಗ ನೀವು ಆ ಆಹಾರ ತಿಂದೂ ಪ್ರಯೋಜನವಾಗುವುದಿಲ್ಲ.
ಚಿಕನ್ ಮತ್ತು ಎಗ್‌ನ್ನು ಕೂಡ ಪದೇ ಪದೇ ಬಿಸಿ ಮಾಡಬಾರದು. ಅದೇ ರೀತಿ ಚೈನೀಸ್ ತಿನಿಸುಗಳನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದು ವಿಷಕಾರಿಯಾಗುತ್ತದೆ. ಹಾಗೆ ಪದೇ ಪದೇ ಬಿಸಿ ಮಾಡಿ ಸೇವಿಸಿ, ಹಲವರು ಪ್ರಾಣ ಕಳೆದುಕ“ಂಡಿದ್ದಾರೆ.