ಸುಪ್ರೀಂಕೋರ್ಟ್‌ನಲ್ಲಿ ಇವತ್ತು ಯಾರೂ ಊಹಿಸದ ಘಟನೆಯೊಂದು ನಡೆದಿದೆ. ವಿಚಾರಣೆ ನಡೆಯುತ್ತಿದ್ದ ವೇಳೆ, ಮುಖ್ಯ ನ್ಯಾಯಮೂರ್ತಿಗಳಿದ್ದ ಪೀಠದತ್ತ ಶೂ ಎಸೆಯಲಾಗಿದೆ. ಚೀಫ್ ಜಸ್ಟೀಸ್ ಬಿ.ಆರ್. ಗವಾಯಿ ಅವರು ವಿಚಾರಣೆ ನಡೆಸುತ್ತಿದ್ದು, ನ್ಯಾಯ ಪೀಠದ ಎದುರೇ ನಿಂತು ಶೂ ಎಸೆಯಲಾಗಿದೆ.
ಶೂ ಎಸೆದಾತನನ್ನ ವಕೀಲ ರಾಜಶೇಖರ್ ಕಿಶೋರ್ ಎಂಬುದಾಗಿ ಗುರುತಿಸಲಾಗಿದೆ. ವಿಚಾರಣೆ ಆರಂಭವಾಗ್ತಿದ್ದಂತೆ ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ ಎಂದು ಜೋರಾಗಿ ಕಿರುಚುತ್ತಾ ಬಂದು, ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿದ್ದಾನೆ.
ತಕ್ಷಣವೇ ಭದ್ರತಾ ಸಿಬ್ಬಂದಿ ಆ ವಕೀಲನನ್ನ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬಂಧಿತನನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಘಟನೆ ಬಗ್ಗೆ ಚೀಫ್ ಜಸ್ಟೀಸ್ ಬಿ.ಆರ್. ಗವಾಯಿ ಪ್ರತಿಕ್ರಿಯಿಸಿದ್ದು, ಇಂಥಾ ವಿಷಯಗಳಿಗೆ ಒಳಪಟ್ಟ ಕೊನೆಯ ವ್ಯಕ್ತಿ ನಾನಾಗಬೇಕು. ಇಂಥಾ ಘಟನೆಗಳಿಂದ ನಾನು ವಿಚಲಿತನಾಗುವುದಿಲ್ಲ ಎಂದು ಹೇಳಿದ್ದಾರೆ.
ಹಿರಿಯ ನ್ಯಾಯಶಾಸ್ತ್ರಜ್ಞರಾದ ಇಂದಿರಾ ಜಯ್‌ಸಿಂಗ್ ಈ ಕುರಿತು ಮಾತನಾಡಿದ್ದಾರೆ. ತಪ್ಪಿತಸ್ಥ ವಕೀಲನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಘಟನೆ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.