Thursday, December 4, 2025

Latest Posts

ಭಾರತದತ್ತ ಸ್ನೇಹ‌ ಹಸ್ತ ಚಾಚಿದ ಟ್ರಂಪ್

- Advertisement -

ಭಾರತ-ಚೀನಾ-ರಷ್ಯಾ ಒಗ್ಗಟ್ಟು, ಅಮೆರಿಕಾವನ್ನು ಅಕ್ಷರಶಃ ಕೆಂಗೆಡುವಂತೆ ಮಾಡಿದೆ. ಆನೆ ನಡೆದಿದ್ದೇ ದಾರಿ ಎನ್ನುವಂತೆ, ತೆರಿಗೆ ಅಸ್ತ್ರ ಬಳಸಿದ್ದ ಡೊನಾಲ್ಡ್‌ ಟ್ರಂಪ್‌, ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಚೀನಾದಲ್ಲಿ ನಡೆದ ಶೃಂಗಸಭೆ ಬಳಿಕ ಟ್ರಂಪ್‌ ವಿಚಲಿತರಾಗಿದ್ದು, ಭಾರತದತ್ತ ಮತ್ತೆ ಸ್ನೇಹಹಸ್ತ ಚಾಚಿದ್ದಾರೆ.

ನಾನು ಯಾವಾಗಲೂ ಮೋದಿ ಜೊತೆ ಸ್ನೇಹಿತನಾಗಿರುತ್ತೇನೆ. ಅವರೊಬ್ಬ ಉತ್ತಮ ಹಾಗೂ ಅಧ್ಬುತ ಪ್ರಧಾನಿ. ಆದರೆ ಈ ನಿರ್ದಿಷ್ಟ ಕ್ಷಣದಲ್ಲಿ ಅವರು ಮಾಡುತ್ತಿರುವುದು ನನಗೆ ಇಷ್ಟವಿಲ್ಲ. ಆದರೆ ಭಾರತ ಮತ್ತು ಅಮೆರಿಕ ವಿಶೇಷ ಸಂಬಂಧವನ್ನು ಹೊಂದಿವೆ. ಈ ಬಗ್ಗೆ ಚಿಂತಿಸಲು ಏನೂ ಇಲ್ಲ. ಪ್ರಸ್ತುತ ಪರಿಸ್ಥಿತಿ ಕ್ಷಣಿಕವಷ್ಟೇ ಎಂದು ಟ್ರಂಪ್ ಹೇಳಿದ್ದಾರೆ.

ನಾವು ಭಾರತವನ್ನು ಕಳೆದುಕೊಂಡಿಲ್ಲ. ರಷ್ಯಾದಿಂದ ಭಾರತ ದೊಡ್ಡ ಪ್ರಮಾಣದ ತೈಲವನ್ನು ಖರೀದಿಸುತ್ತಿದೆ. ಅದು ನಮಗೆ ಬಹಳ ನಿರಾಶೆ ತಂದಿದೆ. ಹೀಗಾಗಿ ಅದನ್ನು ಅವರಿಗೆ ತಿಳಿಸಲು ದೊಡ್ಡ ರೀತಿಯ ಸುಂಕವನ್ನು ವಿಧಿಸಿದ್ದೇವೆ. ನಿಮಗೆ ತಿಳಿದಿರುವಂತೆ ನಾನು ಭಾರತದ ಪ್ರಧಾನಮಂತ್ರಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. 2 ತಿಂಗಳ ಹಿಂದೆ ಮೋದಿ ಅಮೆರಿಕಾದಲ್ಲಿದ್ದರು. ರೋಸ್ ಗಾರ್ಡನ್‌ನಲ್ಲಿ ನಾವಿಬ್ಬರೂ ಪತ್ರಿಕಾಗೋಷ್ಠಿ ನಡೆಸಿದ್ದೆವು . ಭಾರತ ಮತ್ತು ಅಮೆರಿಕಾ ವಿಶೇಷ ಸಂಬಂಧವನ್ನು ಹೊಂದಿದ್ದು, ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಕಿಲ್ಲ ಅಂತಾ ಟ್ರಂಪ್‌ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್‌ ಮಾಡಿರುವ ಟ್ರಂಪ್‌, ನಾವು ಭಾರತ ಮತ್ತು ರಷ್ಯಾವನ್ನು, ಕರಾಳ ಚೀನಾದಿಂದಾಗಿ ಕಳೆದುಕೊಂಡಂತೆ ಕಾಣುತ್ತಿದೆ. ಅವರಿಗೆ ಸುದೀರ್ಘ ಹಾಗೂ ಸಮೃದ್ಧ ಭವಿಷ್ಯ ಸಿಗುವಂತಾಗಲಿ ಎಂದು, ಪ್ರಧಾನಿ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಹಳೆಯ ಫೋಟೋ ಹಾಕಿಕೊಂಡಿದ್ದಾರೆ.

 

ಡೊನಾಲ್ಡ್‌ ಟ್ರಂಪ್ ಅವರ‌ ಈ ಟ್ವೀಟ್‌ ಪೋಸ್ಟ್‌ಗೆ, ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವಾಗಲೂ ನಮ್ಮ ಗೆಳೆಯರಾಗಿರುತ್ತಾರೆ. ಭಾರತ ಮತ್ತು ಅಮೆರಿಕ ವಿಶೇಷ ಸಂಬಂಧವನ್ನು ಹೊಂದಿವೆ. ನಮ್ಮ ಸಂಬಂಧಗಳ ಬಗ್ಗೆ ಅವರ ಸಕಾರಾತ್ಮಕ ಮೌಲ್ಯಮಾಪನವನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ. ಭಾರತ ಮತ್ತು ಅಮೆರಿಕವು ಅತ್ಯಂತ ಸಕಾರಾತ್ಮಕ, ಭವಿಷ್ಯದ ದೃಷ್ಟಿಕೋನ, ಸಮಗ್ರ, ಜಾಗತಿಕವಾಗಿ ಪ್ರಮುಖ ಪಾಲುದಾರಿಕೆಯನ್ನು ಹೊಂದಿವೆ ಅಂತಾ ಹೇಳಿದ್ದಾರೆ.

- Advertisement -

Latest Posts

Don't Miss