- Advertisement -
ಬೆಂಗಳೂರು: ಮೊನ್ನೆ ಸುರಿದ ಗಾಳಿ ಸಹಿತ ಭಾರೀ ಮಳೆಗೆ ನಟ ದರ್ಶನ್ ಮನೆ ಕಾಂಪೌಂಡ್ ಮೇಲೆ ಮರ ಬಿದ್ದಿದೆ. ಘಟನೆ ನಡೆದು 3 ದಿನಗಳಾದ್ರೂ ಬಿಬಿಎಂಪಿ ಅಧಿಕಾರಿಗಳು ಬಿದ್ದಿರೋ ಮರ ತೆರವುಗೊಳಿಸದೆ ನಿರ್ಲಕ್ಷ್ಯ ತೋರಿದ್ದಾರೆ.
ಮೂರು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ರಾಜರಾಜೇಶ್ವರಿನಗರದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಕಾಂಪೌಂಡ್ ಮೇಲೆ ಮರ ಬಿದ್ದಿತ್ತು. ಇನ್ನು ಮರ ಬಿದ್ದಿರೋದ್ರಿಂದಾಗಿ ನಟ ದರ್ಶನ್ ತಮ್ಮ ಕಾರು ಹೊರತೆಗೆಯಲೂ ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಮರ ತೆರವು ಕಾರ್ಯಾಚರಣೆ ಮಾಡುವಲ್ಲಿ ಕಾರ್ಪೊರೇಟರ್ ಹಾಗೂ ಬಿಬಿಎಂಪಿ ನಿರ್ಲಕ್ಷ್ಯವಹಿಸುತ್ತಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ರಾಜಕೀಯ ಕಾರಣವಾ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಧೋನಿ ಗ್ಲೌಸ್ ಮೇಲೆ ಪಾಕ್ ಗೆ ಯಾಕೆ ಉರಿ…??ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -