ದಕ್ಷಿಣ ಚಿತ್ರರಂಗದಲ್ಲಿ ನಟಿಯರ ಕರಿಯರ್ಗೆ ವಯಸ್ಸು ಅಡ್ಡಿಯಾಗುತ್ತದೆ ಎನ್ನುವ ಮಾತನ್ನ ನಟಿ ತ್ರಿಶಾ ಕೃಷ್ಣನ್ ಮತ್ತೆ ತಪ್ಪು ಎಂದು ಸಾಬೀತುಪಡಿಸಿದ್ದಾರೆ. 42ನೇ ವಯಸ್ಸಿನಲ್ಲಿಯೂ ತ್ರಿಷಾ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದು, ಇದೀಗ ಮತ್ತೊಮ್ಮೆ ಭಾರೀ ಸಂಭಾವನೆ ಮೂಲಕ ಸುದ್ದಿಯಲ್ಲಿದ್ದಾರೆ.
ಕಾಲಿವುಡ್ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ರಜನಿಕಾಂತ್ ಮತ್ತು ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಚಿತ್ರಕ್ಕೆ ತ್ರಿಷಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಸಿನಿಮಾಗಾಗಿ ಅವರು 12 ಕೋಟಿ ಸಂಭಾವನೆ ಕೇಳಿದ್ದು, ನಿರ್ಮಾಪಕರು ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ 5 ಕೋಟಿ ವರೆಗೆ ಸಂಭಾವನೆ ಪಡೆಯುತ್ತಿದ್ದ ತ್ರಿಷಾ, ಈಗ ತಮ್ಮ ಮಾರ್ಕೆಟ್ ವ್ಯಾಲ್ಯೂ ಡಬಲ್ ಮಾಡಿಕೊಂಡಿದ್ದಾರೆ. ನಯನತಾರಾ ನಂತರ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ತ್ರಿಷಾ ಹೆಸರು ಕೇಳಿಬರುತ್ತಿದೆ. ಹಿರಿಯ ಸ್ಟಾರ್ ಹೀರೋಗಳ ಜೊತೆ ಅವರ ಜೋಡಿ ಸೂಪರ್ ಹಿಟ್ ಆಗುತ್ತಿರುವುದರಿಂದ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ವಿಜಯ್ ಜೊತೆಗಿನ ಅವರ ಸ್ನೇಹ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ರೀತಿಯೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್-ತ್ರಿಷಾ ಜೋಡಿಯನ್ನು ಎಂಜಿಆರ್-ಜಯಲಲಿತಾ ಜೋಡಿಗೆ ಹೋಲಿಸಿ ಸಾಕಷ್ಟು ಮೀಮ್ಸ್ ವೈರಲ್ ಆಗಿದ್ದವು. ಇದೇ ಹವಾ ಈಗ ತ್ರಿಷಾ ಸ್ಟ್ಯಾಂಡರ್ಡ್ ಮತ್ತಷ್ಟು ಹೆಚ್ಚಿಸಿದೆ.
ಪ್ರಸ್ತುತ ತ್ರಿಷಾ ಕೈಯಲ್ಲಿ ವಿಶ್ವಂಭರ, ರಾಮ್, ವಿದಮುಯಾರ್ಚಿ ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳಿದ್ದು, ಎರಡನೇ ಇನ್ನಿಂಗ್ಸ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಅನ್ನೋದನ್ನು ತ್ರಿಷಾ ಮತ್ತೊಮ್ಮೆ ಪ್ರೂವ್ ಮಾಡುತ್ತಿದ್ದಾರೆ.




