ಮಳವಳ್ಳಿ
ನಾಳೆ ಪಟ್ಟಲದಮ್ಮದೇಗುಲ ಉದ್ಘಾಟನೆ!
ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಅಂತರವಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಪಟ್ಟಲದಮ್ಮದೇವಿಯ ದೇವಾಲಯದ ಉದ್ಘಾಟನಾ ಸಮಾರಂಭ ಜೂನ್ 22 ಮತ್ತು 23 ರಂದು ಅಗಸನಪುರ ಗುರು ಮಠದ ಚಂದ್ರಶೇಖರ ಆರಾಧ್ಯ ಅವರ ಸಾನ್ನಿಧ್ಯದಲ್ಲಿ ನಡೆಯಲಿದೆ. ಜೂ 22ರಂದು ಸಂಜೆ 5 ಗಂಟೆಗೆ ಅಂತರವಳ್ಳಿ ಸಿದ್ದೇಶ್ವರ ಸ್ವಾಮಿ ಬಸಪ್ಪ ಮತ್ತು ಹಲಗೂರು ಪಟ್ಟಲದಮ್ಮ ದೇವಿಯ ಬಸಪ್ಪ ದೇವರ ಸಮ್ಮುಖದಲ್ಲಿ ಗಂಗೆಯ ದಡದಿಂದ ಕುಂಭಗಳ ಸಮೇತ ದೇವಾಲಯ ಪ್ರವೇಶ ಪುಣ್ಯಾಗ್ರ, ನವಗ್ರಹ ಹೋಮ, ರಾಕ್ಷಪ್ಪ ಹೋಮ, ಗಣ ಹೋಮ, ನಂದಿ ಪೂಜೆ ಕಾರ್ಯಕ್ರಮಗಳು ನಡೆಯಲಿವೆ.
ಐದು ರೂಪಾಯಿ ವೈದ್ಯ ಶಂಕರೇಗೌಡ ಚೇತರಿಕೆ!
ಹೃದಯಾಘಾತದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಐದು ರೂಪಾಯಿ ಡಾಕ್ಟರ್ ಖ್ಯಾತಿಯ ಶಂಕರೇಗೌಡ ಅವರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲ ದಿನದ ಹಿಂದೆ ಅನಾರೋಗ್ಯದಿಂದ ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಂಕರೇಗೌಡ ಅವರಿಗೆ ಜೂ.19ರಂದು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.
ಪ್ರಾಂಶುಪಾಲರ ವಿರುದ್ಧ ಕೈ ಮಾಡಿದ್ದ ಜೆಡಿಎಸ್ ಶಾಸಕ; ಬಹಿರಂಗವಾಗಿ ಕ್ಷಮೆ ಕೇಳುವಂತೆ ವಿಧ್ಯಾರ್ಥಿಗಳ ಆಗ್ರಹ!
ಕಾಲೇಜು ಪ್ರಾಂಶುಪಾಲರ ಮೇಲೆ ಶಾಸಕರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜಿನ ಪ್ರಾಂಶುಪಾಲರ ಮೇಲೆ ಶಾಸಕ ಎಂ.ಶ್ರೀನಿವಾಸ್ ಕಪಾಳಕ್ಕೆ ಬಾರಿಸಿ ಹಲ್ಲೆ ನಡೆಸಿದ್ದರು.
ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರ ಇದೆ ಅಂತಾ ಈ ರೀತಿಯ ದರ್ಪವನ್ನ ಯಾರು ತೋರಿಸಬಾರದು. ತಕ್ಷಣವೇ ಶಾಸಕ ಎಂ.ಶ್ರೀನಿವಾಸ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ನಾಗಮಂಗಲ
ಗುಬ್ಬಿಟೀಂಗೆ ಮೊದಲ ಬಹುಮಾನ!
