Tumakuru: ತಿಪಟೂರು: ತಿಪಟೂರಿನಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಜಾತಿ ಗಣತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಜಾತಿ ಗಣತಿ ಸಮಯದ ಒಳಗೆ ಮುಗಿಯಬಹುದು ಇಲ್ಲದೆ ಹೋದರೆ ಸರ್ಕಾರ ಅವಶ್ಯಕತೆ ಬಿದ್ದರೆ ಮುಂದೂಡಲಿದ್ದಾರೆ. ಜಾತಿ ಗಣತಿ ತಿಪಟೂರಿನಲ್ಲಿ 30% ಮಗಿದಿದೆ ಎಂದಿದ್ದಾರೆ.
ನವೆಂಬರ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಶಾಸಕರು, ನನ್ನ ಡಿಮ್ಯಾಂಡ್ ಹಳೆ ಮೈಸೂರು ಭಾಗದಲ್ಲಿ ನಾನು ಮತ್ತು ಮಹದೇವ ಪ್ರಸಾದ್ ಅವರ ಮಗ ಗಣೇಶ್ ಪ್ರಸಾದ್ ಇದ್ದೇವೆ. ನಾನು 45 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದೇನೆ ಹಿಂದೇನು ಒಂದು ಸರಿ ನನ್ನ ಹೆಸರು ಅನೌನ್ಸ್ ಮಾಡಿ ನನ್ನ ಕೈ ಬಿಟ್ಟಿದ್ದರು. ಈ ಸರಿ ನನಗೆ ಸಚಿವ ಸ್ಥಾನ ನೀಡುತ್ತಾರೆ ಎಂದು ನಂಬಿಕೆ ಇದೆ. ನಾನು ಒಬ್ಬ ಅಕಾಂಕ್ಷಿ ಎಂದು ಷಡಕ್ಷರಿ ಸಚಿವರಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಮಾತನಾಡಿರುವ ಷಡಕ್ಷರಿ, ನಾನು ಎಲ್ಲರ ಹತ್ತಿರ ಚೆನ್ನಾಗಿದ್ದೇನೆ. ಹೈಕಮಾಂಡ್ ಯಾರು ಹೆಸರು ಹೇಳುತ್ತಾರೆ ಅದಕ್ಕೆ ನನ್ನ ಸಹಮತ ಇದೆ ಎಂದಿದ್ದಾರೆ.
ತುಮಕೂರಿಗೆ ನಿಗಮ ಮಂಡಳಿಯಲ್ಲಿ ಅನ್ಯಾಯವಾಗಿದೆ ಇದರ ಬಗ್ಗೆ ನಿಗಮಗಳಲ್ಲಿ ಅಧಕ್ಯ ಸ್ಥಾನ ಮಾತ್ರ ಘೋಷಣೆ ಮಾಡಿದ್ದರೆ ಮುಂದಿನ ದಿನಗಳಲ್ಲಿ ಅನ್ಯಾಯ ಏನು ಆಗಲ್ಲ. ಎಲ್ಲ ಸರಿಪಡಿಸುತ್ತಾರೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದ್ದಾರೆ.




