- Advertisement -
www.karnatakatv.net :ಹಾವೇರಿ: ವಾಹನ ತಪಾಸಣೆ ವೇಳೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹೌದು. ಪರಸ್ಪರ ಅವಾಚ್ಯ ಶಬ್ದಗಳನ್ನು ಬಳಿಸಿಕೊಂಡು ವಾಗ್ವಾದ ನಡೆಸಿರುವುದು ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ‘ಏ.. ಪೋಲಿಸಪ್ಪ ಹೊಟ್ಟೆಗೆ ಏನು ತಂತೀಯಾ’ ಎಂಬುವಂತ ಮಾತನ್ನು ಸಾರ್ವಜನಿಕ ಮಹಿಳೆಯೊಬ್ಬಳು ಸಂಚಾರಿ ಪೊಲೀಸ್ ಸಿಬ್ಬಂದಿಗೆ ಬಳಕೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಪೊಲೀಸ್ ಸಿಬ್ಬಂದಿ ಕೂಡ ಸಾರ್ವಜನಿಕ ಸೇವೆ ಮಾಡುತ್ತಿದ್ದರೂ ಸಾರ್ವಜನಿಕರು ಸರಿಯಾಗಿ ಸ್ಪಂದನೆ ನೀಡಬೇಕಿದೆ. ಅಲ್ಲದೇ ಪೊಲೀಸರು ಕೂಡ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸಿ ತಮ್ಮ ಕರ್ತವ್ಯ ತಾವು ಮಾಡಬೇಕಿದೆ.
ಕರ್ನಾಟಕ ಟಿವಿ – ಹಾವೇರಿ
- Advertisement -