Friday, November 21, 2025

Latest Posts

Tumakuru: ಕಲ್ಪೋತ್ಸವ ನಾಡಹಬ್ಬದ ಪ್ರಯುಕ್ತ ವಿವಿಧ ಕಲಾತಂಡದೊಂದಿಗೆ ಅದ್ದೂರಿ ಜಂಬೂಸವಾರಿ ಮೆರವಣಿಗೆ.

- Advertisement -

Tumakuru News: ತಿಪಟೂರು: ಕಲ್ಪತರು ನಾಡ ಹಬ್ಬ ಗಣೇಶೋತ್ಸವ ಅಂಗವಾಗಿ ನಡೆಯುತ್ತಿರುವ ಕಲಾಕೃತಿ ವೇದಿಕೆಯ ಕಲ್ಪೋತ್ಸವ ಜಂಬೂಸವಾರಿಗೆ ಶಾಸಕರಾದ ಕೆ ಷಡಕ್ಷರಿ ಅವರು ಚಾಲನೆ ನೀಡಿದರು.

ಶ್ರೀ ಕೆಂಪಮ್ಮ ದೇವಾಲಯದಿಂದ ಹೊರಟ ಜಂಬೂ ಸವಾರಿ ದೊಡ್ಡಪೇಟೆ ಮಾರ್ಗವಾಗಿ ತಿಪಟೂರಿನ ಮುಖ್ಯ ರಸ್ತೆಯ ಮೂಲಕ ಸಾಗಿ ಕಲ್ಪತರು ಕ್ರೀಡಾಂಗಣದ ವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ವೈಭವ ಬೆಳ್ಳಿ ರಥೋತ್ಸವ, ಲಿಂಗದ ವೀರರ ಕುಣಿತ ಡೊಳ್ಳು ಕುಣಿತ, ತಮಟೆವಾದ್ಯ, ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಏನೇ ಆಗಲಿ ಈ ವರ್ಷ ಪ್ರಖ್ಯಾತ ವೈದಾರದ ಡಾ. ಶ್ರೀಧರ್ ಅವರ ನೇತೃತ್ವದಲ್ಲಿ ಕಲ್ಪೋತ್ಸವ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಅದ್ದೂರಿಯಾಗಿ ನಡೆಯುತ್ತಿರುವುದು ತುಂಬಾ ಸಂತಸದ ವಿಷಯ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಸಂದರ್ಭದಲ್ಲಿ ಶಾಸಕರಾದ ಕೆ.ಷಡಕ್ಷರಿ, ವೈದ್ಯರಾದ ಡಾ.ಶ್ರೀಧರ್,  ಉಪ ವಿಭಾಗಅಧಿಕಾರಿಗಳಾದ ಸಪ್ತಶ್ರೀರವರು .ತಹಸೀಲ್ದಾರ್ ಮೋಹನ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಗರಸಭೆ ಆಯುಕ್ತರಾದ ವಿಶ್ವೇಶ್ವರಯ್ಯ ಬದರಗಡೆ, ಡಿವೈಎಸ್ಪಿ ಜಯಲಕ್ಷ್ಮಿರವರು,
ಯುವ ಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ ಕೊಪ್ಪಶಾಂತಪ್ಪ, ಬಜಗೂರು ಮಂಜುನಾಥ್, ಶಿವಕುಮಾರ್ ಮತ್ತಿಘಟ್ಟ, ರಂಗಸ್ವಾಮಿ, ರಮೇಶ್ ಸೇರಿದಂತೆ ಮುಖಂಡರು ಜನಪ್ರತಿನಿಧಿಗಳು ಸಾರ್ವಜನಿಕರು ಭಾಗವಹಿಸಿದ್ದರು.

- Advertisement -

Latest Posts

Don't Miss