- Advertisement -
Tumakuru News: ತುಮಕೂರು: ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರಿನ ಪಿಎಚ್ ಕಾಲೋನಿ ನಿವಾಸಿ ಮುಜಾಯುದ್ದಿನ್ ನನ್ನು ವಿಚಾರಣೆ ನಡೆಸಲಾಗಿದೆ.
ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ನಡೆದ ಮರುದಿನವೇ ಈತನನ್ನು ತುಮಕೂರಿನಲ್ಲಿ ತಿಲಕ್ ಪಾಕ್೯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಎಎಸ್ಪಿ ಪುರುಷೋತ್ತಮ್ ರಿಂದ ತೀವ್ರ ವಿಚಾರಣೆ ನಡೆದ ಬಳಿಕ ಮುಜಾಯಿದ್ದೀನ್ನನ್ನು ಕಳುಹಿಸಲಾಗಿದೆ.
ಇನ್ನು ಯಾಕೆ ಈತನನ್ನು ವಿಚಾರಣೆಗೆ ಕರೆಸಲಾಗಿದ್ದು ಅಂದ್ರೆ, ಈತ ಕಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ಮಾಡಿದ್ದ. ಈ ಪ್ರಕರಣ ಸಂಬಂಧ ಎನ್ ಐ ಎ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿತ್ತು. ಬಳಿಕ ಆರು ವರ್ಷ ಶಿಕ್ಷೆ ಅನುಭವಿಸಿ ದೆಹಲಿಯ ತಿಹಾರ್ ಜೈನಿಂದ ಹೊರ ಬಂದಿದ್ದ. ಈ ಹಿನ್ನಲೆ ಮುಜಾಯುದ್ದಿನ್ ಗೆ ಖಾಕಿ ಡ್ರಿಲ್ ನಡೆಸಿತ್ತು.
- Advertisement -

