Wednesday, November 26, 2025

Latest Posts

ಹುಟ್ಟೂರಿನ ದಾಹ ನೀಗಿಸಲು ಭಗೀರಥನಾದ S.L. ಭೈರಪ್ಪ

- Advertisement -

ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರ ಹುಟ್ಟೂರು, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ನೀರವ ಮೌನ ಆವರಿಸಿದೆ. ಭೈರಪ್ಪನವ್ರು ಹುಟ್ಟೂರಿನ ಅಭಿವೃದ್ಧಿಯ ಕನಸು ಕಂಡಿದ್ರಂತೆ. ದಶಕಗಳ ಕಾಲ ಈ ಭಾಗದ ಕೆರೆಗಳು ತುಂಬದೇ ರೈತರು ಸಂಕಷ್ಟದಲ್ಲಿ ಇದ್ದಿದ್ದನ್ನು ಗಮನಿಸಿದ್ರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಸಿಎಂ ಆಗಿದ್ದಾಗ, ಏನ ನೀರಾವರಿ ಅನುಷ್ಠಾನಕ್ಕೆ 25 ಕೋಟಿ ರಿಲೀಸ್‌ ಮಾಡಿಸಲು ಭಾರೀ ಶ್ರಮ ಪಟ್ಟಿದ್ರು. ಬೊಮ್ಮಾಯಿ ಸಿಎಂ ಆದಾಗ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಸಿದ್ದರಾಮಯ್ಯ ಸಿಎಂ ಆದ ಬಳಿಕ ಹಣ ಬಿಡುಗಡೆ ಮಾಡಿದ್ರು. ಭೈರಪ್ಪನವರ ಅಪಾರ ಶ್ರಮದಿಂದ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲಾಗಿದೆ.

 

ಹೇಮವಾತಿ ಮುಖ್ಯನಾಲೆಯ ಕಾರೇಹಳ್ಳಿ ಬಳಿಯ ಜಾಬ್‌ಘಟ್ಟ ಗ್ರಾಮದ, ನಾಗಮಂಗಲ ಉಪನಾಲೆಯಿಂದ ಸುಮಾರು 11 ಕಿಲೋ ಮೀಟರ್‌ ಪೈಪ್‌ಲೈನ್‌ ಮಾಡಲಾಗಿದೆ. ಅಲ್ಲಿಂದ ರಾಂಪುರ ಗೇಟ್‌ ಬಳಿಯ ವಿತರಣಾ ತೊಟ್ಟಿಯಿಂದ ನೀರು ಹರಿಸಲಾಗುತ್ತಿದೆ. ಇದ್ರಿಂದ 20ಕ್ಕೂ ಹೆಚ್ಚು ಗ್ರಾಮಗಳ ನೀರಿನ ಕೊರತೆ ನೀಗುತ್ತಿದೆ. ಪ್ರಾರಂಭದಲ್ಲಿ ಯೋಜನೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ರು. ಆಗ ಭೈರಪ್ಪನವರೇ ರೈತರನ್ನೆಲ್ಲಾ ಭೇಟಿಯಾಗಿ ಮನವಿ ಮಾಡಿ ಒಪ್ಪಿಸಿದ್ರು.

ಹುಟ್ಟೂರು ಸಂತೇಶಿವರಲ್ಲಿ ಭೈರಪ್ಪನವರ ಮನೆ ಇದೆ. ತಾಯಿ ಗೌರಮ್ಮ ಹೆಸರಲ್ಲಿ ಗ್ರಂಥಾಲಯ ಆರಂಭಿಸಿದ್ರು. 5 ಕೋಟಿ ವೆಚ್ಚದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ ಕಾಮಗಾರಿ ನಡೀತಿದೆ. ಇನ್ನು, ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ಬಗ್ಗೆ ಭೈರಪ್ಪನವ್ರು ಉಯಿಲು ಬರೆದಿದ್ರು. ಹೀಗಾಗಿ ಗ್ರಾಮದಲ್ಲಿ ಭೈರಪ್ಪನವರ ಹೆಸರು ಶಾಶ್ವತವಾಗಿ ಉಳಿಯಬೇಕಾದ್ರೆ, ಅವರ ಅಂತ್ಯಸಂಸ್ಕಾರವನ್ನು ಹುಟ್ಟೂರಲ್ಲೇ ಮಾಡುವಂತೆ, ಒತ್ತಾಯಿಸಲಾಗಿದೆ.

- Advertisement -

Latest Posts

Don't Miss