Tuesday, September 23, 2025

Latest Posts

Tumakuru: ಧಾರ್ಮಿಕ ಮಂಟಪ ಉದ್ಘಾಟಿಸಿ ದಸರಾಗೆ ಚಾಲನೆ ನೀಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್

- Advertisement -

Tumakuru: ತುಮಕೂರು: ಕಲ್ಪತರು ನಾಡ ಹಬ್ಬ ತುಮಕೂರು ದಸರಾಗೆ ಡಾ.ಜಿ.ಪರಮೇಶ್ವರ್ ಅವರು ಅದ್ಧೂರಿ ಚಾಲನೆ ನೀಡಿದ್ದಾರೆ. ತುಮಕೂರಿನ ಜೂನಿಯರ್ ಕಾಲೇ ಮೈಧಾನದಲ್ಲಿ ನಿರ್ಮಾಣಗೊಂಡಿರುವ ಭವ್ಯ ದಸರಾ ಧಾರ್ಮಿಕ ಮಂಟಪವನ್ನು ಡಾ.ಜಿ.ಪರಮೇಶ್ವರ್ ಅವರು ಉದ್ಘಾಟಿಸುವ ಮೂಲಕ, ದಸರಾಗೆ ಚಾಲನೆ ನೀಡಿದ್ದಾರೆ.

ಈ ದಸರಾ ಧಾರ್ಮಿಕ ಮಂಟಪವನ್ನು ಅಂಬಾವಿಲಾಸ ಅರಮನೆಯಂತೆ ನಿರ್ಮಿಸಲಾಗಿದೆ. ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ದಸರಾ ಧಾರ್ಮಿಕ ಮಂಟಪ ಇದಾಗಿದ್ದು, ಇಲ್ಲಿ ಚಾಮುಂಡೇಶ್ವರಿ ದೇವಿ, ಲಕ್ಷ್ಮೀದೇವಿ ಪ್ರತಿಷ್ಠಾಪಿಸಲಾಗಿದೆ.

ಇಂದು ಪ್ರಥಮ ದಿನ ಶೈಲ ಪುತ್ರಿ ರೂಪದಲ್ಲಿ ದೇವಿ ಅಲಂಕೃತಳಾಗಿದ್ದಾಳೆ. ಪೂಜೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಎಲೆರಾಂಪುರ ಮಠದ ಹನುಮಂತ ನಾಥ ಸ್ವಾಮೀಜಿ ಭಾಗಿಯಾಗಿದ್ದು, ಬಳಿಕ ಧಾರ್ಮಿಕ ಮಂಟಪದಲ್ಲಿ ನಡೆದ ಹೋಮದಲ್ಲಿ ಭಾಗಿಯಾದರು. ಡಾ ಜಿ ಪರಮೇಶ್ವರ್‌ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರ್ ಸೇರಿ, ಲಕ್ಷೀ ಹೋಮ, ಸರಸ್ವತಿ ಹೋಮ, ಗಣಪತಿ ಹೋಮ, ಲಕ್ಷ್ಮೀ ನಾರಾಯಣ ಹೋಮ ನೆರವೇರಿಸಿದರು.

ಕೇಂದ್ರ ಸಚಿವ ವಿ ಸೋಮಣ್ಣ, ಮಾಜಿ ಸಚಿವ ಕೆ ಎನ್ ರಾಜಣ್ಣ, ಪತ್ನಿ ಶಾಂತಲಾ ರಾಜಣ್ಣ, ಶಾಸಕರಾದ ಸುರೇಶ್ ಗೌಡ, ಜ್ಯೋತಿಗಣೇಶ್ , ಸುರೇಶ್ ಬಾಬು, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಓ ಪ್ರಭು ಜಿ, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ, ಎಸ್ಪಿ ಅಶೋಕ್ ಕೆ ವಿ ಹಲವರು ಪೂಜೆಯಲ್ಲಿ ಭಾಗಿಯಾಗಿದ್ದರು..

ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಡಾ.ಜಿ.ಪರಮೇಶ್ವರ್, ಮತ ಕಳ್ಳತನ ತನಿಖೆಗೆ ಎಸ್ಐಟಿ ರಚನೆ ವಿಚಾರದ ಬಗ್ಗೆ ಹೇಳಿಕೆ ನೀಡಿದರು. ಚುನಾವಣೆಯಲ್ಲಿ ಅಕ್ರಮವಾಗುತ್ತಿದೆ ಮತ ಕಳ್ಳತನ ಮತಗಳನ್ನು ಬೇರೆ ಬೇರೆ ಮಾಡಲಾಗುತ್ತಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಈ ವಿಚಾರವಾಗಿ ದೇಶಾದ್ಯಂತ ಹೋರಾಟಕ್ಕೆ ಇಳಿದಿದ್ದಾರೆ.

ಕಳೆದ ಚುನಾವಣೆಯಲ್ಲಿ ಮಹಾದೇವಪುರದಲ್ಲಿ ನಡೆದ ಮತ ವಿಚಾರವನ್ನು ಇಡೀ ದೇಶಕ್ಕೆ ತಿಳಿಸಿದ್ದಾರೆ. ಚುನಾವಣಾ ಅಕ್ರಮದ ಬಗ್ಗೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮಾಜಿ ಸಚಿವರು ಶಾಸಕರು , ಮಾಜಿ ಶಾಸಕರು ಹೋರಾಟಕ್ಕೆ ಇಳಿದಿದ್ದಾರೆ. ಉದಾಹರಣೆಗೆ ಕರ್ನಾಟಕದ ಅಳಂದ ಕ್ಷೇತ್ರದಲ್ಲಿ 6000 ಮತಗಳು ಅಕ್ರಮ ಆಗಿದೆ ಅನ್ನು ವಿಚಾರ ಎಲ್ಲರಿಗೂ ತಿಳಿದಿದೆ.

ರಾಹುಲ್ ಗಾಂಧಿ ಅವರು ಕೂಡ ಈ ವಿಚಾರವನ್ನು ದೇಶದ ಗಮನ ಸೆಳೆದಿದ್ದಾರೆ. ಈ ವಿಚಾರವನ್ನು ತನಿಖೆ ಮಾಡುವಂತೆ ಜನರಿಂದ ಹಾಗೂ ಸ್ಥಳೀಯರಿಂದ ಒತ್ತಾಯ ಬಂದಿದೆ. ಬೇರೆ ಬೇರೆ ಸಮುದಾಯದಲ್ಲಿ ತನಿಖೆಗೆ ಒತ್ತಾಯ ಕೇಳಿ ಬಂದಿದೆ. ಇದರ ಸತ್ಯಾಸತ್ಯತೆ ತಿಳಿಯಲು ರಾಜ್ಯದ ಮುಖ್ಯಮಂತ್ರಿಗಳು ಎಸ್ಐಟಿ ರಚನೆ ಮಾಡಿದ್ದಾರೆ. ಡಿಕೆ ಸಿಂಗ್ ಅವರಿಗೆ ಇದರ ತನಿಖೆಗೆ ವಹಿಸಲಾಗಿದೆ. ಆದಷ್ಟು ಶೀಘ್ರ ವರದಿ ನೀಡುವಂತೆ ತಿಳಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

- Advertisement -

Latest Posts

Don't Miss