Tumakuru News: ತುಮಕೂರು: ಬಿಹಾರ್ ಎಲೆಕ್ಷನ್ ಬಳಿಕ ರಾಜ್ಯ ರಾಜಕಾರಣ ಬದಲಾವಣೆ ವಿಚಾರದ ಬಗ್ಗೆ ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಮಾತನಾಡಿದ್ದು, ರಾಜಕಾರಣ ಎಂಬುದು ನಿಂತ ನೀರಲ್ಲ. ಅದು ಯಾವಾಗಲು ಚಲನಾಶೀಲತೆ ಹೊಂದಿರುವಂತಹದ್ದು ಎಂದಿದ್ದಾರೆ.
ಅಲ್ಲದೇ, ಆ ಚಲನಾಶೀಲತೆ ಹೊಂದಿರುತಕ್ಕಂತೆ, ನಮ್ಮ ರಾಜ್ಯದಲ್ಲಿ ಬದಲಾವಣೆಗಳು ಆಗುಹೋಗುಗಳು ಆಗ್ತವರ. ಬೇರೆ ರಾಜ್ಯದಲ್ಲೂ ಆಗುವುದಿಲ್ಲ ಅಂತೇನಿಲ್ಲ. ಬದಲಾವಣೆ ರಾಜಕಾರಣದಲ್ಲಿ ಆಗೋದಿಲ್ಲ ಅಂತಿಲ್ಲ. ನಮ್ಮ ರಾಜ್ಯದಲ್ಲಿ ಬದಲಾವಣೆಗಳು ಸಾಧ್ಯತೆ ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಹೈಕಮಾಂಡ್ ನಾಯಕರ ಭೇಟಿ ಮಾಡ್ತಿರಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಜಣ್ಣ, ನಾನು ಹೈಕಮಾಂಡ್ ಮುಖಂಡರಿಗೆ ಪತ್ರ ಬರೆದಿದ್ದೇನೆ. ಇವತ್ತು ನಾಳೆ ಕೂಡ ಪತ್ರ ಬರೀತೀನಿ. ಅವಕಾಶ ಕೇಳಿ ಪತ್ರ ಬರೀತೀನಿ. ಅವರು ಬಿಹಾರ್ ಎಲೆಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ ಹಾಗಾಗಿ ಅವಕಾಶ ಕೊಟ್ಟಿಲ್ಲ. ಅವರು ಸಮಯ ಕೊಟ್ಟು ನಾಳೆ ಬಂದ್ರಿ ಅಂದ್ರೆ ನಾಳೆನೇ ಹೋಗ್ತೀನಿ. ಅವರು ಯಾವಾಗ ಸಮಯ ಕೊಡ್ತಾರೋ ಅವಾಗ ದೆಹಲಿಗೆ ಹೋಗ್ತೀನಿ. ನಾನು ಹಿಂದೆ ನಡೆದ ಘಟನೆ ಬಗ್ಗೆ ಸಂಪೂರ್ಣವಾದ ವಿವರವುಳ್ಳ ಪತ್ರವನ್ನು ಕಳಿಸಿದ್ದೇನೆ.
ಮೇಲ್ ಮೂಲಕ ಮತ್ತು ಹಾರ್ಡ್ ಕಾಪಿಯನ್ನು ಕೂಡ ಕಳಿಸಿದ್ದೇನೆ. ಈಗ ನಾನು ಅವ್ರ್ನ ಭೇಟಿ ಮಾಡೋದಕ್ಕೆ ಸಮಯ ಕೇಳಿದ್ದೇನೆ. ನಾನು ಕೇಳಿರೋದು ಯಾವುದೇ ಮಂತ್ರಿ ಕೆಲಸ ಕೊಡಿ ಅಂತ ಅಲ್ಲ. ಕೇಂದ್ರದಲ್ಲಿ ಏನೋ ಒಂದು ತಪ್ಪು ಅಭಿಪ್ರಾಯ ಮೂಡಿದೆ ಅದನ್ನ ಕ್ಲಿಯರ್ ಮಾಡ್ಲಿಕ್ಕೆ ಒಂದ್ ಸಮಯ ಕೇಳಿದ್ದೇನೆ. ನಾನು ಈ ಹಿಂದೆ ಬರೆದಿರುವ ಪತ್ರವನ್ನು ಅವರು ನೋಡಿದಾರೋ ಇಲ್ವೋ ಗೊತ್ತಿಲ್ಲ. ಇನ್ನು ಅವರ ಕಡೆಯಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ. ಅವರು ಬಿಹಾರ್ ಎಲೆಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಹೈಕಮಾಂಡ್ ನಿಂದ ಒಂದು ಒಳ್ಳೆ ನಿರ್ಧಾರ ಸಿಗಬಹುದು ನಿರೀಕ್ಷೆಯಲ್ಲಿದ್ದೇನೆ ಎಂದು ರಾಜಣ್ಣ ಹೇಳಿದ್ದಾರೆ.
