- Advertisement -
kolar news : ಕೋಲಾರದಲ್ಲಿ ಟೊಮೆಟೊ ತುಂಬಿದ ಲಾರಿ ಕಳ್ಳತನವಾಗಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕೋಲಾರದ ಮೆಹತ್ ಟ್ರಾನ್ಸ್ಪೋರ್ಟ್ಗೆ ಸೇರಿದ ಲಾರಿ ಇದಾಗಿತ್ತು. ಇದರಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮೆಟೊಗಳಿದ್ದವು.
ಲಾರಿ ಚಾಲಕ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ. ಈ ಹಿನ್ನೆಲೆ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
Shivaraj : ಗಡಿಭಾಗದ, ಗಡಿ ಹೊರಗಿನ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಶಿವರಾಜ್ ತಂಗಡಗಿ
- Advertisement -