Saturday, July 12, 2025

Latest Posts

ತುಮಕೂರಿನ ಲಾಡ್ಜ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ದಾವಣಗೆರೆಯ ಪಿಎಸ್ಐ

- Advertisement -

Tumakuru News: ತುಮಕೂರು : ತುಮಕೂರಿನ ಲಾಡ್ಜ್ ವೊಂದರಲ್ಲಿ ದಾವಣಗೆರೆಯ ಪಿಎಸ್ ಐ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ದಾವಣಗೆರೆ ಬಡಾವಣೆಯ ಠಾಣೆಯ ಪಿಎಸ್ ಐ ತುಮಕೂರಿನ ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

35 ವರ್ಷದ ನಾಗರಾಜು ಆತ್ಮಹತ್ಯೆಗೆ ಶರಣಾದ ಪಿಎಸ್ ಐ ಆಗಿದ್ದು ಜುಲೈ 1 ರಂದು ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಇಂದು ಲಾಡ್ಜ್ ನಲ್ಲಿ ದುರ್ವಾಸನೆ ಬಂದಿದ್ದು, ಸಿಬ್ಬಂದಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ತಾನು ದಾವಣಗೆರೆ ಪಿಎಸ್ಐ ಅಂತ ರೂಮ್ ಬಾಡಿಗೆಗೆ ಪಡೆದಿದ್ದ ಪಿಎಸ್ಐ ನಾಗರಾಜು ಬುಕ್ ಮಾಡಿ ಒಳಗೆ ಹೋದಾಗಿನಿಂದ ಹೊರಗೆ ಬರದ ಪಿಎಸ್ಐ ನಾಗರಾಜ ಲಾಡ್ಜ್ ಸಿಬ್ಬಂದಿ ಕರೆ ಮಾಡಿದರು ಕರೆ ಸ್ವೀಕರಿಸಲಿಲ್ಲ ಅನುಮಾನ ಕೊಂಡ ಲಾಡ್ಜ್ ಸಿಬ್ಬಂದಿ ಸ್ವಚ್ಛಗೊಳಿಸಲು ತೆರಳಿದ ವೇಳೆ ಬಾಗಿಲು ತೆರೆದಿರಲಿಲ್ಲ ಅನುಮಾನ ಬಂದಕೂಡಲೇ ಹೋಟೆಲ್ ಮಾಲೀಕರಿಗೆ ಮಾಹಿತಿ ತಿಳಿಸಿ ರೂಮ್ ಓಪನ್ ಮಾಡಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬಳಕೆಗೆ ಬಂದಿದೆ.

ಇನ್ನು ಮೃತ ದೇಹ ಕೊಳೆತು ದುರ್ವಾಸನೆ ಬೀರಿ ಮೃತ ದೇಹಕ್ಕೆ ಹುಳ ಬಿದ್ದು ಮೂರನೇ ಮಹಡಿಯ ತುಂಬೆಲ್ಲ ಹುಳ ಹರಿದಾದುತ್ತಿವೆ. ಸ್ಥಳಕ್ಕೆ ಎ ಎಸ್ ಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ನಾಗರಾಜಪ್ಪ ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಡೆತ್ ನೋಟ್ ಬರದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು ತುಮಕೂರು ನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣ.

- Advertisement -

Latest Posts

Don't Miss