Sunday, March 3, 2024

Latest Posts

ಹಿಮಾಲಯದಲ್ಲಿ ಟ್ರಾಫಿಕ್ ಜಾಮ್- ಅತ್ತಿತ್ತ ಕದಲು ಆಗದೆ ಇಬ್ಬರ ಸಾವು…!

- Advertisement -

ಹಿಮಾಲಯ ಪರ್ವತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಅತ್ತಿತ್ತ ಕದಲಲು ಆಗದೆ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಜಗತ್ತಿನ ಅತಿ ಎತ್ತರದ ಹಿಮಾಲಯ ಪರ್ವತದಲ್ಲಿ ಪರ್ವತಾರೋಹಣ ಮಾಡೋವ್ರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಈ ಹಿನ್ನೆಲೆಯಲ್ಲಿ ಪರ್ವತದ ತುತ್ತ ತುದಿ ತಲುಪುವ ಮಾರ್ಗದಲ್ಲಿ ಭಾರೀ ಜನ ಸಂದಣಿಯಾಗಿದೆ. ಪರ್ವತದ ತುತ್ತ ತುದಿಯ ಜಾಗ ಅತ್ಯಂತ ಕಿರಿದಾದ ಜಾಗವಾಗಿದ್ದು ಅಪ್ಪಿ ತಪ್ಪಿ ಅತ್ತಿತ್ತ ಒಂದು ಹೆಜ್ಜೆ ಪಕ್ಕಕ್ಕಿಟ್ಟರೂ ಸಾವನ್ನಪ್ಪುವ ಅಪಾಯಕಾರಿ ಮಾರ್ಗ ಅದಾಗಿದೆ.

ಇನ್ನು ಕೆಲವೇ ಗಂಟೆಗಳಲ್ಲಿ ಪರ್ವತದ ತುತ್ತ ತುದಿ ತಲುಪಬೇಕಾಗಿದ್ದ ಅಮೆರಿಕಾ ಮೂಲಕ ಪರ್ವತಾರೋಹಿ ಟ್ರಾಫಿಕ್ ಜಾಮ್ ನಿಂದ ಅಲ್ಲಿಯೇ ಪ್ರಾಣಬಿಟ್ಟಿದ್ದಾನೆ. ಮಂಜು ಮುಸುಕಿದ ಚಳಿ ತಡೆಯಲಾಗದೆ ಅಸ್ವಸ್ಥನಾಗಿದ್ದ ಆತ ಅಲ್ಲಿಯೇ ಇದ್ದ ತಂಗುದಾಣಕ್ಕೆ ಹೋಗೋದಕ್ಕೂ ಆಗದೆ ಸುಮಾರು  ಗಂಟೆಗಳ ಕಾಲ ಜೀವ ಬಿಗಿ ಹಿಡಿದಿದ್ದಾನೆ. ವಾಪಸ್ ಹೋಗಲೂ ಸಹ ಅಲ್ಲಿ ದಾರಿ ಇರದ ಕಾರಣ ಆತ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಸರತಿ ಸಾಲಿನಲ್ಲಿ ನಿಲ್ಲುವಷ್ಟು ಜಾಗ ಮಾತ್ರ ಇರೋದ್ರಿಂದ ಆತ ಎಲ್ಲಿಯೂ ಹೋಗಲಾಗಲಿಲ್ಲ.

ಇನ್ನು ಮತ್ತೋರ್ವ ಭಾರತೀಯ ಮಹಿಳೆ ಪರ್ವತಾರೋಹಣ ಮಾಡಿ ವಾಪಸ್ ಬರುತ್ತಿದ್ದ ವೇಳೆ ಇದೇ ರೀತಿ ಸಾವನ್ನಪ್ಪಿದ್ದಾರೆ. ತನ್ನ ಪತಿಯೊಂದಿಗೆ ಪರ್ವತಾರೋಹಣಕ್ಕೆ ಬಂದಿದ್ದ ಅಂಜಲಿ ಕುಲಕರ್ಣಿ ಎಂಬ ವರ್ಷ 54 ಮಹಿಳೆ ಮೇಲಿನಿಂದ ಕೆಳಕ್ಕೆ ಇಳಿಯಲು ದಾರಿಯಿಲ್ಲದೆ ಅಸ್ವಸ್ಥರಾಗಿ ಅಲ್ಲಿಯೇ ಪ್ರಾಣಬಿಟ್ಟಿದ್ದಾರೆ ಅಂತ ವರದಿಯಾಗಿದೆ.

ಕಿರಿದಾದ ಇಳಿಜಾರು ಪ್ರದೇಶದಲ್ಲಿರೋ ಸಾಲಿನಲ್ಲಿ ಸುಮಾರು 250-300 ಜನ ಸಾಲಾಗಿ ನಿಂತಿದ್ದ ಆ ಅಪಾಯಕಾರಿ ಕ್ಷಣ ಹೇಗಿತ್ತು ಅಂತ ಪರ್ವತಾರೋಹಿಯೊಬ್ಬರು ತೆಗೆದ ಒಂದು ಫೋಟೋ ಇದಕ್ಕೆ ಸಾಕ್ಷಿಯಾಗಿದೆ. ಮೇ ತಿಂಗಳಿನಿಂದ ಜುಲೈ ತಿಂಗಳವರೆಗೂ ಹಿಮಾಲಯ ಪರ್ವತಾರೋಹಣಕ್ಕೆ ಪ್ರಶಸ್ತ ಸಮಯವಾದ್ದರಿಂದ ಪರ್ವತಾರೋಹಿಗಳ ಸಂಖ್ಯೆ ಹೆಚ್ಚಳವಾಗ್ತಿದೆ.

ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸೋತಿದ್ರಿಂದ ರಾಹುಲ್ ಗಾಂಧಿ ರಾಜೀನಾಮೆ ಬಗ್ಗೆ ನೀವ್ ಏನ್ ಹೇಳ್ತೀರಾ…? ವಿಡಿಯೋ ನೋಡಿ ತಪ್ಪದೇ ಕಮೆಂಟ್ ಮಾಡಿ.

https://www.youtube.com/watch?v=KkIYHcIg4JI
- Advertisement -

Latest Posts

Don't Miss