Hubli News: ಹುಬ್ಬಳ್ಳಿ: ನಾಳೆ ಆಗಷ್ಟ್ 15 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ ಕರೆ ಕೊಟ್ಟ ಹಿನ್ನೆಲೆಯಲ್ಲಿ, ಎಲ್ಲಾ ದೇಶಾಭಿಮಾನಿಗಳು ಭಾರತಾಂಭೆಯ ಧ್ವಜಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್, ಗಬ್ಬೂರ ಕ್ರಾಸ್, ಹೊಸೂರ ಕ್ರಾಸ್ ಹೀಗೆ ಹುಬ್ಬಳ್ಳಿಯ ಮುಖ್ಯ ರಸ್ತೆಗಳಲ್ಲಿ ಬಾವುಟ ಮಾರಾಟ ಜೋರಾಗಿ ನಡೆದಿದೆ. ಬೈಕ್ ಕಾರ್ ಸೇರಿದಂತೆ ಬೇರೆ ಬೇರೆ ವಾಹನಗಳಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿವೆ.