ಇನ್ನು ದೆಹಲಿಯಲ್ಲಿ ಕಾರು ಸ್ಪೋಟ ಪ್ರಕರಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಜಣ್ಣ, ಈ ಹಿಂದೆ ಆಗಿರುವಂತಹ ಬಾಂಬ್ ಬ್ಲಾಸ್ಟ್ ಗಳ ಬಗ್ಗೆ ಹೆಚ್ಚಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನವಂಬರ್ ಈ ತಿಂಗಳುಗಳಲ್ಲಿ ಹೆಚ್ಚಾಗಿ ಸ್ಪೋಟ ಆಗಿವೆ. ಈ ಬಾರಿ ಬಹಳಷ್ಟು ಜನ ಸತ್ತು ಹೋಗಿದ್ದಾರೆ ಕೆಲವು ಬಾರಿ ಕಡಿಮೆ ಜನ ಸತ್ತಿದ್ದಾರೆ. ಇದು ನಿರಂತರವಾಗಿ ನಡಿತಾ ಇರುವಂತಹ ಒಂದು ವ್ಯವಸ್ಥೆಯ ಸಂಚು ಎಂದು ಹೇಳಿದ್ದಾರೆ.
ತುಂಬಾ ಶಕ್ತಿಯುತವಾದ ಅಂತಹ ಭಯೋತ್ಪಾದಕ ಸಂಸ್ಥೆಗಳಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಐಇಡಿ ಬೇಕಾದಂತಹ ವಸ್ತುಗಳನ್ನ ಒಂದೇ ದಿನದಲ್ಲಿ ಸಂಗ್ರಹ ಮಾಡಲಿಕ್ಕೆ ಸಾಧ್ಯವಾಗೋದಿಲ್ಲ. ಇದೊಂದು ದೀರ್ಘಕಾಲದ ಸಂಚು. ಬಹಳ ವರ್ಷಗಳಿಂದ ಈ ರೀತಿಯಾಗಿ ಮಾಡಬೇಕು ಅನ್ನುವಂತದ್ದನ್ನ ಪ್ಲಾನ್. ಇದನ್ನ ನಮ್ಮ ಇಂಟೆಲಿಜೆನ್ಸ್ ಫೇಲ್ಯೂರ್ ಅಂತ ಹೇಳಬಹುದು ತಪ್ಪೇನು ಆಗಲ್ಲ. ಹರಿಯಾಣ ಹಾಗೂ ಶ್ರೀನಗರದಲ್ಲಿ ಸಾಕಷ್ಟು ಸ್ಪೋಟಕ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಸ್ಪೋಟಕಗಳನ್ನ ಅಲ್ಲಿ ಸೀಜ್ ಮಾಡಿದ್ದಾರೆ. ದೆಹಲಿಯಲ್ಲಿ ಇಂಟೆಲಿಜೆನ್ಸಿ ಫೇಲ್ಯೂರು ಇದೆ ಅಂತ ಹೇಳಬಹುದು.
