Tumakuru: ತುಮಕೂರು: ತುಮಕೂರಿನಲ್ಲೂ ದಸರಾ ಧಾರ್ಮಿಕ ಮಂಟಪ ಉದ್ಘಾಟನೆ ಮಾಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ಇಂದು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾಧ್ಯಮದ ಜತೆ ಮಾತನಾಡಿರುವ ಪರಮೇಶ್ವರ್, ಇವತ್ತು ಎರಡನೇ ದಿವಸದ ಪೂಜೆಯಲ್ಲಿ ನಾನು ಮತ್ತು ನನ್ನ ಶ್ರೀಮತಿಯವರು ಭಾಗವಹಿಸಿದ್ದೇವೆ. ಬಹಳ ಯಶಸ್ವಿಯಾಗಿ ಪೂಜಾ ಕಾರ್ಯಗಳು ನಡೆದಿವೆ. ಇವತ್ತು ಎರಡನೇ ದಿನದ ಅಲಂಕಾರ ಚಾಮುಂಡೇಶ್ವರಿಗೆ ಮಾಡಲಾಗಿದೆ. ನಮ್ಮ ಸಂಪ್ರದಾಯದಂತೆ ಚಾಮುಂಡೇಶ್ವರಿಗೆ ಭುವನೇಶ್ವರಿಗೆ ವಿಧವಿಧವಾದ ಅಲಂಕಾರವನ್ನ ಮಾಡಿ ಪೂಜೆ ಮಾಡೋದು ಸಂಪ್ರದಾಯ. ಚಾಮುಂಡೇಶ್ವರಿ ತಾಯಿ ಎಲ್ಲರಿಗೂ ಸನ್ಮಂಗಳ ಕೊಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದಲ್ಲಿ ಸುಭಿಕ್ಷವಾಗಿ ಮಳೆ, ಬೆಳೆ ಆಗಲಿ ಜನರಿಗೆ ಎಲ್ಲರೂ ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.
ನಿನ್ನೆ ದಿವಸ ಮೈಸೂರಿನಲ್ಲಿ ಶಾಸ್ತ್ರೋಕ್ರವಾಗಿ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ತಾಯಿ ಚಾಮುಂಡೇಶ್ವರಿಗೆ ಇಡೀ ರಾಜ್ಯಕ್ಕೆ ಸನ್ಮಂಗಳವನ್ನ ಕೊಡಲಿ ಅಂತ ರಾಜ್ಯ ಮುಖ್ಯಮಂತ್ರಿಗಳು, ಹಾಗೂ ಭಾನು ಮುಸ್ತಾಕ್ ಅವ್ರು ಉದ್ಘಾಟನೆ ಮಾಡಿದ್ದಾರೆ. ಬಹಳ ದಿನಗಳಿಂದ ಒಂದು ಗೊಂದಲ ಇತ್ತು. ಆ ಗೊಂದಲ ನಿವಾರಣೆ ಆಗಿದೆ. ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿ ಪೂಜಾ ಕೆಲಸವನ್ನ ಮಾಡಿದ್ದಾರೆ. ದೇವರು ಎಲ್ಲರಿಗೂ ಸೇರುವಂತಹದ್ದು, ಮತ್ತು ದೇವರ ಆಶಿರ್ವಾದ ಎಲ್ಲರಿಗೂ ಬೇಕಾಗಿರುವಂತಹದ್ದು. ಎಲ್ಲ ಧರ್ಮಗಳು ಅದನ್ನೆ ಕೇಳೋದು ಎಂದು ಪರಮೇಶ್ವರ್ ಹೇಳಿದ್ದಾರೆ.
