Sunday, April 20, 2025

Latest Posts

ಉರುಳಿ ಬಿದ್ದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥದ ಮೇಲ್ಭಾಗ: ಆತಂಕ ವ್ಯಕ್ತಪಡಿಸಿದ ಭಕ್ತರು

- Advertisement -

Mangaluru News: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಜಾತ್ರಾ ಮಹೋತ್‌ಸವದ ಸಂದರ್ಭದಲ್ಲಿ ರಥ ಮುರಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಈ ದೇವಸ್ಥಾನದಲ್ಲಿ ಪ್ರತೀ ವರ್ಷದಂತೆ ಈ ವರ್ಷ ಕೂಡ ರಥೋತ್ಸವ ನಡೆಯುತ್ತಿತ್ತು. ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ದೇವಸ್ಥಾನದಿಂದ ಸ್ವಲ್ಪ ಮುಂದೆ ತೇರು ಎಳೆದುಕೊಂಡು ಹೋಗಲಾಗಿತ್ತು. ಈ ವೇಳೆ ರಥದ ಮೇಲ್ಭಾಗ ತುಂಡಾಗಿ ಬಿದ್ದಿದೆ. ಆದರೆ ಯಾರೂ ಕೂಡ ರಥದ ಕೆಳಗೆ ಸಿಲುಕಿಲ್ಲ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಧ್ಯಕ್ಕೆ ರಥದ ಭಾಗಗಳನ್ನು ಬಿಡಿಸಿ ಇಡಲಾಗಿದೆ. ಅಲ್ಲದೇ, ಸರಿಯಾಗಿ ಜೋಡಿಸದೇ ಇರದ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಕೂಡ, ಈ ಬಗ್ಗೆ ಕ್ರಮ ವಹಿಸಬೇಕು. ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಅಲ್ಲದೇ ಇತಿಹಾಸ ಪ್ರಸಿದ್ಧ ಕ್ಷೇತ್ರದಲ್ಲಿ ಇಂಥ ಅವಘಡ ಸಂಭವಿಸಿರುವುದು ಸಣ್ಣ ವಿಷಯವಲ್ಲ. ಕಳೆದ ವರ್ಷವಷ್ಟೇ ಲಕ್ಷಾಂತರ ರೂಪಾ.ಿ ಖರ್ಚು ಮಾಡು ಮಾಡಿ, ರಥವನ್ನು ಸರಿ ಮಾಡಿಸಿದ್ದಾರೆ. ಆದರೂ ಇಂಥ ಘಟನೆ ಸಂಭವಿಸುವುದು ಸರಿಯಲ್ಲ. ಕಳೆದ ವರ್ಷವೂ ರಥೋತ್ಸವದ ವೇಳೆ ಕೆಲ ಸಮಸ್ಯೆ ಸಂಭವಿಸಿತ್ತು. ಈಗಲೂ ಹಾಗೆ ಆಗಿದೆ. ದೇವಿ ಏನೋ ಸೂಚನೆ ಕೊಡುತ್ತಿದ್ದಾಳೆ. ಅರಿತುಕೊಳ್ಳಿ ಎಂದು ಭಕ್ತರು ಹೇಳಿದ್ದಾರೆ.

- Advertisement -

Latest Posts

Don't Miss