ಟಾಲಿವುಡ್ ಸ್ಟಾರ್ ಡೈರೆಕ್ಟರ್ ಸುಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತೆಲುಗು ಇಂಡಸ್ಟ್ರೀಯಲ್ಲಿ ತಮ್ಮದೇ ಸ್ಟೈಲ್ ಸಿನಿಮಾಗಳನ್ನು ಕೊಟ್ಟಿರೋ ಸುಕುಮಾರ್ ಸಿನಿಮಾದಲ್ಲಿ ನಟಿಸೋದಿಕ್ಕೆ ಸ್ಟಾರ್ ಹೀರೋಗಳೇ ಹಿಂದೆ ಬೀಳ್ತಾರೆ. ಯಾಕಂದ್ರೆ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ನಟನೆ ಚೊಚ್ಚಲ ಸಿನಿಮಾ ಸಕ್ಸಸ್ ಹಿಂದಿರೋ ಮಾಸ್ಟರ್ ಮೈಂಡ್ ಇದೇ ಸುಕುಮಾರ್. ಅಲ್ಲು ನಟನೆಯ ಮೊದಲ ಸಿನಿಮಾ ಆರ್ಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಇದೇ ಸುಕುಮಾರ್. ಅಷ್ಟೇ ಯಾಕೆ ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಆದ ರಂಗಸ್ಥಳಂ, ನಾನಕೋ ಪ್ರೇಮತೋ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಇದೇ ಸುಕುಮಾರ್.

ಸದ್ಯ ಅಲ್ಲು ಅರ್ಜುನ್ ಹಾಗೂ ಡಾಲಿ ಧನಂಜಯ್ ನಟಿಸ್ತಿರೋ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಪುಷ್ಪ ಸಿನಿಮಾಕ್ಕೂ ಆ್ಯಕ್ಷನ್ ಕಟ್ ಹೇಳಿರುವ ಸುಕುಮಾರ್ ಸದ್ಯ ಕನ್ನಡದ ಟಾಪ್ ಹೀರೋ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಜೊತೆ ಸಿನಿಮಾ ಮಾಡಲಿದ್ದಾರಂತೆ. ಹಾಗಂತ್ ನಾವ್ ಹೇಳ್ತಿಲ್ಲ ದಚ್ಚು ಟ್ವೀಟರ್ ಪೋಸ್ಟ್ ಹೇಳ್ತಿದೆ. ಸುಕುಮಾರ್ ಹುಟ್ಟುಹಬ್ಬಕ್ಕೆ ದಚ್ಚು ವಿಷ್ ಮಾಡಿ ಹಳೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಈ ಫೋಟೋ ನೋಡಿ ಅಭಿಮಾನಿಗಳು ಡಿಬಾಸ್ ಸುಕುಮಾರ್ ಜೊತೆ ಸಿನಿಮಾ ಮಾಡ್ತಿದ್ದಾರೆ ಅಂತಾ ಮಾತನಾಡಿಕೊಳ್ತಿದ್ದಾರೆ. ಇದಕ್ಕೆ ಹಿಂಟ್ ಎನ್ನುವಂತೆ ನಿನ್ನೆ ಫೇಸ್ ಬುಕ್ ನಲ್ಲಿ ಲೈವ್ ಬಂದಾಗ ದಚ್ಚು, ಹೈದ್ರಾಬಾದ್ ನ ಪ್ರಸಾದ್ ಪ್ರೊಡಕ್ಷನ್ ಅಡಿ ಸಿನಿಮಾ ಮಾಡುತ್ತಿರೋದಾಗಿ ಹೇಳಿದ್ದರು. ಮೇ ಬಿ ಆ ಸಿನಿಮಾನೇ ಇದು. ಸುಕುಮಾರ್ ಜೊತೆ ಡಿಬಾಸ್ ಸಿನಿಮಾ ಕನ್ಫರ್ಮ್ ಎನ್ನುತ್ತಿದ್ದಾರೆ.


ಈ ಹಿಂದೊಮ್ಮೆ ದರ್ಶನ್, ಸುಕುಮಾರ್ ಜೊತೆ ಸಿನಿಮಾ ಮಾಡ್ತಾರೆ ಅನ್ನೋ ದೊಡ್ಡ ನ್ಯೂಸ್ ಆಗಿತ್ತು. ಇದೀಗ ಮತ್ತೆ ಈ ಸುದ್ದಿ ಗಾಂಧಿನಗರದಿಂದ ಟಾಲಿವುಡ್ ಅಂಗಳದಲ್ಲಿ ಗಿರಿಕಿ ಹೊಡೆಯುತ್ತಿದೆ. ಯಾವುದಕ್ಕೂ ಈ ನ್ಯೂಸ್ ಪಕ್ಕಾನಾ..? ಅನ್ನೋದನ್ನ ಕಾದು ನೋಡ್ಬೇಕು.
