Tumakuru: ತುಮಕೂರು: ತುಮಕೂರಿನಲ್ಲಿ ನೆತ್ತರಕೋಡಿ ಹರಿದಿದ್ದು, ಹಂತಕರು ಇಬ್ಬರ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಆತ ಉಳಿಯೋದು ಡೌಟ್ ಎನ್ನಲಾಗಿದೆ.
ದಾಳಿಯಲ್ಲಿ ಅಭಿ (28) ಅಲಿಯಸ್ ಟಿಬೆಟ್ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಮನೋಜ್ (32) ಅಲಿಯಸ್ ಪ್ಯಾಚ್ ಎಂಬ ರೌಡಿಶೀಟರ್ ಸ್ಥಿತಿ ಗಂಭೀರವಾಗಿದೆ. ತುಮಕೂರು ಔಟರ್ ರಿಂಗ್ ರಸ್ಥೆ, ಎಸ್ ಎಚ್ ಕೆ ಲಾಡ್ಜ್ ಹಿಂಬಾಗದಲ್ಲಿ ಈ ಹತ್ಯೆ ನಡೆದಿದ್ದು, ಜಾಸ್ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ ತುಮಕೂರಿನ ಕ್ಯಾತಸಂದ್ರ ಮೂಲದ ಅಭಿ ಸ್ನೇಹಿತನ ಬರ್ತ್‌ಡೇಗೆ ತೆರಳಿದ್ದ.
ರಾತ್ರಿ ಸುಮಾರು 10.30ಕ್ಕೆ ವಾಪಸ್ ಮನೆಗೆ ಬರುವಾಗ ಅಭಿಯನ್ನು ರಸ್ತೆಯಲ್ಲಿ ಅಟ್ಯಾಕ್ ಮಾಡಿರುವ ಹಂತಕರು, ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಹಾಗಾಗಿ ಅಭಿಗೆ ಗಂಭೀರ ಗಾಯವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಮನೋಜ್ ಅಲಿಯಾಸ್ ಪ್ಯಾಚ್ ಎಂಬುವವನ ಮೇಲೆ ಹಂತಕರು ಬಲೆ ಬೀಸಿದ್ದಾರೆ. ಅವನಿಗೂ ಗಂಭೀರ ಗಾಯವಾಗಿದ್ದು, ಅವನು ಉಳಿಯೋದು ಡೌಟ್ ಎಂದು ವೈದ್ಯರು ಹೇಳಿದ್ದಾರೆ.
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಾರು ಯಾಕೆ ಮರ್ಡರ್ ಮಾಡಿದ್ದಾರೆಂದು ಪೊಲೀಸರು ತನಿಖೆ ನಡೆಸಿದ್ದಾರೆ.