ಇದು ಚುನಾವಣೆ ಸಂದರ್ಭದಲ್ಲಿ ಅಂತೇನಿಲ್ಲ, ಹಿಂದೆ ಸಾಕಷ್ಟು ಬಾರಿ ಸೆಪ್ಟಂಬರ್ ಅಕ್ಟೋಬರ್ ತಿಂಗಳಿನಲ್ಲೇ ನಡೆದಿದೆ ಈ ರೀತಿಯ ಸ್ಫೋಟಗಳು. ದೆಹಲಿಯಲ್ಲಿ ಆಗಿರುವಂತಹ ಬಹುತೇಕ ಬ್ಲಾಸ್ಟ್ಗಳು ಈ ತಿಂಗಳುಗಳಲ್ಲಿ ಆಗಿರುವಂತದ್ದು. ದೆಹಲಿಯ ಪೋರ್ಟ್ ಹತ್ರ ಇದು ಎರಡನೆಯ ಬ್ಲಾಸ್ಟ್. ಇದನ್ನ ನಾವೆಲ್ರೂ ಕೂಡ ಕಂಡಿಸ್ತೀವಿ. ಯಾರು ಇದರಲ್ಲಿ ಭಾಗಿಯಾಗಿದ್ದಾರೆ, ಅವರಿಗೆ ಕಠಿಣ ಶಿಕ್ಷೆ ಆಗಬೇಕು, ನೊಂದವರಿಗೆ ಪುನರ್ವಸತಿ ಹಾಗೂ ಪರಿಹಾರ ಸಿಗಬೇಕು ಎಂದು ರಾಜಣ್ಣ ಆಗ್ರಹಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಮೊಬೈಲ್ ಬಳಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿರುವ ರಾಜಣ್ಣ, ಇದರ ಬಗ್ಗೆ ಹೋಂ ಮಿನಿಸ್ಟರ್ ಹೇಳಿರುವುದನ್ನ ನಾನು ಕೇಳಿದ್ದೇನೆ. ಇದು ಬಹಳ ಹಿಂದೆ ಮಾಡಿರುವಂತಹ ವಿಡಿಯೋ ಅಂತ ಹೇಳಿದ್ದಾರೆ. ತಪ್ಪು ಇವತ್ತೇ ಮಾಡಿರಲಿ ಅಥವಾ ಬಹಳ ಹಿಂದೆ ಮಾಡಿರಲಿ ತಪ್ಪು ತಪ್ಪೇ. ಹಿಂದೆ ಮಾಡಿರುವಂತದ್ದಾಗಿದ್ರೆ ಅದು ಯಾವತ್ತೂ ಮಾಡಿದ್ದಾರೆ ಅಂತ ಹೇಳಿ ಚೆಕ್ ಮಾಡಿ. ಅವತ್ತು ಯಾರು ಅಧಿಕಾರಿಗಳಿದ್ದರೂ ಏನು ಅಂತ ಚೆಕ್ ಮಾಡಿ. ಅದನ್ನೆಲ್ಲಾ ಹಿಡಿಯೋದೇನು ಕಷ್ಟ ಇಲ್ಲ. ಊಟ ತೆಗೆದುಕೊಂಡು ಹೋಗೋ ಬಾಕ್ಸ್ ಅಲ್ಲಿ ಅದನ್ನೆಲ್ಲ ಕೆಳಗಡೆ ಇಟ್ಟು ಕೊಡುವಂತದ್ದು ಇದೆ. ಜೈಲಲ್ಲಿ ಕೆಲಸ ಮಾಡೋ ಕೆಲ ಅಧಿಕಾರಿಗಳು ಬೇರೆ ಬೇರೆ ಆಸೆಗಳಿಗೆ ಒಳಗಾಗಿರುತ್ತಾರೆ. ಸರ್ಕಾರದಲ್ಲಿ ಆಡಳಿತ ಮಾಡುವಂತವರು ಇದನ್ನೆಲ್ಲಾ ಸರಿಯಾಗಿ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಈಗ ಎಲ್ಲರನ್ನ ಸಸ್ಪೆಂಡ್ ಮಾಡಿದ್ದಾರೆ ಮುಂದೆ ನೋಡೋಣ ಏನ್ ಮಾಡ್ತಾರೆ ಎಂದು ಮಾಜಿ ಸಚಿವ ರಾಜಣ್ಣ ಹೇಳಿದ್ದಾರೆ.


