Tumakuru: ತುಮಕೂರು: ಕಾಲ್ತುಳಿತದಂತ ಪ್ರಕರಣಗಳ ನಿಯಂತ್ರಣಕ್ಕೆ ದೇಶದಲ್ಲಿ ಕಾನೂನು ಅಗತ್ಯ ಎಂದು ತುಮಕೂರಿನಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಪ್ರತಿಪಾದಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿರುವ ಅವರು, ತಮಿಳು ನಾಡಿನ ಕೂರೂರಿನಲ್ಲಿ ಕಾಲ್ತುಳಿತ ಪ್ರಕರಣ ಉಲ್ಲೇಕಿಸಿ ಪ್ರತಿಕ್ರಿಯೆ ನೀಡಿದ್ದಾರೆ. 40 ಜನ ಸಾವು.. 50 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತಿದ್ದಾರೆ. ಈ ದುಂತರಗಳನ್ನ ತಪ್ಪಿಸಲು ಸಾರ್ವಜನಿಕರ ನಿಯಂತ್ರಣಕ್ಕೆ ಕಾನೂನು ಅನಿವಾರ್ಯ. ನಾವು ಕೂಡ ಕಾನೂನು ತರುವ ಪ್ರಯತ್ನ ಮಾಡಿದ್ದೇವೆ ಇದು ದೇಶಾದ್ಯಂತ ಜಾರಿಗೆ ಬರಲಿ ಎಂದು ಜಯಚಂದ್ರ ಹೇಳಿದ್ದಾರೆ.
ಅವರು 6 ಗಂಟೆಗಳ ಕಾಲ ತಡವಾಗಿ ರ್ಯಾಲಿಗೆ ಹೋದಾಗ ಇಂತಹ ದುರಂತವಾಗಿದೆ. ಸ್ವಾಭಾವಿಕವಾಗಿ ಒಂದು ಕಾನೂನಿನ ಅವಶ್ಯಕತೆ ಇದೆ ಅನಿಸುತ್ತಿದೆ. ಒಬ್ಬರಿಗೋಸ್ಕರ 38 ಜನ ಮೃತಪಟ್ಟಿರೋದು ನಾವು ಎಲ್ಲೂ ನೋಡಿಲ್ಲ. ಈ ಘಟನೆಯನ್ನ ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ನಾವೆಲ್ಲಾ ಮುಂದೆ ದುರಂತ ನಡೆಯದಂತೆ ನೋಡಿಕೊಳ್ಳಬೇಕಿದೆ. ಶಿಸ್ತಿಲ್ಲದ ಆಯೋಜನೆಗಳಿಂದ ಇಂತಹ ಘಟನೆಗಳಿಗೆಲ್ಲಾ ಕಾರಣ ಆಗಲಿದೆ ಎಂದು ಜಯಚಂದ್ರ ಹೇಳಿದ್ದಾರೆ.