ಯಾವುದೇ ಧರ್ಮದಲ್ಲಿ ಇದ್ರು ನಮಗೆ ಒಳ್ಳೆದು ಮಾಡಲಿ ಅಂತ ಕೇಳ್ತಿವೋ ಹೊರತು ಕೆಟ್ಟದ್ದು ಮಾಡಿ ಅಂತ ಕೇಳೋಲ್ಲ. ಮನಃಶಾಂತಿ ಕೊಡಿ, ಶಾಂತಿಯಿಂದ ಬಾಳಲು ಅವಕಾಶ ಕೊಡಿ ಅಂತ ಕೇಳೊದು ಸಹಜ. ನಮಗೆ ವ್ಯತ್ಯಾಸಗಳಿಲ್ಲದೇ ಭಾವನೆಗಳಿಲ್ಲದೇ ಇವತ್ತು ಮೈಸೂರು ದಸರಾದಲ್ಲಿ ಮುಖ್ಯಮಂತ್ರಿಗಳು ಮಾಡಿದ್ದಾರೆ. ಇದು ನಾಡಿಗೆ ಒಂದು ಮಾದರಿಯಾಗ್ತದೆ ಅಂತ ನಾನು ಭಾವಿಸುತ್ತೇನೆ.
ಹಿಂದೂ ಧರ್ಮದ ಮೂಲ ಮಂತ್ರ. ಹಾಗಾಗಿ ಸಂವಿಧಾನಾತ್ಮಕವಾಗಿ ಹಾಗೂ ಧಾರ್ಮಿಕವಾಗಿ ಯೋಚನೆ ಮಾಡಿದಾಗಲು ಅದೇ ಬರುತ್ತೆ. ಎಲ್ಲ ಧರ್ಮಗಳ ಸಾರಾಂಶ ಒಂದೇ ಇರೋದ್ರಿಂದ ನಮ್ಮ ಸಂವಿಧಾನದಲ್ಲಿ ಹೇಳಿದ್ದಾರೆ, ಅದು ಇವತ್ತು ಮೈಸೂರಿನಲ್ಲಿ ನಡೆದಿದೆ. ಇದು ಇಡೀ ದೇಶಕ್ಕೆ ಒಂದು ಮಾದರಿ ಅಂತ ನಾನು ಅಂದುಕೊಳ್ತೆನೆ.
ನಾನು ಮನೆಯಲ್ಲಿ ಏನು ಪೂಜೆ ಮಾಡಲ್ಲ. ನಮ್ಮ ಶ್ರೀಮತಿಯವ್ರು ಮಾಡ್ತಾರೆ. ಆದರೆ ಇವತ್ತು ಬ್ರಹ್ಮಚಾರ್ಯ ರೂಪ ಇರುವಂತಹ ತಾಯಿಗೆ ಅಲಂಕಾರ ಮಾಡಿ ಪೂಜೆ ಮಾಡಿದ್ದೇವೆ. ಕೆಂಪು ಬಣ್ಣ ಬಹಳ ಇಷ್ಟ ಅಂತ ಒಂದು ಪದ್ದತಿ ಇದೆ. ಹಾಗಾಗಿ ಇವತ್ತು ನಮ್ಮ ಸಹೋದರಿಯರು ತಾಯಂದಿರು ಕೆಂಪು ಬಣ್ಣದ ಸೀರೆ ಹಾಕೊಂಡು ಬಂದಿದ್ದಾರೆ. ಎಲ್ಲರಿಗೂ ಒಳ್ಳೆದು ಮಾಡಲಿ ಅಂತ ಪ್ರಾರ್ಥನೆ ಮಾಡ್ತಿನಿ ಎಂದಿದ್ದಾರೆ. ಸಚಿವ ಸಂಪುಟ ಬದಲಾವಣೆ ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಪರಮೇಶ್ವರ್ ಆ ಬಗ್ಗೆ ತಮಗೆ ತಿಳಿದಿಲ್ಲ ಎಂದಿದ್ದಾರೆ.
ಜಾತಿಗಣತಿ ವಿಚಾರದಲ್ಲಿ ಸ್ಟೇ ತರಲು ನ್ಯಾಯಾಲಯದ ಮೋರೆಹೋದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದರ ಬಗ್ಗೆ ನನಗೆ ಗೊತ್ತಿಲ್ಲ. ಬಹಳ ಜನ ಕೋರ್ಟ್ ಗೆಲ್ಲಾ ಹೋಗಿದ್ದಾರೆ. ಆದರೆ ತೀರ್ಪು ಏನ್ ಬರುತ್ತೆ ಅನ್ನೋದನ್ನ ಕಾದುನೋಡೋಣಾ ಎಂದಿದ್ದಾರೆ.