Tumakuru: 2028ರಲ್ಲಿ ನಾನು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ: ಕೆ.ಎನ್.ರಾಜಣ್ಣ

Tumakuru News: ತುಮಕೂರು: ತುಮಕೂರಿನಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, 2028ರಲ್ಲಿ ನಾನು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದಿದ್ದಾರೆ.

ವಿರೋಧ ಪಕ್ಷದ ಗಡಿಯಾರ ಟೀಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ವಿರೋಧ ಪಕ್ಷದವರಿಗೆ ವಿರೋಧ ಮಾಡೋಕೆ ಬೇರೆ ವಿಚಾರ ಇಲ್ಲ. ವಾಚ್ ಬಗ್ಗೆ ಊಟಕ್ಕೆ ಹೋದ್ರು ಆರೋಪ ಮಾಡ್ತಾರೆ. ಜ್ವಲಂತ ಸಮಸ್ಯೆ ಬಗ್ಗೆ ಗಮನ ಹರಿಸಲಿ ಅಂತಾ ಮನವಿ ಮಾಡ್ತೀನಿ ಎಂದು ರಾಜಣ್ಣ ಹೇಳಿದ್ದಾರೆ.

ಸಚಿವ ಸ್ಥಾನಕ್ಕೆ ಬೇಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಜಣ್ಣ, ಯಾರೂ ನನ್ನ ಪರವಾಗಿ ಹೋರಾಟ ಮಾಡ್ತಾರೆ ಅವರಿಗೆ ನಾನು ಚಿರಖುಣಿ. ನನಗೆ ಅಧಿಕಾರದ ದಾಹ ಇಲ್ಲ. ನಾನು ಮೊದಲೇ ಹೇಳಿದ್ದೇನೆ ಶಿವಕುಮಾರ್ ಸಿಎಂ ಆದ್ರೆ ಅವರ ಸಂಪುಟದಲ್ಲಿ ಸಚಿವ ಆಗೋಲ್ಲ ಮತ್ತೆ ಅದನ್ನೇ ಹೇಳ್ತೀನಿ. ಯಾರೆಲ್ಲಾ ನನ್ನ ಪರವಾಗಿ ಅಭಿಪ್ರಾಯ ವಿಶ್ವಾಸ ವ್ಯಕ್ತಪಡಿಸ್ತಾರೆ ಅವರಿಗೆ ಆಭಾರಿಯಾಗಿದ್ದೇನೆ. ನಾನು ಯಾವತ್ತು ಅಧಿಕಾರ ಹುಡುಕಿ ಹೋದವನಲ್ಲ. ಅಧಿಕಾರ ಬೇಕು ಅಂತಾ ಸಂಪೂರ್ಣ ಅಪೇಕ್ಷೇ ಪಡೋನು ಅಲ್ಲಾ. ಅಧಿಕಾರ ಬಂದ್ರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೀನಿ.

ನಾನು ಸಚಿವನಾಗಿದ್ದಾಗ ಜಾರಿ ಮಾಡಿದ್ದ ಅಮೆಂಟ್ ಮೆಂಟ್ ಜಾರಿಯಾದ್ರೆ ಸಹಕಾರಿ ಕ್ಷೇತ್ರ ಕ್ರಾಂತಿಯಾಗುತ್ತೆ.
ಸೊಸೈಟಿ ಗಳಲ್ಲೂ ನಾನು ಮೀಸಲಾತಿ ವ್ಯವಸ್ಥೆ ಜಾರಿಮಾಡಿದ್ದೇನೆ. ಇಂತಹ ಹಲವು ಕ್ರಾಂತಿಕಾರಿ ಬದಲಾವಣೆ ತಂದಿದ್ದೇನೆ. ಮತ್ತೆ ಹೇಳ್ತೀನಿ ಡಿಕೆಶಿ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ ನನಗೆ ಸಾಕು ಇನ್ನೋಬ್ಬರಿಗೆ ಅವಕಾಶ ಕೊಡಲಿ ಎಂದು ರಾಜಣ್ಣ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕಾಂಗ್ರೇಸ್ ಕಾರ್ಯಕರ್ತನ ಕೊಲೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ರಾಜಣ್ಣ, ಹಿಂಸೆ ಯಾವತ್ತು ಕಠಿಣವಾದುದು. ಇಂತಹ ದಾಳಿಗಳು ಯಾವುದೇ ಪಕ್ಷದ ಮೇಲೆ ನಡೆಯಬಾರದು. ಇಂತಹ ಕೃತ್ಯಗಳು ಒಪ್ಪುವಂತದಲ್ಲಾ ಎಂದು ರಾಜಣ್ಣ ಹೇಳಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣ ಡಿಕೆ ಬ್ರದರ್ ಗೆ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಆ ವಿಚಾರ ನನಗೂ ಗೊತ್ತಾಗಿದೆ. ಏನಕ್ಕೆ ಕೊಟ್ಟಿದ್ದಾರೆ ಅನ್ನೋ ಮಾಹಿತಿ ನನಗೂ ಇಲ್ಲ. ನೋಟಿಸ್ ಕೊಟ್ಟ ತಕ್ಷಣ ನ್ಯಾಷನಲ್ ಹೆರಾಲ್ಡ್ ಸಂಬಂಧ ಅಂತಾ ಹೇಳೊಕೆ ಆಗೊಲ್ಲ. ಅವರದ್ದು 128 ಇದ್ದಾವೆ ಅದ್ರಲ್ಲಿ ಯಾವುದುಕ್ಕೆ ಕೊಟ್ಟಿದ್ದಾರೆ ಯಾರಿಗೆ ಗೊತ್ತು ಎಂದು ರಾಜಣ್ಣ ಹೇಳಿದ್ದಾರೆ.

ಇಂಡಿಗೋ ವಿಮಾನ ಹಾರಟ ಸ್ಥಗಿತ ವಿಚಾರದ ಬಗ್ಗೆ ಮಾತನಾಡಿರುವ ರಾಜಣ್ಣ, ಇಂಡಿಗೋ ವಿಚಾರವಾಗಿ ಮೋದಿಯವರನ್ನು ಮಾತ್ರ ಬ್ಲೇಮ್ ಮಾಡಬಾರದು. ಬೇರೆ ಆಡಳಿತ ವರ್ಗದವರನ್ನು ಮಾಡಬೇಕು. 8 ಗಂಟೆ ಕೆಲಸದ ಬದಲು 12 ಗಂಟೆ ಕೆಲಸ ಮಾಡಿಸಿದ್ದಾರೆ. 200 ಜನ ಪೈಲೆಟ್ಸ್ ಕೊರತೆ ಇದೆ ಹಾಗಾಗಿ ಸಮಸ್ಯೆ ಉಂಟಾಗಿದೆ ಎಂದು ರಾಜಣ್ಣ ಹೇಳಿದ್ದಾರೆ.

About The Author