ಬಿಹಾರ: ರಾಜಧಾನಿ ಪಾಟ್ನಾದ 116 ಕಿ.ಮೀ ದೂರದಲ್ಲಿರೋ ಗಯಾ ಪಟ್ಟಣದಲ್ಲಿ ಬಿಸಿಲ ಪ್ರಲಾಪ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸದೊಂದು ಕಾನೂನು ಜಾರಿಗೆ ತಂದಿದೆ.
ರಾಜ್ಯದಲ್ಲಿ ಬಿಸಿಲ ಬೇಗೆಗೆ ಸುಮಾರು 70 ಮಂದಿ ಈಗಾಗಲೇ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು 144 ಸೆಕ್ಷನ್ ಜಾರಿ ಮಾಡಿದೆ. ಸಾಮಾನ್ಯವಾಗಿ ಶಾಂತಿ-ಸೌಹಾರ್ದತೆ ಕಾಪಾಡೋ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗುತ್ತೆ. ಆದ್ರೆ ಗಯಾ ಪಟ್ಟಣದಲ್ಲಿ ಮಾತ್ರ ಬಿಸಿಲ ಝಳಕ್ಕೆ ಜನರು ಬಲಿಯಾಗೋದನ್ನ ತಡೆಯಲು ನಿಷೇಧಾಜ್ಞೆ ಹೇರಿದೆ. ಬಿಸಿಲು ಕಾಣಿಸಿಕೊಳ್ಳೋ ಹೊತ್ತಿನಲ್ಲಿ ಜನರು ಗುಂಪಾಗಿ ಸೇರುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಬಿಸಿಲ ಬೇಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಯ, ಅಂದ್ರೆ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೂ ಕಟ್ಟಡ ನಿರ್ಮಾಣ ಸೇರಿದಂತೆ ಮತ್ತಿತರ ಕೆಲಸಗಳನ್ನು ನಿಷೇಧಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೂಡ ಜನರಿಗೆ ಬಿಸಿಲಿನಲ್ಲಿ ಮನೆಯಿಂದಾಚೆ ಬರಬೇಡಿ ಅಂತ ಸಲಹೆ ನೀಡಿದ್ದಾರೆ.
ಕೈ ಕೊಟ್ಟ ಶಾಸಕನಿಗೆ ಸಚಿವ ಸ್ಥಾನ..!!ಮಿಸ್ ಮಾಡದೇ ಈ ವಿಡಿಯೋ ನೋಡಿ