Saturday, April 19, 2025

Latest Posts

ತಾಯಿಯಾಗುತ್ತಿರೋ ತೃತೀಯ ಲಿಂಗಿ..?! ಟ್ರಾನ್ಸ್ ಜೆಂಡರ್ ಪೋಟೋಶೂಟ್ ವೈರಲ್..!

- Advertisement -

Special story:

ತಂತ್ರಜ್ಞಾನ ಅದೆಷ್ಟೇ ಮುಂದುವರೆದ್ರೂ ಕೂಡಾ ಅದೇನೋ ಒಂದು ಶಕ್ತಿ ಪ್ರಪಂಚದಲ್ಲಿ ಅನೇಕ ವಿಸ್ಮಯಗನ್ನು ಬೆಳಕಿಗೆ ತರುತ್ತಲೇ ಇದೆ. ಇದೀಗ ದೇಶವೇ ಅಚ್ಚರಿ ಪಡುವಂತಹ ಒಂದು ಘಟನೆ ನಡೆದಿದೆ. ಆಕೆ ಹುಟ್ಟಿದ್ದು ಗಂಡಾಗಿ ನಿರಂತರ ಆಕೆ ಬೆಳೆದಿದ್ದು ಮಾತ್ರ ಹೆಣ್ಣಾಗಿ. ಇದೀಗ ಇನ್ನಷ್ಟು ಮುಂದುವರೆದು ಮಹಾ ವಿಸ್ಮಯಕ್ಕೆ ಸಾಕ್ಷಿಯಾಗಿದ್ದಾರೆ. ಹೌದು ತೃತೀಯ ಲಿಂಗಿಯೊಬ್ಬರು ಇದೀಗ ತಾಯಿಯಾಗುತ್ತತಿರುವ ಸಂಭ್ರಮವನ್ನ ಹಂಚಿಕೊಂಡಿದ್ದಾರೆ. ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿ ಅದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತ ಪಡಿಸಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಮಗುವಿಗೆ ಜನ್ಮ ನೀಡಲಿದ್ದಾರೆ. ಆಹದ್ ಫಾಜಿಲ್ ಮತ್ತು ಜಿಯಾ ಪಾವಲ್ ದಂಪತಿಯ ಪುರುಷ ಸಂಗಾತಿ ಜಹದ್ ಫಾಜಿಲ್ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಜಹಾದ್ ಅವರು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿಗಳ ಮೆಟರ್ನಿಟಿಯ ಫೋಟೋಶೂಟ್ ಚಿತ್ರಗಳನ್ನು ಭಾವನಾತ್ಮಕ ಶೀರ್ಷಿಕೆಯಡಿಯಲ್ಲಿ ಜಿಯಾ ಪಾವಲ್ ತಮ್ಮ ಇನ್ಟಾಗ್ರಾಮ್ ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