ನಾಗಮಂಗಲ ಪಟ್ಟಣದಲ್ಲಿ ಮಾಜಿ ಸಚಿವ ಚೆಲುವರಾಯಸ್ವಾಮಿ ರವರ 60 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಓಂ ಕ್ರಿಕೆ ಟರ್ಸ್ ಯುವಕರ ತಂಡದ ವತಿಯಿಂದ ಮೂರು ದಿನ ಗಳ ರಾಜ್ಯಮಟ್ಟದ ಕ್ರಿಕೆಟ್ ಟೂರ್ನ ಮೆಂಟ್ಆ ಯೋಜನೆ ಮಾಡಲಾಗಿತ್ತು. ಪಟ್ಟಣದ ಜ್ಯೂನಿಯರ್ ಕಾಲೇಜು ಮೈದಾನದ ಆವರಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀ ಡಾಪಟುಗಳಿಗೆ ಮೊದಲ ಬಹುಮಾನವನ್ನು ಆರ್. ಆರ್. ಗುಬ್ಬಿ ಟೀಮ್ ಟ್ರೋಫಿ ಹಾಗೂ ಐವತ್ತು ಸಾವಿರ ನಗದನ್ನು, ದ್ವಿತೀಯ ಬಹುಮಾನವನ್ನು ನಾಗಮಂಗಲ ಥ್ಯಾಂಕ್ಸ್ ಫೀಲ್ಡ್ ಬುಲೆಟ್ ಟೀಮ್, ಮೂವತ್ತು ಸಾವಿರ ನಗದು ಟ್ರೋಫಿ. ತೃತೀಯ ಬಹುಮಾನ ದಿಶಾ ಮೈಸೂರು ಟೀಮ್, ಇಪತ್ತು ಸಾವಿರ ನಗದು ಹಾಗೂ ಟ್ರೋಫಿ. ನಾಲ್ಕನೇ ಬಹುಮಾನ ನಾಗಮಂಗಲ ಬೋಗಾದಿ ಟೀಮ್. 10 ಸಾವಿರ ನಗದು
ಬಹುಮಾನವನ್ನು ಮಾಜಿ ಸಚಿವ ಚಲುವರಾಯಸ್ವಾಮಿ ಕ್ರೀಡಾಪಟುಗಳಿಗೆ ವಿತರಣೆ ಮಾಡಿ ಶುಭ ಹಾರೈಸಿದರು.
ತರಕಾರಿ ಬೆಳೆ ಇಳಿಕೆ…!
ಟಮೋಟೋ, ಬೀನ್ಸ್ ನುಗ್ಗೇಕಾಯಿ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ನಿರಾಳವಾಗಿದೆ. ಕಳೆದೊಂದು ಬಹುತೇಕ ತರಕಾರಿಗಳ ಇಳಿಕೆಯಾಗಿದ್ದು ಗ್ರಾಹಕರಲ್ಲಿ ಸಂತಸ ಮೂಡಿದೆ. ಕಳೆದೊಂದು ತಿಂಗಳಿಂದ ಬಹುತೇಕ ಏರಿಕೆಯಿಂದ ಈಗ ಕೊಂಚ ವಾರದಿಂದ ಬೆಲೆಯಲ್ಲಿ ಮೊಗದಲ್ಲಿ ಸಂತಸ ಮೂಡಿದೆ. ಕಳೆದ ಒಂದು ತಿಂಗಳಿಂದ ಟೊಮೆಟೊ ಸೇರಿ ದಂತೆ ಅತ್ಯಾವಶ್ಯಕ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕರು ತತ್ತರಿಸಿದ್ದರು. ಸದ್ಯ ಸ್ಥಳೀಯ ತರಕಾರಿ ಜೊತೆಗೆ ಮೈಸೂರು, ಬೆಂಗಳೂರು ಮಾರುಕಟ್ಟೆಗಳಿಂದಲೂ ಮಂಡ್ಯ ಮಾರುಕಟ್ಟೆಗೆ ಬರುತ್ತಿದ್ದು ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.