Tumakuru: ಸಿಕ್ಕ ಚಿನ್ನವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ: ಎಸ್ಪಿಯಿಂದ ಸನ್ಮಾನ

Tumakuru News: ತುಮಕೂರು: ಈಗ ಚಿನ್ನದ ಬೆಲೆ ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ ಯಾರದ್ದಾದ್ರೂ ಚಿನ್ನ ಕಳೆದು ಹೋದ್ರೆ, ಅದು ಸಿಗೋದು ಡೌಟ್ ಅನ್ನೋ ರೇಂಜ್‌ಗೆ. ಆದರೆ ತುಮಕೂರಿನಲ್ಲಿ ಓರ್ವ ವ್ಯಕ್ತಿ ತನಗೆ ಸಿಕ್ಕ ಚಿನ್ನವನ್ನು, ಪೋಲೀಸರಿಗೆ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾನೆ.

10 ವರ್ಷಗಳಿಂದ ತುಮಕೂರು ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ರಾಜಶೇಖರ್ ಅವರೇ ಈ ರೀತಿಯಾಗಿ ಚಿನ್ನ ಮರಳಿಸಿ, ಪ್ರಾಮಾಣಿಕತೆ ಮೆರೆದವರಾಗಿದ್ದಾರೆ.

ಇವರಿಗೆ ನಿನ್ನೆ ರಸ್ತೆ ಬದಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುವ ವೇಳೆ, ತುಮಕೂರು ನಗರದ ಕೋತಿ ತೋಪಿನಲ್ಲಿ ಚಿನ್ನ ಸಿಕ್ಕಿದೆ. ಬಂಗಾರದ ಮಾಂಗಲ್ಯ ಸರ, ಎರಡು ಬೆಳ್ಳಿ ರಿಂಗ್ ಸಿಕ್ಕಿದ್ದು, ಅದನ್ನ ಕೂಡಲೇ ರಾಜಶೇಖರ್ ಪೋಲೀಸರಿಗೆ ನೀಡದ್ದಾರೆ.

ರಾಜಶೇಖರ್ ಅವರ ಪ್ರಾಮಾಣಿಕತೆ ಮೆಚ್ಚಿದ ತುಮಕೂರು ಎಸ್ಪಿ ಅಶೋಕ್.ಕೆ.ವಿ ಅವರು, ಪ್ರಶಂಸನಾ ಪತ್ರ ನೀಡಿ, ಸನ್ಮಾನಿಸಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಅಂತಾ ಹಣ, ಚಿನ್ನ ದೋಚಿ ಓಡಿ ಹೋಗೋ ಈ ಕಾಲದಲ್ಲಿ ಸತ್ಯಕ್ಕೂ ರಾಜ್‌ಶೇಖರ್ ಅತ್ಯುತ್ತಮರೆನ್ನಿಸುತ್ತಾರೆ.

About The Author