Tuesday, April 15, 2025

Latest Posts

ಧಾರವಾಡದಲ್ಲಿ ಮಹಿಳೆಯರಿಗೆ ಟೂರ್ ಭಾಗ್ಯ! ಯಾಕೆ ಗೊತ್ತಾ..?

- Advertisement -

Political News

ಬೆಂಗಳೂರು(ಫೆ.13): ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಕಾವು ರಂಗೇರುತ್ತಿದೆ, ಈ ಹಿನ್ನಲೆಯಲ್ಲಿ ಪಕ್ಷಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಹಲವಾರು ರೀತಿಯಲ್ಲಿ ಜನರ ಮನಸ್ಸನ್ನು ಗೆಲ್ಲಲು ಮುಂಬರುತ್ತಿದ್ದಾರೆ, ಇದೀಗ ಧಾರವಾಡ ಕ್ಷೇತ್ರದಿಂದ  ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ದೀಪಕ್ ಚಿಂಚೋರೆ ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ. ಜನರು ಸಹ ವಿವಿಧ ಮಹಿಳಾ ಮಂಡಳಿಗಳ ಅಡಿಯಲ್ಲಿ ಈ ಒಂದು ದಿನದ ಪ್ರವಾಸಕ್ಕೆ ಹೋಗಿ ಬರುತ್ತಿದ್ದು, ಬಸ್ ವ್ಯವಸ್ಥೆಯ ಜೊತೆಗೆ ಹೋಗಿ ಬರುವರೆಗೂ ಊಟೋಪಚಾರವನ್ನು ನೋಡಿಕೊಳ್ಳುತ್ತಿದ್ದಾರೆ.

ದೀಪಕ್ ಚಿಂಚೋರೆ ಇದೇ ಮೊದಲ ಬಾರಿ ಅಲ್ಲ, ಕಳೆದ ಆರೇಳು ತಿಂಗಳಿನಿಂದ ಮಹಿಳೆಯರಿಗಾಗಿ ಟೂರ್ ಭಾಗ್ಯ ಒದಗಿಸುತ್ತಿದ್ದು, ಸುಮಾರು ಹತ್ತು ಸಾವಿರ ಮಹಿಳೆಯರು ಈ ಪ್ರವಾಸ ಭಾಗ್ಯದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಚುನಾವಣೆಯ ದೃಷ್ಟಿಯಿಂದ ‘ ಮಹಿಳೆಯರನ್ನು ಸೆಳೆಯೋಕೆ ಅವಕಾಶ ಕಲ್ಪಸಿದ್ದಾರಾ ಎಂಬುವುದು ಪ್ರಶ್ನೆಯಾಗಿದೆ.

ಈ ಬಗ್ಗೆ ಮಾತನಾಡಿದ ದೀಪಕ್ ಚಿಂಚೋರೆ ಅವರು, ಇದು ಸಾಮಾಜಿಕ ಸೇವೆ ಅಷ್ಟೆ. ತನ್ನ ದಿವಂಗತ ಮಗನ ಹೆಸರಿಗೆ ಸೇವಾ ಟ್ರಸ್ಟ್ ಇದೆ. ಹೀಗಾಗಿ ಒಂದು ಸೇವೆ ಅಷ್ಟೆ. ಈ ಹಿಂದೆ ಕುಕ್ಕರ್ ಕೂಡ ಕೊಟ್ಟಿದ್ದೇನೆ ಎಂದು ಮಾಧ್ಯಮದವರಿಗೆ ಹೇಳಿಕೊಂಡಿದ್ದಾರೆ.

- Advertisement -

Latest Posts

Don't Miss