ಹುಟ್ಟಿನಿಂದಾಗಲೀ, ದೇಹದಿಂದಾಗಲೀ ಹೆಣ್ಣಾಗದಿದ್ದರೂ ನನ್ನಲ್ಲಿ ಸದಾ ಇದ್ದ ಕನಸು ನನ್ನಲ್ಲಿರುವ ಹೆಣ್ತನವನ್ನು ಅರಿತಿದ್ದೆ “ಅಮ್ಮ”.
ಆ ನೋವು ಮತ್ತು ಆನಂದವನ್ನು ತಿಳಿಯಲು ಅಥವಾ ಅನುಭವಿಸಲು ನನ್ನ ದೇಹವು ನನಗೆ ಈ ಜನ್ಮದಲ್ಲಿ ಅವಕಾಶ ನೀಡದಿರಬಹುದು….. ದೇವರು ನನ್ನನ್ನು ತಿಳಿದಿರುವಂತೆ ಸಮಯವು ನನ್ನ ಆಸೆಗಳನ್ನು ತಿಳಿದಿದೆ. ಯಾರೆಂದು ತಿಳಿಯದವನಿಗೋಸ್ಕರ ಒಂಬತ್ತು ತಿಂಗಳು ಕಾಯುವುದು ತಾಯಿಯ ಪ್ರತಿಕ್ರಿಯೆಯಲ್ಲವೇ?ಒಂಬತ್ತು ತಿಂಗಳು ಕಾದ ನಂತರ ಯಾರೆಂದು ತಿಳಿಯದವನಿಗಾಗಿ…ಕನಸಿಗಾಗಿ ಕಾಯುವ ಹೂವಿನಂತೆ ನನ್ನಲ್ಲಿ, ತಾಯಿಯಾಗಿ ಮಗುವಿನ ಧ್ವನಿಯ ಕರೆಯನ್ನು ಕೇಳಲು ನಾನು ಕಾಯುತ್ತಿದ್ದೇನೆ…. ಕೆಲವೇ ದಿನಗಳು. ಸ್ವಾಮಿ, ನನಗೆ ಮತ್ತು ನನ್ನ ಕನಸುಗಳನ್ನು ತಿಳಿದಿರುವ ನನ್ನ ಜೀವನ ಸಂಗಾತಿಗೆ ಯಾವುದೇ ಬಿಕ್ಕಟ್ಟಿನಲ್ಲೂ ದಣಿಯದೆ ಮುನ್ನಡೆಯುವ ಸಾಮರ್ಥ್ಯವನ್ನು ನೀಡು………
ಹುಟ್ಟಿದ ದೇಹದೊಂದಿಗೆ ಬದುಕುವ ಮಾನಸಿಕ ಕಷ್ಟಗಳೊಂದಿಗೆ ಬದುಕುತ್ತಿರುವಾಗ ನನ್ನ ಕನಸುಗಳಿಗೆ ರೆಕ್ಕೆಗಳನ್ನು ಜೋಡಿಸಿದ ನನ್ನ ಇಕಾ @zahhad__fazil ತನ್ನ ಆಸೆಗೆ ತಕ್ಕಂತೆ ದೇಹವನ್ನು ಬದಲಾಯಿಸಲು ಪ್ರಾರಂಭಿಸಿದನು……
ನಮ್ಮ ಕನಸುಗಳನ್ನು ನನಸಾಗಿಸಲು ನಾವು ತೆಗೆದುಕೊಂಡ ನಿರ್ಧಾರಗಳನ್ನು ಬೆಂಬಲಿಸಿದರು. ನಮಗೆ ತಿಳಿದಿರುವಂತೆ ಭಾರತದ ಮೊದಲ ಟ್ರಾನ್ಸ್ ಮ್ಯಾನ್ ಪ್ರೆಗ್ನೆನ್ಸಿ…….
ಒಂಟಿ ಬದುಕಿನಲ್ಲಿ ಚಿಕ್ಕ ಸಂಸಾರದಂತೆ ನಮ್ಮನ್ನು ಬೆಂಬಲಿಸಿದ ನನ್ನ ಇತಾಕ್, ಸೋದರ ಮಾವ, ಅವರ ತಾಯಿ, ಸಹೋದರಿ ಮತ್ತು ಡಾಕ್ಟರ್ ಅವರಿಗೆ ನನ್ನ ಹೃದಯದಾಳದ ಧನ್ಯವಾದಗಳು……

ಎಂಬುವುದಾಗಿ ಭಾವನಾತ್ಮಕವಾದ ಬರಹಗಳಿಂದಲೇ ತನ್ನ ಅಂತರಾಳದ ನೋವನ್ನು ಹೊರಹಾಕಿ ನಿರಾಳತೆಯೊಂದಿಗೆ ಸಂತೋಷವನ್ನು ಹಂಚಿಕೊಂಡಿದ್ದಾರೆ ಈ ಟ್ರಾನ್ಸ್ ಜೆಂಡರ್ ದಂಪತಿ..

ಅದೇನೆ ಇರಲಿ ಸಮಾಜದಲ್ಲಿ ಮಂಗಳಮುಖಿಯರು ಕೂಡಾ ಇದೀಗ ಎಲ್ಲರಂತೆ ಸ್ಥಾನ ಮಾನ ಪಡೆಯುತ್ತಿರುವುದು ಹೆಮ್ಮೆಯ ವಿಚಾರವೇ ಆದ್ರೂ ಇನ್ನೂ ನಿಂತಿಲ್ಲ ಅವರ ಮೇಲಿನ ದೌರ್ಜನ್ಯ ತಾರತಮ್ಯಗಳು…ಇನ್ನಾದರೂ ದುಷ್ಟ ಜನರ ಕುಷ್ಟ ಮನಸ್ಥಿತಿಯನ್ನು ಬಿಟ್ಟು ಎಲ್ಲರಂತೆ ಅವರನ್ನೂ ತಮ್ಮವರಾಗಿ ಕಾಣಲಿ ಅನ್ನೋದೆ ನಮ್ಮ ಆಶಯ…ಏನಂತೀರಾ ಕಮೆಂಟ್ ಮಾಡಿ……

https://www.instagram.com/p/CoFoTzxvjWH/?utm_source=ig_web_copy_link

ಹುಡುಗಿಯರನ್ನು ಕಂಡು ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ

ಮನೆಗೆ ಹಣ ಕಳಿಸೋದ್ರಲ್ಲಿ ಯಾರು ಮೇಲು ಹೆಣ್ಣಾ ? ಗಂಡಾ ?

ತಮಿಳುನಾಡಿನಲ್ಲಿ ಶುರುವಾದ ಅಕಾಲಿಕ ಮಳೆ

- Advertisement -

Latest Posts

Don't Miss