- Advertisement -
Tumakuru News: ತುಮಕೂರು: ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎಂಬ ಕೂಗು ಹೆಚ್ಚಾಗಿದ್ದು, ಇಂದು ತುಮಕೂರಿನಲ್ಲಿ ಮಾತನಾಡಿರುವ ಸಂಜಯ್ ಕುಮಾರ್ ಶ್ರೀಗಳು ಕೂಡ ರಾಜ್ಯದಲ್ಲಿ ದಲಿತ ಸಿಎಂ ಆಗಲಿ ಎಂದಿದ್ದಾರೆ.
ತುಮಕೂರಿನ ಪಾವಗಡದಲ್ಲಿ ಮಾತನಾಡಿರುವ ನಿಡಗಲ್ ಸಂಸ್ಥಾನ ಪೀಠದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಅವರು, ಮಾಜಿ ಸಹಕಾರ ಸಚಿವ ಕೆ.ಎನ್ ರಾಜಣ್ಣರನ್ನ ಪುನರ್ ಸಂಪುಟಕ್ಕೆ ಸೇರಿಸಿಕೊಳ್ಳಲಿ. ಇಂಥವರೇ ಸಿಎಂ ಆಗಬೇಕು ಅಂತಾ ನಾನು ಹೇಳಿಲ್ಲ ಆದರೆ ದಲಿತರು ಆಗಲಿ. ದೇವರಾಜು ಅರಸು ನಂತದ ಕಾಲದಲ್ಲೇ ದಲಿತ ಸಿಎಂ ಆಗಬೇಕಿತ್ತು ಆಗಿಲ್ಲ. ರಾಜಣ್ಣ ಅವರ ಜನರ ಪರ ಸೇವೆಯನ್ನ ಗುರುತಿಸಿ ಹೈಕಮಾಂಡ್ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
- Advertisement -

