International news
ಬೆಂಗಳೂರು(ಫೆ.14): ಇಂದು ವಿಶ್ವ ಕರಾಳ ದಿನ. ಈ ದಿನ 2019 ರ ವೇಳೆ ಭಯೋತ್ಪಾದಕರು ಪುಲ್ವಾಮದಲ್ಲಿ ನಡೆಸಿದ ದಾಳಿಯಲ್ಲಿ 40 ಜನ ಸಿಆರ್ ಪಿ ಎಫ್ ಯೋಧರು ಮರಣ ಹೊಂದಿದ ದಿನವಾಗಿದೆ. ಈ ದಿನ ವೀರ ಮರಣವನ್ನಪ್ಪಿದ ಯೋಧರಿಗೆ ನಮನ ಸಲ್ಲಿಸಲಾಗುತ್ತಿದೆ.
ವೀರ ಯೋಧರನ್ನು ನೆನೆದ ಮೋದಿ!
ಈ ದಿನ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಈ ದಿನ ನಾವು ಪುಲ್ವಾಮಾದಲ್ಲಿ ಕಳೆದುಕೊಂಡ ನಮ್ಮ ವೀರ ವೀರರನ್ನು ಸ್ಮರಿಸುತ್ತಿದ್ದೇವೆ. ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ನಮ್ಮನ್ನು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಪ್ರೇರೇಪಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ. ಪುಲ್ವಾಮಾ ದಾಳಿಯ ವೇಳೆ ಪ್ರತೀಕಾರ ತೀರಿಸಿಕೊಂಡಿದ್ದ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿತ್ತು.
ಅಂದು ಏನಾಗಿತ್ತು ..?
ಅಂದು 2019 ಫೆಬ್ರವರಿ 14 ರಂದು ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಸಿಆರ್ ಪಿಎಫ್ ಸಿಬ್ಬಂದಿ ಹೊತ್ತ 78 ವಾಹನಗಳು ಸಾಲಾಗಿ ಬರುತ್ತಿದ್ದವು. ಅವಂತಿಪುರ ಬಳಿಯ ಲೆತ್ಪೂರ ಎಂಬಲ್ಲಿ ಇಕ್ಕಟ್ಟಿನ ರಸ್ತೆಯಲ್ಲಿ ನುಗ್ಗಿದ 300 ಕೆಜಿ ಆರ್ ಡಿಎಕ್ಸ್ ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಬಸ್ ವೊಂದಕ್ಕೆ ಡಿಕ್ಕಿ ಹೊಡೆಸಿ ಸ್ಪೋಟಿಸಲಾಯಿತು. ಈ ವೇಳೆ 40 ಯೋಧರು ಹುತಾತ್ಮರಾದರು.